ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಿನೆಮಾ


ಕಿರುತೆರೆಯಲ್ಲಿ ಅತ್ಯಂತ ಹೆಚ್ಚು ಪ್ರಚಾರದಲ್ಲಿರುವ "ರಾಧಾಕಲ್ಯಾಣ" ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿರುವ ರಾಧಾ ಖ್ಯಾತಿಯ ಕೃತಿಕಾ ಮಲೆನಾಡ ಹುಡುಗಿ.ಸಾಗರದ ಅನಂತ ಪುರದ ಈ ಹುಡುಗಿ ಇಂದೀಗ ಮನೆ ಮಾತಾಗಿದ್ದಾಳೆ. ತನ್ನ ಅದ್ಭುತ ನಟನೆ, ಭಾವಪೂರ್ಣವಾದ ಅಭಿನಯದ ಮೂಲಕ ಪಾತ್ರಕ್ಕೆ ಜೀವತುಂಬಿದ ಈಕೆ ಈ ಕನಸು.ಕಾಂನೊಂದಿಗೆ ತನ್ನ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾಳೆ... ಕಿರು ತೆರೆಯಿರಬಹುದು , ಒಟ್ಟಾರೆಯಾಗಿ ಚಿತ್ರರಂಗದಲ್ಲಿ ರಾಜಕೀಯಗಳು ಜಾಸ್ತಿಯಾಗಿವೆ. ಕಾಲೆಳೆಯು ಪ್ರಕ್ರಿಯೆ ಈ ರಂಗವನ್ನೂ ಬಿಟ್ಟಿಲ್ಲ. ಇಲ್ಲಿ "ಪ್ರತಿಷ್ಠೆ"ಯೇ ಪ್ರಾಮುಖ್ಯವಾಗಿ ಹೋಗುತ್ತಿದೆ ಎನ್ನುತ್ತಾರೆ.

ಟಿ.ವಿ.ಧಾರಾವಾಹಿಗಳಿಗಿಂತ ಸಿನೆಮಾ ನಟನೆ ಉತ್ತಮವಲ್ಲವೇ...?
ನನ್ನ ಪ್ರಕಾರ ಸೀರಿಯಲ್ ಉತ್ತಮ. ಇಲ್ಲಿ ಬೆಳೆಯೋದಕ್ಕೆ ಅವಕಾಶವಿದೆ. ಸಿನೆಮಾದಲ್ಲಿ ಅಷ್ಟು ಇಲ್ಲ ಅಂತ ನನ್ನ ಅನಿಸಿಕೆ. ಸಿನೆಮಾದಲ್ಲಿ ಕೇವಲ ಮೂರುಗಂಟೆಯಲ್ಲಿ ನಾವು ಕಾಣಿಸಿಕೊಳ್ಳಬೇಕಾಗುತ್ತದೆ. ಆದರೆ ಟಿ.ವಿ ಧಾರಾವಾಹಿಗಳಲ್ಲಿ ಪ್ರತಿದಿನ ಎಂಬಂತೆ ಜನತೆಯೆದುರು ತೆರೆದುಕೊಳ್ಳಲು ಸಾಧ್ಯವಿದೆ.

