ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೈನಂದಿನ ಕಾದಂಬರಿ : ಭಾಗ - 4

ಸಾಹಿತ್ಯ

ದಿನೇ ದಿನೇ ನಿನ್ನ ಆಫೀಸ್ ಸಮಯ ಹೆಚ್ಚಾಗ್ತಾ ಇದೆಯೇನೊ? ಈ ರೀತಿ ಕತ್ತೆ ದುಡಿದ ಹಾಗೆ ದುಡಿಯುದಾದ್ರೆ ಕೆಲಸಕ್ಕೆ ಹೋಗೋದು ಬೇಡಾಂತ ನಿನ್ನ ಅಪ್ಪ ಅಂದಿದ್ರು ಅವರಂದಾಗ ಆಶ್ಚರ್ಯದಿಂದ ತಲೆಯೆತ್ತಿದವಳು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಒಣ ನಗೆ ನಕ್ಕಳು.
'ಎಷ್ಟೊಂದು ಸುಲಭದಲ್ಲಿ ಕೆಲಸ ಬಿಟ್ಟು ಬಿಡು ಅಂದ್ರಲ್ಲಾ? ಅದು ಸಾಧ್ಯಾನಾ?' ಕೆಲಸ ಬಿಡುತ್ತೇನೆಂದರೂ ತನ್ನನ್ನು ಎತ್ತಿಕೊಂಡು ಹೋಗಿ ಕೆಲಸಕ್ಕೆ ಬಿಟ್ಟು ಬಂದಾರು ಅನಿಸಿತು.


ಜವಾಬ್ದಾರಿ ತೀರಾ ಹೆಚ್ಚಿದ ಮೇಲೆ ಇಂತಹ ವಿಷಯಗಳ ಜೊತೆಗೆ ರಾಜಿ ಮಾಡಿಕೊಳ್ಳಬೇಕಾಗಿರುವುದು ಅನಿವಾರ್ಯ. ಕೈ ಕಾಲು ತೊಳೆದು ಬಂದಾಗ ಸಂಜೆಯ ತಿಂಡಿ ಮೇಜಿನ ಮೇಲೆ ಇರಿಸಿ, ಈ ಹೊತ್ತಲ್ಲಿ ಕಾಫಿ ಕುಡಿಯೋದು ಬೇಡಾಂತ ಹಾರ್ಲಿಕ್ಸ್ ಮಾಡಿದ್ದೀನಿ ಕುಡಿ ಭಾಮಿನಿಯವರೆಂದಾಗ ಅವಳು ಮುಖ ಸಿಂಡರಿಸಿದಳು.

ನೋಟ ಕೈಗಡಿಯಾರದತ್ತ ಹೊರಳಿತು. ಸಂಪೂರ್ಣ ಏಳು ಗಂಟೆ. ಈ ಹೊತ್ತಿಗೆ ತಿಂಡಿ ತಿಂದ್ರೆ ರಾತ್ರಿಗೆ ಊಟನೇ ಸೇರುತ್ತಿರಲಿಲ್ಲ. ಇದನ್ನು ಬಿಟ್ಟು ಬಿಡೋಣವೆಂದರೆ ಅಮ್ಮ ಬಿಡುವುದಿಲ್ಲ. ಒಂದಷ್ಟು ತಿಂಡಿ ಹೊಟ್ಟೆ ಸೇರಿದ ಬಳಿಕ ಕಣ್ಣು ಮುಚ್ಚಿ ಕಹಿ ನುಂಗುವವರಂತೆ ಹಾರ್ಲಿಕ್ಸ್ ಗಂಟಲಿಗೆ ಸುರುವಿಕೊಂಡಳು.

