ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:44 PM

ಕಡಲಿಗೆ...

Posted by ekanasu

ಸಾಹಿತ್ಯ

ಕಡಲೆ ನಿನ್ನೊಡಲಲ್ಲಿ
ಮಿಸುಕಿದ್ದೆ ಮೊರೆದಿದ್ದೆ
ಉಸುಕಿನಲಿ ಹೆಜ್ಜೆಗಳು
ಅಳಿಸಿಹವೆ ಹೇಳು...


ಒಡಲ ಸುನಾಮಿಗಳಲ್ಲಿ
ಉಕ್ಕು ಭರತಗಳಲ್ಲಿ
ಅಲೆಯಲೆಯ ಲಾಸ್ಯವನು
ಮರೆತು ಬಿಟ್ಟೆಯೊ ಏನೋ

ಗಾಳಿ ಗೋಪುರಗಳಲಿ
ಮಂಜು ಮಹಲುಗಳಲ್ಲಿ
ನಿನ್ನ ಗಂಭೀರ ಮೌನವದು
ಕೇಳಿಸಲೆ ಇಲ್ಲ...

ನನ್ನ ಮೇಣದ ರೆಕ್ಕೆ
ಕರಗಿ ಸೋರಿರುವಾಗ
ನಿನ್ನ ನೀಲಿಯ ಆಳ
ಕಾಣಿಸಲೆ ಇಲ್ಲ...

- ಜಯಶ್ರೀ ಬಿ. ಕದ್ರಿ
ಮಂಗಳೂರು.

0 comments:

Post a Comment