ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ವಿಶೇಷ ವರದಿ

ಮಂಗಳೂರು/ಬೆಂಗಳೂರು:ಇನ್ನು ಶಿರಾಡಿ "ಶೀ"ರಾಡಿ ಎನ್ನಬೇಕಾಗಿಲ್ಲ...!ಹೌದು...ಪ್ರತೀ ಮಳೆಗಾಲದಲ್ಲಿ ರಸ್ತೆ ಕುಸಿತ, ಬ್ಲಾಕ್, ಅಡೆತಡೆ - ಅಡಚಣೆ, ಇದರಿಂದಾಗಿ ಪ್ರಯಾಣಿಕರಿಗೆ ಕಿರಿಕಿರಿ - ತೊಂದರೆ ಈ ಯಾವ ಮಾತೂ ಕೇಳಬೇಕಾಗಿಲ್ಲ... ಕಾರಣ ಇಷ್ಟೇ ಎಲ್ಲಾ ಸರಿಯಾದರೆ, ಯೋಚಿಸಿದಂತೆ ಕಾರ್ಯಗತಗೊಂಡರೆ "ಬೈಪಾಸ್ ಎಕ್ಸ್ ಪ್ರೆಸ್ ಹೈವೇ" ರಸ್ತೆ ಶಿರಾಡಿಯಲ್ಲಿ ನಿರ್ಮಾಣವಾಗಲಿದೆ. ಇದು ಕೇವಲ ರಸ್ತೆಯಷ್ಟೇ ಅಲ್ಲ...ಇದೊಂದು ಸುಂದರ ಪ್ರಯಾಣ ಅನುಭವವನ್ನು ಪ್ರಯಾಣಿಗರಿಗೆ ನೀಡಲಿದೆ.ತನ್ಮೂಲಕ ಪ್ರವಾಸೀ ದೃಷ್ಟಿಕೋನದಿಂದಲೂ ಇದು ಪ್ರಸಿದ್ಧಿ ಪಡೆಯಲಿದೆ. ಬೃಹತ್ ಕಮಾನು ಸೇತುವೆ, ಐದು ಸುರಂಗ ಮಾರ್ಗ,3 ಅತ್ಯಾಧುನಿಕ ರಸ್ತೆ ಮೇಲ್ಸೇತುವೆಗಳನ್ನೊಳಗೊಂಡ ಎಕ್ಸ್ ಪ್ರೆಸ್ ಹೈವೇ ನಿರ್ಮಿಸುವ ಯೋಜನೆ ಇದಾಗಿದೆ.


ಈ ಯೋಜನೆಯ ಪ್ರಕಾರ 18.5 ಕಿಲೋಮೀಟರ್ ಉದ್ದದ ಪ್ರದೇಶದಲ್ಲಿ 7.7 ಕಿಲೋಮೀಟರ್ ಉದ್ದದ ಐದು ಸುರಂಗ ಮಾರ್ಗ, 3.9 ಕಿಲೋಮೀಟರ್ ಉದ್ದದ ನಾಲ್ಕು ಎತ್ತರಿಸಿದ ರಸ್ತೆ ಮೇಲ್ಸೇತುವೆ, ಎರಡು ಕಿಲೋಮೀಟರ್ ಉದ್ದದ ಬೃಹತ್ ಕಮಾನು ಸೇತುವೆ ನಿರ್ಮಾಣಗೊಳ್ಳಲಿದೆ. ಸುರಂಗ ಮಾರ್ಗ ಮತ್ತು ರಸ್ತೆ ಮೇಲ್ಸೇತುವೆ ಒಟ್ಟಾರೆ 11.6 ಕಿಲೋಮೀಟರ್ ಉದ್ದ ಒಳಗೊಂಡಿರುತ್ತದೆ. ಉಳಿದ 6.9 ಕಿಲೋಮೀಟರ್ ಉದ್ದದ ರಸ್ತೆಯನ್ನು ಭೂ ಮಟ್ಟದಲ್ಲಿ ನಿರ್ಮಿಸುವ ಬಗ್ಗೆ ಅಂದಾಜಿಸಲಾಗಿದೆ.

ಪರಿಸರಕ್ಕೆ ಹಾನಿಯಾಗದಂತೆ!

ಈ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಮುತುವರ್ಜಿ ವಹಿಸಲಾಗುತ್ತದಂತೆ!.ಭೂಮಿ ಕೊರೆದು ಸುರಂಗ ಮಾರ್ಗ ನಿರ್ಮಾಣ ಮಾಡುವುದು,ಹಲವು ಕಡೆಗಳಲ್ಲಿ ಕಣಿವೆ, ಕಂದಕಗಳನ್ನು ಭರ್ತಿಮಾಡಿ ಭೂ ಮಟ್ಟ ಎತ್ತರಿಸಿ ರಸ್ತೆ ನಿರ್ಮಾಣ ಮಾಡುವುದು, ಹಲವು ಸೇತುವೆಗಳ ನಿರ್ಮಾಣ ಮಾಡುವ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಹೇಗೆ ಈ ಕಾಮಗಾರಿ ನಿರ್ಮಾಣ ಆಗುತ್ತದೆ ಎಂಬುದು ಮಾತ್ರ ವಿಶೇಷ!

