ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಮೈಸೂರಿನ ಹೊರವಲಯದಲ್ಲಿರುವ ನಮ್ಮ ಪುಟ್ಟ ಮನೆಗೆ ಚಿಕ್ಕದಾದ ಕೈತೋಟವೂ ಇದೆ. ಸ್ವಲ್ಪ ಹುಲ್ಲು ಹಾಸು, ಕೆಲವು ಹೂವು- ಹಣ್ಣಿನ ಗಿಡಗಳು ಬೆಳೆದು ನಿಂತು ನಮ್ಮ ಕಣ್ಣಿಗೆ ಮುದ ಕೊಡುತ್ತವೆ . ಹೂಗಳು ಗಿಡದಲ್ಲಿಯೇ ಇದ್ದರೆ ಚೆನ್ನ ಎಂದು ನನ್ನ ನಂಬಿಕೆ. ಬೆಳಗ್ಗೆ ವಾಕಿಂಗ್ ಹೋಗುವ ನೆಪದಲ್ಲಿ ಕೆಲವರು, ಬೇರೊಬ್ಬರ ಮನೆಯ ಅಂಗಳದಲ್ಲಿ ಅರಳಿದ ಹೂವನ್ನು ಕದ್ದು ತಂದು ತಮ್ಮ ಮನೆಯ ದೇವರಿಗೆ ಅರ್ಪಿಸಿ ಧನ್ಯರಾಗುತ್ತಾರೆ. ನಾನು ಗಮನಿಸಿದಂತೆ ಮಲ್ಲಿಗೆ, ದಾಸವಾಳ ಇತ್ಯಾದಿ ಪೂಜೆಗೆ ಬಳಸುವ ಹೂಗಳಿಗೆ 'ಕಳ್ಳ' ರು ಹೆಚ್ಚ್ಚು.ಆದರೆ ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುರ್ಗಾ ಪೂಜೆಗೆ ಅತಿ ಶ್ರೇಷ್ಥವೆಂದು ಪರಿಗಣಿಸುವ 'ಕೇಪುಳ' ಹೂವನ್ನು ಇಲ್ಲಿ ಯಾರು ಕೀಳುವುದಿಲ್ಲ. ಅದಕ್ಕೆ ಕೇವಲ ಅಲಂಕಾರಿಕ ಹೂವಿನ ಸ್ಥಾನ. ಹಾಗಾಗಿ ನಮ್ಮ ಮನೆಯ ಮುಂದೆ ರಸ್ತೆ ಬದಿಯಲ್ಲಿ ಹಾಕಿರುವ ಕೇಪುಳ ಹೂವಿನ ಗಿಡವು, ಹಲವಾರು ವರ್ಷಗಳಿಂದ ನಿರಾತಂಕವಾಗಿ ಕಂಗೊಳಿಸುತ್ತಿದೆ .

ಪ್ರತಿದಿನವೂ ಮನೆ ಕೆಲಸದ ಗಡಿಬಿಡಿ, ಕೆಲಸಕ್ಕೆ ಹೊರಡುವ ತರಾತುರಿಯಲ್ಲಿ, ತಕ್ಕ ಮಟ್ಟಿಗೆ ನಾಸ್ತಿಕತೆಯು ಜತೆಗೂಡಿ ಯಾವುದೇ ಪೂಜೆ -ಪುನಸ್ಕಾರ ಮಾಡದೆ ಇರುವವಳು ನಾನು. ಹಾಗಾಗಿ, ನಮ್ಮ ಮನೆಯ ಅಂಗಳದಿ ಬೆಳೆದ ಹೂವನ್ನು, ತಮ್ಮ ಮನೆಯ ದೇವರಿಗೆ ಅರ್ಪಿಸಿ, ತಾವು ಪೂಜೆ ಮಾಡಿ, ನನ್ನ ಅರಿವಿಗೇ ಬಾರದಷ್ಟು ಸೌಜನ್ಯದಿಂದ, ನನ್ನ ಪುಣ್ಯದ ಅಕೌಂಟ್ ಗೆ ಜಮೆ ಮಾಡುವ ನಾಗರಿಕರಿಗೆ ನಮೋ ನಮ:!


ಹೇಮಮಾಲಾ. ಬಿ , ಮೈಸೂರು.

2 comments:

Anonymous said...

ಹಾಗಿದ್ರೆ ನಿಮ್ಮ ವಿಳಾಸ ತಿಳಿಸಿ... ನಿಮ್ಮ ಪುಣ್ಯದ ಖಾತೆಗೆ ಮತ್ತಷ್ಟು ಜಮೆ ಯಾಗುವಂತೆ ನೋಡಿಕೊಳ್ಳುತ್ತೇವೆ... ಹಾಗೆಯೆ ಮತ್ತಷ್ಟು ಹೂಗಿಡಗಳನ್ನು ಕಂಪೌಂಡ್ ಬದಿಯಲ್ಲಿ ಹಾಕುವುದನ್ನು ಮರೆಯಬೇಡಿ. ಏಕೆಂದರೆ ವಾಕಿಂಗ್ ಗೆ ಬರುವ ವಯಸ್ಸಾದವರಿಗೆ ಕಂಪೌಂಡ್ ಹಾರಿಬರಲು ಅಥವ ಗೇಟ್ ತೆಗೆದು ಬರಲು ಹಿಂಸೆ ಯಾಗುತ್ತದೆ.
ಇತಿ ಹೂ ಕಳ್ಳರ ಹಿತ ರಕ್ಷಣಾ ಸಮಿತಿ
;) :)

Anonymous said...

ಹಾಗಿದ್ರೆ ನಿಮ್ಮ ವಿಳಾಸ ತಿಳಿಸಿ... ನಿಮ್ಮ ಪುಣ್ಯದ ಖಾತೆಗೆ ಮತ್ತಷ್ಟು ಜಮೆ ಯಾಗುವಂತೆ ನೋಡಿಕೊಳ್ಳುತ್ತೇವೆ... ಹಾಗೆಯೆ ಮತ್ತಷ್ಟು ಹೂಗಿಡಗಳನ್ನು ಕಂಪೌಂಡ್ ಬದಿಯಲ್ಲಿ ಹಾಕುವುದನ್ನು ಮರೆಯಬೇಡಿ. ಏಕೆಂದರೆ ವಾಕಿಂಗ್ ಗೆ ಬರುವ ವಯಸ್ಸಾದವರಿಗೆ ಕಂಪೌಂಡ್ ಹಾರಿಬರಲು ಅಥವ ಗೇಟ್ ತೆಗೆದು ಬರಲು ಹಿಂಸೆ ಯಾಗುತ್ತದೆ.
ಇತಿ ಹೂ ಕಳ್ಳರ ಹಿತ ರಕ್ಷಣಾ ಸಮಿತಿ
;) :)

Post a Comment