ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ...

ಈ ನೆನಪುಗಳೇಕೆ ಹೀಗೆ...?
ಒಮ್ಮೊಮ್ಮೆ ಚುಚ್ಚುತ್ತವೆ
ನೋಯಿಸುತ್ತವೆ...
ಮತ್ತೊಮ್ಮೆ ಚುಂಬಿಸುತ್ತವೆ...
ಕಾಡುತ್ತವೆ...
ಲಗಾಮಿಲ್ಲದೆ ಓಡುತ್ತವೆ...ಏಕಾಂತದಲ್ಲಿ ಸಂಗಾತಿಯಾಗಿ
ಜನ ಜಂಗುಳಿಯಲ್ಲಿ
ಒಂಟಿಯಾಗಿಸದೆ
ಹೇಳದೇ...ಕೇಳದೇ...
ಮನಸ್ಸನ್ನೆಲ್ಲೋ ಕದ್ದೊಯ್ಯುತ್ತವೆ...
ಗಾಯಗೊಂಡ ಮನಸ್ಸನ್ನು ಕೆದಕುತ್ತವೆ...
ಹಿಂಸಿಸುತ್ತವೆ...

ಬೆಂದ ಮನಸ್ಸಿಗೆ ತಂಪನ್ನೆರೆಯುತ್ತವೆ...
ಹಿತವಾಗುತ್ತವೆ...
ಬಾ ಎಂದಾಗ ಬಾರದೆ
ಬೇಡವೆಂದಾಗ ಬಂದು
ಕಣ್ಣಾಮುಚ್ಚಾಲೆಯಾಡುತ್ತವೆ
ಅಳಿಸುತ್ತವೆ...

ನಗಿಸುತ್ತವೆ...
ಶೂನ್ಯವಾಗಿಸುತ್ತವೆ...
ಶೂನ್ಯವನ್ನೂ ತುಂಬುತ್ತವೆ...
ಕೆಲವೊಮ್ಮೆ ಭಾರವಾಗಿ
ಮತ್ತೊಮ್ಮೆ ಆಧಾರವಾಗಿ
ನಮ್ಮೊಡನೆ ಸಾಗುತ್ತವೆ...

ನಿಧಾನವಾಗಿ ಕರಗುತ್ತವೆ...
ಮರೆಯಾಗುತ್ತವೆ...ಬಿಡುತ್ತವೆ...
ಈ ನೆನಪುಗಳೇ...ಹೀಗೇಕೆ...

- ದಿವ್ಯಾ ಜಿ.ಎನ್ ರಾವ್.1 comments:

Anonymous said...

vry nice diya...

nenapugallendare higene... bidade kadva hagene...

from,
vidya irvathur

Post a Comment