ಜಪಾನ್ ತಂತ್ರಜ್ಞಾನ
ಜೈಕಾ ಎಂಬ ಜಪಾನ್ ಅಂತಾರಾಷ್ಟ್ರೀಯ ಕನ್ಸಲ್ಟೆನ್ಸಿ ಏಜೆನ್ಸಿ ತಜ್ಞರು ಸಕಲೇಶಪುರ - ಶಿರಾಡಿ ಘಾಟಿ ಪ್ರದೇಶದಲ್ಲಿ ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿದ್ದಾರೆ. ಅವರ ಪ್ರಕಾರ ಈ ಭಾಗದಲ್ಲಿ ಈ ಯೋಜನೆ ಜಾರಿ ಮಾಡಬಹುದಾಗಿದೆ. ಇದಕ್ಕೆ ಸರಕಾರದ ಕೃಪಾಕಟಾಕ್ಷವೂ ದೊರೆತಿದೆ. ರಾಷ್ಟ್ರೀಯ ಹೆದ್ದಾರಿ 48ರ ಸಕಲೇಶಪುರದ ಮಾರನಹಳ್ಳಿ ಎಂಬಲ್ಲಿಂದ ಗುಂಡ್ಯದ ತನಕ ಒಟ್ಟು 18.5 ಕಿಲೋ ಮೀಟರ್ ಉದ್ದದಲ್ಲಿ ಈ ಚತುಷ್ಪಥ ಎಕ್ಸ್ ಪ್ರೆಸ್ ಹೈವೇ ಯೋಜನೆ ರೂಪುಗೊಳ್ಳುವುದು ಬಹುತೇಕ ನಿಶ್ಚಿತ. ಇದರ ನಿರ್ಮಾಣಕ್ಕೆ ಬರೋಬ್ಬರಿ 4,800 ಕೋಟಿ ಖರ್ಚಾಗಲಿದೆ.

ಇಳಿಜಾರು ರೂಪದಲ್ಲೊಂದು ಹೈವೇ ರಸ್ತೆ
ಇದೊಂದು ಇಳಿಜಾರು ರೂಪದ ಹೈವೇ ರಸ್ತೆಯಾಗಿ ಮೂಡಿಬರಲಿದೆ. ಕಾರಣ ಶಿರಾಡಿ ಘಾಟ್ ಸಮುದ್ರ ಮಟ್ಟದಿಂದ 850ಅಡಿ ಎತ್ತರದಲ್ಲಿದೆ. ಈ ಹೈವೇ ಯನ್ನು 700ಮೀಟರ್ ಎತ್ತರದಿಂದ ಇಳಿಜಾರು ರೂಪದಲ್ಲಿ ನಿರ್ಮಿಸಬೇಕಾಗುತ್ತದೆ. ಇದಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಅವಶ್ಯಕತೆಯಿದೆ. ನುರಿತ ತಂತ್ರಜ್ಞರನ್ನೊಳಗೊಂಡ ತಂಡ ಈ ಯೋಜನೆಯನ್ನು ಕಾರ್ಯಗತಗೊಳಿಸಬೇಕಾಗುತ್ತದೆ.


ಶಿರಾಡಿ ಘಾಟ್ ಪ್ರದೇಶ ಸಮುದ್ರ ಮಟ್ಟದಿಂದ ಸುಮಾರು 850 ಅಡಿ ಎತ್ತರದಲ್ಲಿದೆ. ಉದ್ದೇಶಿತ ಹೆದ್ದಾರಿಯನ್ನು ಸುಮಾರು 700 ಮೀಟರ್ ಎತ್ತರದಿಂದ ಇಳಿಜಾರು ರೂಪದಲ್ಲಿ ನಿರ್ಮಿಸಬೇಕಾಗಿದೆ. ಇದೊಂದು ಸವಾಲಿನ ಯೋಜನೆ. ಅಗತ್ಯ ತಂತ್ರಜ್ಞಾನ ಒದಗಿಸುವಂತೆ ಜೈಕಾವನ್ನು ಕೋರಲಾಗಿದೆ` ಎಂದೂ ಅವರು ವಿವರಿಸಿದರು.

ಜೈಕಾ ಪರಿಣತಿ: ಪರ್ವತ ಶ್ರೇಣಿಗಳಲ್ಲಿ ಸುರಂಗ ಮಾರ್ಗ ಹಾಗೂ ಎತ್ತರಿಸಿದ ರಸ್ತೆ ಮೇಲ್ಸೇತುವೆ ನಿರ್ಮಿಸುವಲ್ಲಿ ಜಪಾನ್ ಎತ್ತಿದ ಕೈ. ಇದೇ ರೀತಿಯ ಯೋಜನೆಯೊಂದನ್ನು ಅದು ಯಶಸ್ವಿಯಾಗಿ ತನ್ನ ನೆಲದಲ್ಲಿ ಕಾರ್ಯರೂಪಕ್ಕೆ ತಂದಿದೆ. 11 ಕಿ.ಮೀ. ಉದ್ದದ `ಕನೇತ್ಸು` ಸುರಂಗ ಮಾರ್ಗವನ್ನು ಜೈಕಾ ನಿರ್ಮಿಸಿದೆ. ಇದು ಸುಮಾರು 1100 ಮೀಟರ್ ಆಳದಲ್ಲಿ ಹಾದು ಹೋಗಿದ್ದು, ವಿಶ್ವದ 11ನೇ ಅತಿ ಉದ್ದದ ಸುರಂಗ ಮಾರ್ಗ ಎಂದೂ ಪ್ರಸಿದ್ಧಿ ಪಡೆದಿದೆ.

- ಟೀಂ ಈ ಕನಸು.

0 comments:

Post a Comment