ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಅಲ್ಲಿ ಏನಿಲ್ಲ...? ಎಲ್ಲವೂ ಇದೆ... ಇದು ಹೇಗೆ ಸಾಧ್ಯ...? ಅದಕ್ಕೊಂದು ಕಾರಣವಿದೆ...? ಏನು ಕಾರಣ...? ಮಾಡುವ ಇಚ್ಛೆ... ಮನೋಸ್ಥಿತಿ...ಹೌದು... ಇವರೊಬ್ಬ ಸಾಧಕಿ. ಏನಾದರೊಂದು ಮಾಡುತ್ತೇನೆಂಬ ಸ್ಪಷ್ಟ ಗುರಿ ಹೊಂದಿ ಕೆಲಸ ಪೂರೈಸುವ ಉತ್ತಮ ಕೆಲಸಗಾರ್ತಿ . ಪ್ರಸ್ತುತ ನಿವೃತ್ತ ಶಿಕ್ಷಕಿ. ಕೃಷಿಯಲ್ಲಿ ಅಪಾರ ಆಸಕ್ತಿ. ಹೂ ಗಿಡಗಳ ಒಪ್ಪ ಓರಣ ಶೃಂಗಾರದಲ್ಲಿ ಎತ್ತಿದ ಕೈ... ಇದೀಗ ನಿವೃತ್ತ ಜೀವನದಲ್ಲಿ ಸುಮ್ಮನೆ ಕೂರದೆ ಕೃಷಿಯತ್ತ ಆಸಕ್ತಿ. ಪರಿಣಾಮ ಅಂಗಳದ ತುಂಬೆಲ್ಲಾ ಲಾವಂಚದ ಕೃಷಿ.


ಕೊಣಾಜೆಯ ಅಂಬೇಡ್ಕರ್ ಕಾಲನಿಯಲ್ಲಿರುವ ತನ್ನ ತೋಟದ ಮನೆಯಲ್ಲಿ ಎಲ್ಲವನ್ನೂ ನೆಟ್ಟು ಬೆಳೆಸಿದ್ದಾರೆ ಈ ನಿವೃತ್ತ ಶಿಕ್ಷಕಿ. ಹೆಸರು ಲಕ್ಷ್ಮೀ ಟಿ. ಲಾವಂಚದಲ್ಲಿ ವರ್ಷಕ್ಕೆ ಮೂರು ಬೆಳೆ ತೆಗೆಯುತ್ತಾರೆ. ವೈವಿಧ್ಯಮಯ ಹೂ ಗಿಡಗಳಿಂದ ತುಂಬಿರುವ ಹೂ ತೋಟ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ. ಅಂತೂ ಪುಟ್ಟ ಜಾಗವನ್ನು ಒಪ್ಪವಾಗಿ, ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಲಕ್ಷ್ಮಿ ಅವರದ್ದು ಒಂದು ಸಾಧನೆಯೇ ಸರಿ.

- ಟೀಂ ಈ ಕನಸು.

0 comments:

Post a Comment