ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಸಿಹಿಯಾದ ಗೆಣಸಿನ ಹಲ್ವಾ ಬೇರೆ ಹಲ್ವಗಳಿಗಿಂತ ಹೆಚ್ಚು ರುಚಿ ನೀಡುತ್ತದೆ . ಮಾಡುವ ವಿಧಾನವು ಕೂಡ ಬಲು ಸುಲಭ . ಮನೆಯಲ್ಲಿಯೇ ಮಾಡಿ ಸವಿಯಿರಿ. ಬೇಕಾಗುವ ಸಾಮಗ್ರಿಗಳು : ಗೆಣಸು -೪-೫, ಸಕ್ಕರೆ - ೧ ಕಪ್, ತುಪ್ಪ - ಅರ್ಧ ಕಪ್ , ಏಲಕ್ಕಿ ಪುಡಿ - ಸ್ವಲ್ಪ,
ಗೋಡಂಬಿ ಮತ್ತು ದ್ರಾಕ್ಷಿ ಅಲಂಕರಿಸಲು .ಗೆಣಸನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಬೇಕು .


ಬೇಡ ನಂತರ ಸಿಪ್ಪೆ ತೆಗೆದು ನುರಿಯ ಬೇಕು . ಆ ನಂತರ ಬಾಣಲೆಗೆ ತುಪ್ಪವನ್ನು ಹಾಕಿ ನುರಿದಿಟ್ಟ ಗೆಣಸನ್ನು ಹಾಕಿ ಹುಟ್ಟಿನಿಂದ ಚೆನ್ನಾಗಿ ಕಲಸುತ್ತಿರಬೇಕು . ಈಗ ಸಕ್ಕರೆಯನ್ನು ಹಾಕಿ ಮಿಶ್ರ ಮಾಡಬೇಕು , ಸಕ್ಕರೆ ಕರಗಿ ಚೆನ್ನಾಗಿ ಮಿಶ್ರಗೊಂಡು ನಂತರ ಏಲಕ್ಕಿ ಪುಡಿಯನ್ನು ಹಾಕಿ ಹಲ್ವದ ಹದ ಬರುವವರೆಗೆ ಸೌಟಿನಿಂದ ಚೆನ್ನಾಗಿ ತಿರಿಸಬೇಕು. ನಂತರ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿದು ಹಾಕಬೇಕು . ಪ್ಲೇಟ್ ನಲ್ಲಿ ಹಾಕಿ ಚೌಕಾಕಾರವಾಗಿ ಕತ್ತರಿಸಲು ಬಹುದು ಅಥವಾ ಬೌಲ್ ನಲ್ಲಿ ಹಾಕಿಯೂ ತಿನ್ನಬಹುದು .


ಅರ್ಪಿತಾ ಹರ್ಷ

ಲಂಡನ್ .

0 comments:

Post a Comment