ಕಿರುತೆರೆ ಕ್ಷೇತ್ರ ಹೇಗನಿಸಿತು...?
ಇದು ಒಂಥಾರಾ ಇಂಡೈರೆಕ್ಟ್ "ಹಿಟ್" ನಡೆಸೋ ಕ್ಷೇತ್ರ. ರಾಜಕೀಯ ಈ ಕ್ಷೇತ್ರವನ್ನೂ ಬಿಟ್ಟಿಲ್ಲ. ಕಾಲೆಳೆಯುವ ಪ್ರವೃತ್ತಿ ಈ ಕ್ಷೇತ್ರದಲ್ಲಿ ಸಾಕಷ್ಟಿದೆ. ಯಾರೇ ಆದರೂ "ಪ್ರತಿಷ್ಠೆ" ಮೆರೆಯೋದನ್ನೇ ಚಿಂತೆ ಮಾಡ್ತಿರ್ತಾರೆ. ಒಟ್ಟಾರೆಯಾಗಿ ಪ್ರತಿಷ್ಠೆಗಳೇ ಮೇಲ್ಪಂಕ್ತಿ ಹಾಕಿವೆ ಎಂದ್ರೆ ತಪ್ಪಾಗಲಾರದು. ತಮ್ಮ ಸ್ವಾರ್ಥಇಲ್ಲದೆ ಅವಕಾಶಗಳನ್ನು ಯಾರಿಗೂ ಕೊಡಲಾರರು. ಇದು ನೂರಕ್ಕೆ ನೂರು ಸತ್ಯ.

ರಾಧಾ ಕಲ್ಯಾಣಕ್ಕೆ ವಿದೇಶದಲ್ಲಿ ಶೂಟಿಂಗ್ ನಡೆಯುತ್ತದಲ್ಲ?
ಹೌದು.ಒಂದು ಧಾರಾವಾಹಿಯ ಶೂಟಿಂಗ್ ವಿದೇಶದಲ್ಲಿ ನಡೀತಿದೆ ಅನ್ನೋದೇ ಅಚ್ಚರಿ. ಮೊಟ್ಟಮೊದಲ ಬಾರಿಗೆ ವಿಮಾನ ಹತ್ತುತ್ತಿದ್ದೇನೆ ಅದು ನನಗೆ ತುಂಬಾ ಖುಷಿಕೊಟ್ಟಿದೆ. ಈತನಕ ರಾಜ್ಯ ಬಿಟ್ಟು ಬೇರೆ ಪ್ರದೇಶಗಳಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿರಲಿಲ್ಲ. ಇದು ನಂಬೋದಿಕ್ಕೇ ಸಾಧ್ಯವಾಗ್ತಿಲ್ಲ.ತುಂಬಾ ತುಂಬಾ ಖುಷಿಆಗ್ತಿದೆ.

ರಾಧಾ ಪಾತ್ರದ ಒಟ್ಟಾರೆ ಅನುಭವ ?

ನಾನು ಸಂಪ್ರದಾಯಸ್ಥ ಹವ್ಯಕ ಮನೆತನದಿಂದ ಬಂದ ಹುಡುಗಿ. ಈ ಹಿನ್ನಲೆ ಈ ಪಾತ್ರಕ್ಕೆ ಪರಿಪೂರ್ಣ ಜೀವತುಂಬುವಲ್ಲಿ , ಅರ್ಥ ಕಟ್ಟಿಕೊಡುವಲ್ಲಿ ನನಗೆ ಸಹಕಾರಿಯಾಯಿತು. ಪಾತ್ರನಿರ್ವಹಣೆ ನನಗೆ ಕಷ್ಟ ಅನಿಸಲಿಲ್ಲ. ಆದರೆ ರಾಧಾ ಪಾತ್ರದಂತೆ ಇಂದಿನ ಸಮಾಜದಲ್ಲಿ ಯಾವೊಬ್ಬ ಹೆಣ್ಣಮಗಳನ್ನು ಕಾಣಲು ಸಾಧ್ಯವೇ ಇಲ್ಲ.ಆದರೂ ಇಂತಹ ಸಂಪ್ರದಾಯ,ಸಂಸ್ಕೃತಿಯನ್ನು ನಂಬಿ ಈ ಧಾರಾವಾಹಿಯನ್ನು ಜನ ನೋಡ್ತಿದ್ದಾರೆ.ಬೆಂಬಲಿಸ್ತಿದ್ದಾರೆ.ಅದು ಖುಷಿಕೊಡ್ತಿದೆ.

