ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ಮುಂಗಾರಿನ ಮಳೆಯಲಿ
ಚಿಗುರುವ ಹಸಿರು ಗಿಡ ಬಳ್ಳಿಗಳ
ಸೊಬಗಿನಲ್ಲಿ! ಚಿಲಿಪಿಲಿ ಹಾಡುವೆವು ನಾವು
ಮನಸೋತು...
ಮತ್ತೆ ಮತ್ತೆ ಬಾ ಮುಂಗಾರು ಹನಿಯೇ.

ಹೊಲದೊಳು ಹಸಿಯಾಗಿ ರೈತನು
ಬಿತ್ತುವ ಕೂರಿಗೆ ಹಿಂದೆ,
ಆಹಾರ ತಿಂದು! ಕೀಟ ಬಾಧ್ಯತೆ ರಕ್ಷಸಿವೆವು,
ಮತ್ತೆ ಮತ್ತೆ ಬಾ ಮುಂಗಾರು ಹನಿಯೇ.

ಹಸಿರು ಹಸಿರಾಗಿ ಚಿಗುರುವ ಬೆಳೆ.
ಹಸುಗಳಿಗೆ ಕಳೆ! ರೈತನ ಮುಖದ ಹೊಳೆ.
ಹೊಲದೊಳು ದುಡಿಯುವ,
ಬಸವನ ಮೇಲೆ ಕುಳಿತು ಹಾಡುವೆವು ನಾವು
ಮತ್ತೆ ಮತ್ತೆ ಬಾ ಮುಂಗಾರು ಹನಿಯೇ.

ಸುತ್ತಲೂ ಹಸಿರಾದ ಹೊನಲು.
ಮರದೋಳು, ನಮ್ಮ ಧ್ವನಿಯ ಶಬ್ಧಕೆ!
ಹೊಲದೊಳಗೆ ರೈತನ ಮುಖವು,
ಕಳೆ ಕಳೆಯ ಸೊಬಗು.
ಮತ್ತೆ ಮತ್ತೆ ಬಾ ಮುಂಗಾರು ಹನಿಯೇ.

ತೆನಿಯಾಗಿ ಮಿನುಗುವ ಬೆಳೆ.
ರೈತನ ಮಾಡುವ ರಾಶಿಯಲಿ
ಕಾಳು ಕಾಳು ಆರಿಸಿ ತಿಂದು.
ಮಕ್ಕಳಿಗೂ ಒಯುವೆವು ನಾವು
ಮತ್ತೆ ಮತ್ತೆ ಬಾ ಮುಂಗಾರು ಹನಿಯೇ.ರೈತನು ನಾವು ಕೂಡಿ ಕಳೆಯುವೆವು,
ಹೀಗೆ ಜೀವನವು!
ಒಮ್ಮೆ ಬಾರದಿದ್ದರೆ ಹನಿಯೇ,
ಬಿಟ್ಟು ಹೋಗುವೆವು ನಾವು ನಿನ್ನನು.
ಮತ್ತೆ ಮತ್ತೆ ಬಾ ಮುಂಗಾರು ಹನಿಯೇ...


ಬಾಲಪ್ಪ.ಎಂ.ಕುಪ್ಪಿ ಸುರಪುರ
ಯಾದಗಿರಿ

0 comments:

Post a Comment