ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಬದಿಯಡ್ಕ: ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕ ಇದರ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭ ಜೂ.22ರಂದು ನಡೆಯಿತು.ಸ್ಥಳೀಯ ಪಂಚಾಯತ್ ಉಪಾಧ್ಯಕ್ಷ ಕೆ.ಎನ್.ಕೃಷ್ಣಭಟ್ ಶಿಲಾನ್ಯಾಸ ನೆರವೇರಿಸಿ ಫಲಾಪೇಕ್ಷೆ ಇಲ್ಲದ ಕಾರ್ಯಗಳಿಗೆ ಭಗವಂತನ ಅನುಗ್ರಹ ಇದ್ದೇ ಇದೆ. ನೂತನ ಕಟ್ಟಡ ನಿರ್ವಿಘ್ನವಾಗಿ ಶೀರ್ಘ ಮೂಡಿಬರಲಿ ಎಂದು ಹಾರೈಸಿದಿರು.


ಮುಖ್ಯ ಅತಿಥಿಗಳಾಗಿ ಕಡಾರು ಐತ್ತಪ್ಪಶೆಟ್ಟಿ ಮಾತನಾಡಿ ವಿದ್ಯಾಸಂಸ್ಥೆಗಳನ್ನು ನಡೆಸುವುದು ಅತ್ಯಂತ ಕಷ್ಟದ ಕೆಲಸ. ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವ. ಈ ನಿಟ್ಟಿನಲ್ಲಿ ಶ್ರೀ ಭಾರತೀ ವಿದ್ಯಾಪೀಠವು ಉತ್ತಮ ಕಾರ್ಯ ನಿರ್ವಹಿಸುತ್ತದೆ ಎಂದರು. ಯಾವುದೇ ಮಾಧ್ಯಮದಲ್ಲಿ ಕಲಿತರೂ ಮಾತೃಭಾಷೆಯ ಜ್ಞಾನ ಎಲ್ಲಾ ಮಕ್ಕಳಿಗೂ ಇರುವುದು ಅತೀ ಅಗತ್ಯ ಎಂದರು.

ಹೊಸನಗರ ಶ್ರೀರಾಮಚಂದ್ರಾಪುರ ಮಠದ ಗುರುಕುಲದ ಪ್ರಾಚಾರ್ಯರಾದ ಆಚಾರ ವಿಚಾರ ಗಜಾನನ ಭಟ್ ಅವರು ಈ ಸಂದರ್ಭದಲ್ಲಿ ಹಿತನುಡಿಗಳನ್ನಾಡಿದರು.ಬೇರ್ಕಡವು ಶ್ಯಾಮ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಮಾರು 50 ಲಕ್ಷದ ಅಂದಾಜುವೆಚ್ಚದ ಈ ನೂತನ ಕಟ್ಟಡಕ್ಕೆ ದಾನಿಗಳ ಸಂಪೂರ್ಣ ಸಹಕಾರವನ್ನು ಕೋರಿದರು. ಅಧ್ಯಕ್ಷತೆಯನ್ನು ಡಾ. ವೈ.ವಿ.ಕೃಷ್ಣಮೂರ್ತಿ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ರವೀಂದ್ರನಾಥ ಶೆಟ್ಟಿ ವಳಮಲೆ, ಶ್ರೀಕೃಷ್ಣ ಭಟ್ ಬರ್ಲ, ಕುದ್ರೆಪ್ಪಾಡಿ ವೆಂಕಟ್ರಮಣ ಭಟ್ ಉಪಸ್ಥಿತರಿದ್ದರು. ಶ್ರೀ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಸ್ವಾಗತಿಸಿ ಶ್ರೀಹರಿ ಕೆ.ಎಮ್. ವಂದಿಸಿದರು. ಶರಣ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.

0 comments:

Post a Comment