ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:33 PM

ಹಲಸಿನ ಖಾದ್ಯಗಳು

Posted by ekanasu

ವೈವಿಧ್ಯ
ಹಲಸು ಯಾರಿಗೆ ತಾನೆ ಬೇಡ?ಎಳೆಯರಿಂದ ಹಿಡಿದು ವೃದ್ಧರವರೆಗೂ ಜೇನಿನಂತೆ ಮಧುರವಾದ ಹಲಸಿನ ಹಣ್ಣೆಂದರೆ ಪ್ರಿಯವೇ.ಹಲಸಿನ ಮಿಡಿ,ಕಾಯಿ,ಹಣ್ಣು,ಬೀಜಗಳಿಂದ ಹಲವಾರು ಖಾದ್ಯಗಳನ್ನು ತಯಾರಿಸಬಹುದು. ಈ ಕನಸು ಇಂದಿನ ರುಚಿಯಲ್ಲಿ ಹಲಸಿನ ಖಾದ್ಯಗಳು...

ಹಲಸಿನ ಸೊಳೆಯ ಪೋಡಿ


ಬೇಕಾಗುವ ಸಾಮಾಗ್ರಿ:ಹಲಸಿನ ಸೊಳೆ 15,ಕಡಲೆ ಹಿಟ್ಟು 1/4 ಕೆ.ಜಿ,ಮೆಣಸಿನ ಹುಡಿ 3 ಚಮಚ,ಚಿಟಿಕೆ ಹಿಂಗು,ಉಪ್ಪು,ಎಣ್ಣೆ.ಮಾಡುವ ವಿಧಾನ:ಹಲಸಿನ ಸೊಳೆಯನ್ನು ಎರಡಾಗಿ ಸೀಳಿ.ಕಡಲೆ ಹಿಟ್ಟಿಗೆ ಹಿಂಗು , ಉಪ್ಪು, ಮೆಣಸಿನ ಹುಡಿ ಹಾಕಿ ದಪ್ಪವಾಗಿ ಕಲಸಿ. ನಂತರ ಸೊಳೆಯನ್ನು ಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ. ಅತಿಥಿಗಳು ಬಂದಾಗ ಧಿಡೀರನೆ ಮಾಡಲು ಇದು ಸುಲಭ.


ಹಲಸಿನ ಸೊಳೆ ಚಿಪ್ಸ್

ಬೇಕಾಗುವ ಸಾಮಾಗ್ರಿಗಳು : ಹಲಸಿನ ಸೊಳೆ ( ಅಗತ್ಯವಿದ್ದಷ್ಟು), ಉಪ್ಪು, ಎಣ್ಣೆ.
ಮಾಡುವ ವಿಧಾನ : ಹಲಸಿನ ಸೊಳೆಯನ್ನು ತೆಳ್ಳಗೆ ಸಪೂರವಾಗಿ ಸೀಳಿ. ಉಪ್ಪನ್ನು ನೀರು ಮಾಡಿಟ್ಟುಕೊಳ್ಳಿ. ಕಾದ ಎಣ್ಣೆಗೆ ಸೀಳಿದ ಸೊಳೆಯನ್ನು ಹಾಕಿ . ಕೆಂಪಾಗುತ್ತಾ ಬರುತ್ತಿದ್ದಂತೆ ಅಗತ್ಯವಿದ್ದಷ್ಟು ಉಪ್ಪುನೀರು ಹಾಕಿ. ಎರಡು ತಲ ಮಗುಚಿ ಎಣ್ಣೆಯಿಂದ ತೆಗೆಯಿರಿ. ಮಳೆಗಾಲದಲ್ಲಿ ಕಾಫಿಯೊಂದಿಗೆ ತಿನ್ನಲು ಬಲುಸೊಗಸು.

- ಸುಮತಿ ಕೆ.ಸಿ.ಭಟ್ ಆದೂರು.

1 comments:

Ravi chandra Kotian said...

Amma Chennagide ... Next Manege Baruvaga Plz Madi Kodi

Post a Comment