ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮಂಗಳೂರು:ಒಡ್ಡೋಲಗವಾಗಿದೆ.ಆದರೆ ಅಬ್ಬರವಿಲ್ಲ...ಎಲ್ಲವೂ ಸಿಂಪಲ್..ಸಿಂಪಲ್...ಕೇವಲ ಜಿಟಿ...ಜಿಟಿ...ಒಂದೊಮ್ಮೆ ಧೋ...ಎಂಬ ಸದ್ದಿನೊಂದಿಗೆ ದೊಡ್ಡ ದೊಡ್ಡ ಹನಿಗಳ ಲೀಲೆ... ಮಳೆಗಾಲ ಆರಂಭವಾಗಿದೆ...ರಾತ್ರಿಯಿಂದಲೇ ಮಳೆಹನಿಗಳು ಆಗಸದಿಂದ ಹನಿ ಹನಿಯಾಗಿ ಉದುರತೊಡಗಿದ್ದವು... ಬೆಳ್ಳಂ ಬೆಳಗಾಗುತ್ತಿದ್ದಂತೆಯೇ ಅಬ್ಬರವಿಲ್ಲದ ಒಡ್ಡೋಲಗದೊಂದಿಗೆ ಮಳೆಗಾಲದ ಪ್ರವೇಶವಾಗಿದೆ. ಅಂತೂ ಇಂತೂ ಜೂನ್ ಮೂರರಂದು ಮಳೆಗಾಲ ಆರಂಭವಾಯ್ತು ಎಂಬಂತೆ ಮಳೆಪ್ರವೇಶಮಾಡಿದೆ.

ಸೋಮವಾರ ಬೆಳಗ್ಗಿನಿಂದ ರಾತ್ರಿಯ ತನಕವೂ ಕಣ್ಣಾ ಮುಚ್ಚಾಲೆಯಾಡಿದಂತೆ ಬಂದು ಹೋಗಿ ಮಾಡಿದೆ ಮಳೆ. ಸಂಜೆಯವೇಳೆಗೆ ತನ್ನ ಪ್ರವೇಶದ ಸ್ಪಷ್ಟ ರೂಪವನ್ನು ನೀಡಿದ್ದು ನಿರಂತರತೆಯನ್ನು ಕಾಯ್ದುಕೊಂಡಿದೆ. ಹಿಂದೆಲ್ಲಾ ಇತ್ತಲ್ಲಾ ಮಳೆಗಾಲದಮಳೆಯಂತೆ...ಎಂಬ ರೀತಿಯಲ್ಲಿ ಮಳೆ ಸುರಿಯತೊಡಗಿದೆ.

ಮೂಲೆ ಸೇರಿದ್ದ ಕೊಡೆಗಳು ಹೊರಬಂದಿವೆ...ರೈನ್ ಕೋಟುಗಳು ಮತ್ತೆ ಹೊರಬಂದಿವೆ. ಮಳೆಗಾಲದ ಮಳೆಯ ಕಣ್ಣಾಮುಚ್ಚಾಲೆಗೆ ಜನ ಸೋತಿದ್ದಾರೆ...ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ಅಳಿದುಳಿದ ಕೃಷಿಗೆ ಜೀವಬಂದಂತಾಗಿದೆ. ಭತ್ತದ ಗದ್ದೆಗಳು - ಇತರೆ ಕೃಷಿಕಾರ್ಯಗಳು ಇನ್ನೇನು ಚಿಗುರತೊಡಗಿವೆ...ಅಂತೂ ಇಂತು ಮಳೆ ಬಂತು...

0 comments:

Post a Comment