ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಮಳೆಗಾಲ ಬಂತೆಂದರೆ ಗಿಡ ಮರಗಳಿಗೆ ಹಸಿರ ಚಿತ್ತಾರ. ನುಗ್ಗೆ ಮರವಂತೂ ಮೈ ತುಂಬಿ ಎಲೆಗಳ ಚಿತ್ತಾರ ಬರೆದುಬಿಡುತ್ತದೆ. ನುಗ್ಗೆ ಮರದ ಈ ಎಲೆಗಳನ್ನೇ ಬಳಸಿ ಅಂಬೊಡೆ ತಯಾರಿಸಬಹುದು...ಮಳೆಗಾಲದಲ್ಲಿ ನುಗ್ಗೆ ಸೊಪ್ಪಿನ ಅಂಬಡೆ ಸವಿ ಸವಿಯೋಣವೇ...ಬೇಕಾಗುವ ಸಾಮಾಗ್ರಿ : ಆಯ್ದ ನುಗ್ಗೆ ಸೊಪ್ಪು - ಎರಡು ಹಿಡಿ , ಕಡಲೇ ಬೇಳೆ - 1 ಕಪ್, ಹಸಿರು ಮೆಣಸು - 6, ನೀರುಳ್ಳಿ - 2, ಎಣ್ಣೆ - ಕಾಲು ಲೀಟರ್, ಉಪ್ಪು.
ಮಾಡುವ ವಿಧಾನ: ಕಡಲೇ ಬೇಳೆಯನ್ನು ಒಂದು ಘಂಟೆಗಳ ಕಾಲ ನೆನೆಹಾಕಿ. ನೀರುಳ್ಳಿ ಹಾಗೂ ಹಸಿರು ಮೆಣಸನ್ನು ಸಣ್ಣ ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ನಂತರ ಕಡಲೇ ಬೇಳೆಯನ್ನು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ತರಿ ತರಿಯಾಗಿ ರುಬ್ಬಿ. ಹೆಚ್ಚಿರಿಸಿದ ಹಸಿರು ಮೆಣಸು, ನೀರುಳ್ಳಿ ಹಾಗೂ ನುಗ್ಗೆ ಸೊಪ್ಪನ್ನು ಇದರೊಂದಿಗೆ ಸೇರಿಸಿ ಮಿಶ್ರಮಾಡಿ. ಪ್ಲಾಸ್ಟಿಕ್ ಹಾಳೆಗೆ ಎಣ್ಣೆ ಸವರಿ ಬೇಕಾದ ಆಕಾರದಲ್ಲಿ ವಡೆಯಂತೆ ತಟ್ಟಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ. ಈ ಗರಿ ಗರಿಯಾದ ವಡೆ ಮಳೆಗಾಲದಲ್ಲಿ ಚಹಾದೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

-ಸುಮತಿ ಕೆ.ಸಿ.ಭಟ್, ಆದೂರು.

0 comments:

Post a Comment