ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಇಂದಿನ ರುಚಿ
ಈ ಕನಸು ಇಂದಿನ ರುಚಿಯಲ್ಲಿ ಈ ಬಾರಿ ಗೆಣಸಿನ ವಿವಿಧ ಖಾದ್ಯಗಳ ಪರಿಚಯವಿದೆ. ಗೆಣಸು ಎಲ್ಲರಿಗು ಪ್ರಿಯವಾಗುವ ಒಂದು ಆಹಾರ. ಈ ಗೆಣಸು ಬಾಯಿಗೆ ರುಚಿ. ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಗೆಣಸಿನಿಂದ ತಯಾರಿಸಲು ಸಾಧ್ಯ. ಇದೀಗ ಗೆಣಸಿನ ವಿವಿಧ ಖಾದ್ಯಗಳ ಪರಿಚಯ ಈ ಸಂಚಿಕೆಯಿಂದ ಆರಂಭಿಸುತ್ತಿದ್ದೇವೆ.
1 ಗೆಣಸಿನ ಪಲ್ಯ
ದೊಡ್ಡ ಗಾತ್ರದ ಗೆಣಸು ಒಂದು. ಉಪ್ಪು (ರುಚಿಗೆ ತಕ್ಕಷ್ಟು) , ಮೆಣಸಿನ ಪುಡಿ - ಒಂದು ಚಮಚ. ಅರಸಿನ ಹುಡಿ - ಒಂದು ಚಿಟಿಕೆ., ತೆಂಗಿನ ತುರಿ - ಅರ್ಧಕಪ್.

ವಿಧಾನ : ಗೆಣಸನ್ನು ಸಣ್ಣಗೆ ಹೆಚ್ಚಿ ಹೋಳನ್ನು ತೊಳೆದು , ರುಚಿಗೆ ತಕ್ಕಷ್ಟು ಉಪ್ಪು, ಅರಸಿನ ಹುಡಿ, ಮೆಣಸಿನ ಹುಡಿ ಹಾಕಿ ಒಗ್ಗರಣೆಗಿಡಿ. ಒಗ್ಗರಣೆಗೆ ಉದ್ದಿನ ಬೇಳೆಯೂ ಇರಲಿ. ಸಾಸಿವೆ ಸಿಡಿದ ನಂತರ ಹೋಳನ್ನು ಹಾಕಿ, ಅರ್ಧಲೋಟ ನೀರು ಹಾಕಿ. ಸೌಟಿನಿಂದ ಮಗುಚಿ ಮುಚ್ಚಿಟ್ಟು ಬೇಯಿಸಿ. ಬೆಂದ ನಂತರ ತೆಂಗಿನ ತುರಿ ಹಾಕಿ ಕೆಳಗಿಳಿಸಿ. ಊಟದ ಜೊತೆ ಗೆಣಸಿನ ಪಲ್ಯ ಸೂಪರ್...

2. ಬೋಂಡ
ಗೆಣಸು ಅರ್ಧ ಕೆ.ಜಿ, ಕಡಲೇ ಹಿಟ್ಟು ಕಾಲು ಕೆ.ಜಿ, ಹಿಂಗು, ಮೆಣಸಿನ ಹುಡಿ - ಮೂರು ಚಮಚ, ಉಪ್ಪು, ಎಣ್ಣೆ - ಕಾಲು ಲೀಟರ್.


ವಿಧಾನ : ಗೆಣಸನ್ನು ಬೇಕಾದ ಆಕಾರಕ್ಕೆ ತೆಳ್ಳಗೆ ಕತ್ತರಿಸಿ. ಕಡಲೆ ಹಿಟ್ಟಿಗೆ ಉಪ್ಪು, ಹಿಂಗು, ಮೆಣಸಿನ ಹುಡಿ ಹಾಕಿ ನೀರು ಹಾಕಿ ದೋಸೆ ಹಿಟ್ಟಿನಂತೆ ಕಲಸಿ. ಎಣ್ಣೆ ಕಾಯಲು ಇಟ್ಟು ಕತ್ತರಿಸಿದ ಗೆಣಸಿನ ಹೋಳನ್ನು ಹಿಟ್ಟಿನಲ್ಲಿ ಮುಳುಗಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ಎರಡೂ ಬದಿಯೂ ಕೆಂಪಾದ ನಂತರ ತೆಗೆಯಿರಿ. ಬಿಸಿ ಬಿಸಿ ಬೋಂಡಾ ತಿನ್ನಲು ಬಹುರುಚಿ.

- ಸುಮತಿ ಕೆ.ಸಿ.ಭಟ್ , ಆದೂರು.

0 comments:

Post a Comment