ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ

ಬೆಳಿಗ್ಗೆ ಎದ್ದ ತಕ್ಷಣವೇ ಅವನ ಜೊತೆಗೆ ಮಾತನಾಡಬೇಕೆಂದೆನಿಸುತ್ತದೆ..ಮಾತನಾಡ ಹೊರಟರೆ ಇಡೀ ಪ್ರಪಂಚದ ಸುಖವೆಲ್ಲವೂ ನನ್ನೊಬ್ಬನಿಗೇ ಇದೆಯೆಂಬ ಭಾವನೆಯಲ್ಲಿ ಗಡಿಯಾರದ ಮುಳ್ಳು ಸರಸರನೇ ಸರಿದರೂ ಈ ಜಗತ್ತಿನ ಅರಿವಿಲ್ಲದೇ ಪ್ರೀತಿ ಎಂಬ ಜಗತ್ತಿನಲ್ಲಿಯೇ ಮುಳುಗಿಬಿಡುವುದು...
ಸೂರ್ಯೋದಯದ ಆ ಮುಂಜಾವಿನಲ್ಲಿಯೂ ನನ್ನವನ ಧ್ವನಿಯು ಆ ಹಕ್ಕಿಗಳ ನಾದಕ್ಕಿಂತಲೂ ಇಂಪೆನಿಸುತ್ತದೆ...
ಆ ಪ್ರೀತಿಗೆ ಎಲ್ಲೆ ಎನ್ನುವುದೇ ಇಲ್ಲ ಮಾಡುವ ಕೆಲಸವನ್ನೆಲ್ಲ ಬಿಟ್ಟು ಅವನ ಬಗ್ಗೆ ಯೋಚಿಸಲು ಹೊರಟೆ ಆ ದಿನವೆಂಬುದೇ ಚಿಕ್ಕದಾಗಿದೆಯೇನೋ ಎನ್ನುವ ಭಾವನೆ...

ಹುಚ್ಚು ಮನಸಿನ ಸ್ವಚ್ಛ ಪ್ರೀತಿಯ ಬನದಡಿ ವಿಹರಿಸಿ ಮೆಚ್ಚಿನ ಹುಡುಗನ ಕೈ ಹಿಡಿದುಕೊಂಡು ಆ ಹುಣ್ಣಿಮೆಯ ಚಂದಿರನ ಬೆಳಕಿನಲ್ಲಿ ಮಾತನಾಡಿದರೆ, ಮಾತೆಲ್ಲವೂ ಮೌನದೆಡೆ ಬರಮಾಡಿಕೊಂಡು ಕಣ್ಣಿನ ರೆಪ್ಪೆಯು ಅಲುಗಾಡಿಸದೇ ಅಂತರಾಳದ ಎಲ್ಲ ಭಾಷೆಯನ್ನೂ, ಮಾತುಗಳನ್ನು ಆ ಅಸಾಧ್ಯ ಮೌನವೇ ಹೇಳಿಬಿಡುತ್ತದೆ.

ಸಾವಿರ ಪದಗಳಲ್ಲಿಯೂ ವರ್ಣಿಸಲಾಗದ ಆ ಪ್ರೀತಿಯನ್ನು , ಮೌನ ಅರ್ಥಮಾಡಿಸಿಬಿಡುತ್ತದೆ..ಹೋದ ಕಡೆ ಬಂದ ಕಡೆಯೆಲ್ಲವೂ ಅವನೇ ಜೊತೆಗಿರುವನೋ ಎಂದು ತಿರುಗಿ ನೋಡುವಷ್ಟು ಹಿಂಬಾಲಿಸಿಬಿಡುತ್ತದೆ.ಏಕೋ ಏನೋ ಆ ಗೆಳೆಯನ ಹತ್ತಿರ ಒಂದು ದಿನವೂ ಮಾತನಾಡದಿದ್ದರೂ ಏನನ್ನೋ ಮಿಸ್ ಮಾಡಿಕೊಂಡ ಅನುಭವ.

ಜಗಳವಾಡಿದ ಮರುಕ್ಷಣವೇ ಹೋಗಿ ತಬ್ಬಿಕೊಂಡು ತಪ್ಪಾಯಿತೆಂದು ಕೇಳುವ ಆ ಪ್ರೀತಿಯೇ ಅದೆಷ್ಟು ಸುಂದರ ನೀನು..ಮುನಿಸೆಲ್ಲವೂ ಕರಗಿ ಬಿಡುತ್ತವೆ.ಸ್ವಲ್ಪ ಹೊತ್ತಿನಲ್ಲಿಯೇ ಅವನ ಸೆಳೆತಕ್ಕೆ.ಪ್ರೀತಿಯ ತಿಳಿಸ ಹೊರಟರೆ ಎಂದೂ ಅಸಾಧ್ಯವಾದುದು..ಪ್ರೀತಿಗೆಲ್ಲಿ ಸೀಮಿತ, ಚೌಕಟ್ಟು ಎಂದಾದರೂ ಇದೆಯೇ?ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಯಂತೇ ಅವನ ಜೊತೆಗೆ ಮಾತನಾಡಿದ ಒಂದೊಂದು ಪದವನ್ನೂ ನೆನೆಪಿಸಿ ನೆನಪಿಸಿ ಸಣ್ಣಗೆ ನನ್ನೊಳಗೇ ನಕ್ಕು ಬಿಡುವ ಖಯ್ಯಾಲಿ.ಚಿಕ್ಕ ಪುಟ್ಟ ಅವನ ಗೆಲುವೂ ದೊಡ್ಡ ಸಂತೋಷದ ಗುಚ್ಛವನ್ನು ತಂದುಕೊಡುವ ಈ ನನ್ನ ಮನಸ್ಸಿಗೆ ಏನೆಂದು ಹೇಳಲಿ..?

ಬರಹ: ಪದ್ಮಾ ಭಟ್,
ಎಸ್.ಡಿ.ಎಂ ಕಾಲೇಜ್ ಉಜಿರೆ.
ಚಿತ್ರ:ಎಚ್.ಕೆ.

1 comments:

Ranga said...

ಪದ್ಮ ನಿಮ್ಮ ಊಹೆಯ ಲೇಖನೆ ಚೆನ್ನಾಗಿದೆ...

Post a Comment