ಬಟ್ಟೆ ಬದಲಾಯಿಸಿ ಬಂದವಳೇ ಕೆಲಸಕ್ಕೆ ಸೇರಿ ಒಂದು ವರ್ಷವಾಗಿದ್ದನ್ನು ನೆನಪಿಸಿಕೊಂಡು ಹಿಂದಕ್ಕೆ ಪರಾಮರ್ಶಿಸಿಕೊಂಡಳು. ಈ ರೀತಿಯ ಪ್ರಗತಿ ಬದುಕಿನಲ್ಲಿ ಎಂದೂ ನಿರೀಕ್ಷಿಸಿರಲಿಲ್ಲ. ನಿಖಿಲ್ ಕೂಡ ಒಳ್ಳೆಯವರೇ. ತನ್ನ ಮೇಲೆ ಅತಿಯಾದ ವಿಶ್ವಾಸ. ಅದಕ್ಕಾಗಿಯೇ ಇಷ್ಟೊಂದು ಜವಾಬ್ದಾರಿಗಳನ್ನು ಹೊರಿಸಿರುವುದು ಅನಿಸದಿರಲಿಲ್ಲ.

ತನ್ನ ಕೈಕೆಳಗೆ ಹತ್ತು ಜನರನ್ನು ನಿಯಂತ್ರಿಸುವ ತಾಕತ್ತು ತನಗೆ ಹೇಗೆ ಬಂತೊ? ಆಶ್ಚರ್ಯವಾದದ್ದು ಇದೆ. ನಿಖಿಲ್ನ ಬೆಂಬಲ, ಸಹೋದ್ಯೋಗಿಗಳ ಕೊ-ಆಪರೇಷನ್, ದೈವಬಲ ಎಲ್ಲವೂ ಇದಕ್ಕೆ ಕಾರಣ ಅನಿಸಿತು.
ಕೋಣೆಯಲ್ಲಿಯೇ ಉಳಿದು ಹಳೆಯ ಮ್ಯಾಗಜೀನ್ನನ್ನು ತಿರುವುತ್ತಿದ್ದಾಗ ನಿದ್ದೆ ಕಣ್ಣುಗಳನ್ನು ಬಲವಾಗಿ ಹಿಡಿಯಿತು. ರೆಪ್ಪೆಗಳು ಕಾದಿದ್ದಂತೆ ಒಂದಕ್ಕೊಂದು ಬೆಸೆದುಕೊಂಡಾಗ ಕಣ್ಣ ಮುಂದೆ ಕಂಪ್ಯೂಟರ್ ಪರದೆ ಮೂಡಿತು.

'ವಿಶ್ವಾಸವೇ ಬದುಕಿನಲ್ಲಿ ಬೆಳಕು ಮೂಡಿಸಬಲ್ಲುದು. - ಅರವಿಂದ್' ಮಿಂಚುಗಳು ಸುಳಿದಂತೆ ಕಣ್ಣು ಕೊರೈಸುವ ಪ್ರಖರ ಬೆಳಕೊಂದು ಮಿದುಳನ್ನು ಸೀಳಿ ನಿಂತಿತು. ಕಣ್ಣುಗಳನ್ನು ತೆರೆದು ಕುಳಿತಾಗಲೂ ಅದೇ ವಾಕ್ಯಗಳು ಕಂಡವು. 'ಅರವಿಂದ್' ತುಟಿಗಳು ಅದುರಿದಾಗ ಕೇಳಿಸಿದ ನವಿರಾದ ಹೆಸರು ಅದು. ಯಾರಾತ? ತನ್ನ ಇ-ಮೇಲ್ ಐಡಿ ಹೇಗೆ ಅವನಿಗೆ ತಿಳಿದಿದೆ? ಯಾರಿಗೋ ಕಳುಹಿಸುವ ಮೆಸೇಜ್ ತಪ್ಪಾಗಿ ತನಗೆ ಬಂತೆ?
ಮೇಲ್ ಅಳಿಸಿ ಹಾಕಿದರೂ ಮನಸ್ಸಿನೊಳಗೆ ಬೇರೂರಿದಂತೆ ಇವೆ ಆ ವಾಕ್ಯಗಳು, ಜೊತೆಗೆ ಹೆಸರು!

- ಅನು ಬೆಳ್ಳೆ.

ನಾಳೆಗೆ...

0 comments:

Post a Comment