ಸಿನೆಮಾ / ಧಾರಾವಾಹಿ ನಟಿಯರೆಂದರೆ ಅಲ್ಲಿ ಗಾಸಿಪ್ ಇದ್ದೇ ಇರುತ್ತದಲ್ಲ...
ಹೌದು. ಆದರೆ ನಾನು ಅದರಿಂದ ದೂರವೇ ಉಳಿಯಲು ಇಷ್ಟ ಪಡುತ್ತೇನೆ. ನನಗೆ ಗಾಸಿಪ್ ಇಷ್ಟ ಇಲ್ಲ. ಕೆಟ್ಟದಾಗಿ ಅಪಪ್ರಚಾರ ಮಾಡುವುದು ಈ ಕ್ಷೇತ್ರದಲ್ಲಿ ಮಾಮೂಲು ...ಇಲ್ಲೂ ಇಂಡೈರೆಕ್ಟ್ ಹಿಟ್ ನಡೀತಿರುತ್ತದೆ...

ಚಿತ್ರರಂಗದಲ್ಲಿ ಡಬ್ಬಿಂಗ್ ಇಂದು ಹಾಟ್ ಇಷ್ಯೂ ಆಗಿದೆ..ನೀವೇನಂತೀರಿ...
ಕನ್ನಡ ಫಿಲಂ ಇಂಡಸ್ಟ್ರಿಯಲ್ಲಿ ಒಂದರ್ಥದಲ್ಲಿ ಟ್ಯಾಲೆಂಟ್ ಕಡಿಮೆಯಾಗಿದೆ ಅಂತಾನೇ ಹೇಳ್ಬಹುದು.ಅದಕ್ಕಾಗಿ ಡಬ್ಬಿಂಗ್ ಬರ್ತಾ ಇದೆ. ಡಬ್ಬಿಂಗ್ , ರೀಮೇಕ್ ಸಂಪೂರ್ಣ ತಪ್ಪು ಅಂತ ನಾನು ಹೇಳೋದಿಲ್ಲ. ಆದರೆ ಸ್ವಂತಿಕೆ ಬೇಕೇ ಬೇಕು...

ಸಿನೆಮಾದಲ್ಲಿ ಅವಕಾಶ ಬಂದಿತ್ತೇ...?
ಧಾರಾವಾಹಿಯಲ್ಲಿ ನಟನೆಮಾಡೋ ಸಂದರ್ಭದಲ್ಲೇ ಅವಕಾಶಗಳು ಬಂದಿತ್ತು.ಆದರೆ ಎರಡೂ ಕಡೆಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಕಷ್ಟ. ತಮಿಳು, ಮತ್ತು ತೆಲುಗು ಭಾಷೆಗಳಿಂದಲೂ ಆಫರ್ ಬಂದಿದ್ದವು. ಸಧ್ಯಕ್ಕೆ ಸೀರಿಯಲ್ ನಂಗಿಷ್ಟ.

ಕನಸು...?

ನನ್ನ ಕನಸಿನ ಪಾತ್ರ ವಿಲನ್...ಇದು ಮಾಡೇ ಮಾಡ್ತೀನಿ... ಅದೇ ನಂಗಿಷ್ಟ....


ಕನ್ನಡತಿ ಕೃತಿಕಾಗೆ ಇನ್ನೂ ಹೆಚ್ಚು ಕಲೀಬೇಕಂತೆ....ವಿದ್ಯಾಭ್ಯಾಸ ಮುಂದುವರಿಸುವ ಗುರಿ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸ್ ಮಾಡೋದು, ಹೈಯರ್ ಎಜುಕೇಷನ್ ಮಾಡುವ ಬಗ್ಗೆ ಚಿಂತನೆ ಮಾಡ್ತಿದ್ದಾರಂತೆ.
ಈ ಕನಸು ಅವರಿಗೆ ಶುಭಾಶಯ ಹೇಳ್ತಿದೆ.

