ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಹೆಸರಿಗಷ್ಟೇ ಮಳೆಗಾಲ ಪ್ರಾರಂಭವಾಗಿದೆಯಾದರೂ ಬಿದಿರ ಮೆಳೆಗಳ ಪಾಲಿಗೆ `ಮರುಸೃಷ್ಠಿ'ಯ ಸಮಯ!ಈಗಾಗಲೇ ಹೂ ಬಿಟ್ಟ ಬಿದಿರ ಮೆಳೆಗಳು ಒಣಗಿ ಎಲ್ಲಿ ಬಿದಿರೇ ಅಳಿದು ಹೋಗುತ್ತವೋ ಎಂಬ ಭೀತಿ ಒಂದೆಡೆ ಆವರಿಸಿದೆಯಾದರೂ ಕೆಲವೊಂದು ಕಡೆಗಳಲ್ಲಿ ಇನ್ನೂ ಹಸಿರು ಹಸಿರಾಗಿ ಬಿದಿರಮೆಳೆಗಳು ಪೊಗಸ್ತಾಗಿ ಬೆಳೆದುನಿಂತಿರುವುದನ್ನು ಕಾಣುತ್ತೇವೆ. ಮಳೆ ಬೀಳತೊಡಗಿತೆಂದರೆ ಬಿದಿರ ಮೆಳೆಗಳು ಆನಂದದಿಂದ ವಿಹರಿಸುತ್ತವೆ...


ಹನಿ ಹನಿ ನೀರನ್ನು ತೊಟ್ಟಿಕ್ಕುತ್ತಾ ಮಳೆಗಾಲದ ಕುಳಿರ್ ಗಾಳಿಗೆ ಮೈಯೊಡ್ಡಿ ಆನಂದದಿಂದ ವಿಹರಿಸುತ್ತವೆ... ಇದೀಗ ಬಿದಿರ ಕಂದಮ್ಮಗಳು ಭುವಿಯೊಡೆದು ಹೊರಬರಲಾರಂಭಿಸಿವೆ... ಹೀಗೆ ಬಿದಿರ ವಂಶೋದ್ಧಾರ! ಈ ಬಿದಿರ ಮರಿಗಳಿಗೆ ಎಲ್ಲಿಲ್ಲದ ಬೇಡಿಕೆ. ಕರಾವಳಿಯಲ್ಲಿ `ಕಣಿಲೆ'ಯೆಂದೇ ಖ್ಯಾತಿ ಪಡೆದ ಈ ಬಿದಿರ ಕೂಸು ಉತ್ತಮ ಆಹಾರವೂ ಹೌದು. ಇದೀಗ ಕರಾವಳಿಯಿ ತುಂಬೆಲ್ಲಾ ಬಿದಿರ ಕೂಸಿನ ಮಾರಾಟದ ಭರಾಟೆ. ತರಕಾರಿ ಅಂಗಡಿ, ಸಂತೆ ಮಾರುಕಟ್ಟೆಗಳಲ್ಲಿ, ರಸ್ತೆ ಬದಿಯ ಫೂಟ್ ಪಾತ್ಗಳಲ್ಲಿ ರಾಶಿ ರಾಶಿ ಕಣಿಲೆಗಳು ಕಾಣಸಿಗುತ್ತವೆ. ರುಚಿಕರವಾದ ವೈವಿಧ್ಯಮಯ ಅಡುಗೆಗಳಗಿಗಾಗಿ ಬಿದಿರ ಸಂತತಿಯನ್ನು ನಾಶಪಡಿಸಲಾಗುತ್ತಿದೆ. ನಿರಂತರವಾಗಿ ಈ ರೀತಿ ಬಿದಿರ ನಾಶದಿಂದ ಮುಂದೊಂದು ದಿನ ಈ ಸಂತತಿ ಮರೆಯಾಗುವುದರಲ್ಲಿ ಸಂದೇಹವಿಲ್ಲ.

0 comments:

Post a Comment