ಸಂದರ್ಶನ : ಸೌಮ್ಯ ಆದೂರು.

14 comments:

Mcs Shetty said...

Kruttikaaaaa ..she is simply great.
marvellous acting.........
wishing her all the best...........

Anonymous said...

ALL THE BEST KRUTHIKA

preeti said...

very all d best to u dear....happy journey also to u...with loads of love <3<3

Anonymous said...

All the best Kruthika...

Anonymous said...

Thank u Hareesh Bhava and Soumyakka..:-)
-Kruttika Ravindra

Anonymous said...

ನಾನು ಸಂಪ್ರದಾಯಸ್ಥ ಹವ್ಯಕ ಮನೆತನದಿಂದ ಬಂದ ಹುಡುಗಿ. ಈ ಹಿನ್ನಲೆ ಈ ಪಾತ್ರಕ್ಕೆ ಪರಿಪೂರ್ಣ ಜೀವತುಂಬುವಲ್ಲಿ , ಅರ್ಥ ಕಟ್ಟಿಕೊಡುವಲ್ಲಿ ನನಗೆ ಸಹಕಾರಿಯಾಯಿತು. ಪಾತ್ರನಿರ್ವಹಣೆ ನನಗೆ ಕಷ್ಟ ಅನಿಸಲಿಲ್ಲ. ಆದರೆ ರಾಧಾ ಪಾತ್ರದಂತೆ ಇಂದಿನ ಸಮಾಜದಲ್ಲಿ ಯಾವೊಬ್ಬ ಹೆಣ್ಣಮಗಳನ್ನು ಕಾಣಲು ಸಾಧ್ಯವೇ ಇಲ್ಲ.ಆದರೂ ಇಂತಹ ಸಂಪ್ರದಾಯ,ಸಂಸ್ಕೃತಿಯನ್ನು ನಂಬಿ ಈ ಧಾರಾವಾಹಿಯನ್ನು ಜನ ನೋಡ್ತಿದ್ದಾರೆ.ಬೆಂಬಲಿಸ್ತಿದ್ದಾರೆ.ಅದು ಖುಷಿಕೊಡ್ತಿದೆ.- Hareesh Adhur avare...Kruttika yee matannu tumba sariyagi heliddare.
- Raju MB ·

Anonymous said...

Hareesh Adur avare...article tumba chennagi bandide...dhanyavadagalu...

- Raju MB

Anonymous said...

ಪ್ರತಿ ದಿನ ಪ್ರತಿ ಕ್ಷಣ ರಾಧೆ ಕಣ್ಣಲ್ಲಿ ಕಣ್ಣಿರೆ ಕಾಣುತ್ತೆ, ನಗು ಸಂತೋಷ ನೆಮ್ಮದಿ ಕಂಡ ದಿನ ಈ ಧಾರಾವಾಹಿ ಮುಗೀಯತ್ತೆ ಅನ್ನಿಸುತ್ತೆ....ಅಲ್ವಾ!!!!!! ಈಗಿನ ದಿನಗಳಲ್ಲಿ ಯಾವ ಹೆಣ್ಣು ಮಗಳು ಪ್ರತಿ ದಿನ ಇಷ್ಟೊಂದು ಅಳ್ತಾಳೆ ಹೇಳಿ???

- Aravinda Hiriyannaiah

Anonymous said...

waw!!!!!!!!!! superb article thanks 4 da article.....

- Monisha S Manu ·

Anonymous said...

Arthapoorna mathugalu radhikadhu..vry nice

-Shwetha Vp ·

Anonymous said...

what beauty is this i fond of this photo and has created her with lot of patience and god bless her

- Gundappa Patil ·

Anonymous said...

super acting krittika ondina mis madade nodti radha kalyanana
-Prashanth Bhat

Anonymous said...

Prashanth Bhat - eke radhe mouna talede?

Darshan Bm said...

NiCe interview sowmya mam.. congrats....

Post a Comment