ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ...

ಜನಪ್ರಿಯ ಜನಹಿತ ಕಾರ್ಯಕ್ರಮವಾಗಿ ಮೂಡಿಬರುತ್ತಿರುವ 'ಸತ್ಯಮೇವ ಜಯತೆ ', ಯ ಬಗ್ಗೆ ಒಳ್ಳೆ ಮಾತುಗಳು ಕೇಳಿಬರುತ್ತಿವೆ . ಒಳ್ಳೆಯ ಪರಿಕಲ್ಪನೆ, ಉದ್ದೇಶ ಹೊಂದಿರುವ ಕಾರ್ಯಕ್ರಮ ಸ್ವಾಗತಾರ್ಹ. ಕಳೆದ episode ನಲ್ಲಿ ಅಮೀರ್ ಖಾನ್ ನಡಿಸಿಕೊಟ್ಟ "is love a crime " ತಲೆ ಬರಹದಡಿಯಲ್ಲಿ ಕಾರ್ಯಕ್ರಮ ಯೋಚಿಸಲರ್ಹವಾಗಿತ್ತು." ಪ್ರೇಮ ವಿವಾಹದ", ಸುತ್ತ ಮುತ್ತ ಎಳೆ ಎಳೆ ಯಾಗಿ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಅನೇಕ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ . ಪ್ರೇಮ ವಿವಾಹಿತರ ತಂದೆ ತಾಯಿಗಳಿಗೆ ಅವರನ್ನು ಆಶೀರ್ವಾದಿಸುವಂತೆ ಮನವಿಸಿಕೊಂಡಿದ್ದಾರೆ.

ಸರಿಯೇ, ತಪ್ಪೇನೂ ಇಲ್ಲ ... ಆದರೆ ಅಮೀರ್ ಖಾನ್ ರವರು ಪ್ರೇಮ ವಿವಾಹದ ಕೇವಲ ಒಂದು ಮುಖವನ್ನು ಪರಿಚಯಿಸಿದ್ದಾರೆ . ಇಬ್ಬರು ಪ್ರಬುದ್ದ ಜವಾಬ್ದಾರಿಯುತ ವ್ಯಕ್ತಿಗಳು ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವುದು , ಆಗು ಹೋಗುಗಳ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ,ಒಳ್ಳೆಯ ಆರೋಗ್ಯವಂತ ಪರಿಸರ ಸಮಾಜ ನಿರ್ಮಾಣಕ್ಕೆ ಸಹಾಯಕವೇ .ತಂದೆ ತಾಯಿ ,ಸಮಾಜ ಸಣ್ಣ ಪುಟ್ಟ ವಿರೋದ ಸಹಜವೇ , ಪ್ರೇಮಿಗಳು ಜವಾಬ್ದಾರಿಯುತವಾಗಿ ತಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಂಡು ಧೃಡವಾದ ಸಮತೋಲನ ವ್ಯಕ್ತಿತ್ವ ,ಬಾಂಧವ್ಯ ಹೊಂದಿದಾಗ ಕಾಲಾಂತರದಲ್ಲಿ ಎಲ್ಲರಿಂದಲೂ ಒಪ್ಪಲ್ಪಡುತ್ತದೆ...ಗೌರವಿಸಲ್ಪಡುತ್ತದೆ ಅಂತ ಎಷ್ಟೋ ಉದಾಹರಣೆಗಳು ಕಂಡುಬರುತ್ತವೆ.

ಆದರೆ ...
ಬದುಕಲ್ಲಿ ನೆಲೆಗೊಳ್ಳುವ ಮೊದಲೇ , ಜವಾಬ್ದಾರಿಯನ್ನು ಆರಿಯುವ ಮೊದಲೇ , ತಮ್ಮನ್ನು ತಾವು ಅರ್ಥಮಾಡಿಕೊಳ್ಳುವ ಮೊದಲೇ , ಪ್ರಪಂಚದ ವಾಸ್ತವತೆಯನ್ನು ಅರಿಯುವ ಮೊದಲೇ ಕೇವಲ ಭಾವೋನ್ಮಾದದ ಆಧಾರದ ಮೇಲೆ ಕಟ್ಟಿಕೊಳ್ಳುವ ಸಂಬಂಧಗಳ ಆಯುಷ್ಯ ತೀರ ಕಡಿಮೆ . ತನ್ನ ಅಭಿರುಚಿ , ತನ್ನ ಗುರಿ ,ತನ್ನ ಕನಸು,ತನ್ನ ಮೌಲ್ಯಗಳು ಬದುಕಿನೆದೆಗಿನ ತನ್ನ ದೃಷ್ಟಿಕೋನ ಯಾವೂದನ್ನೂ ಯೋಚಿಸದೆ ಕೇವಲ ಪ್ರೇಮ ,ಭಾವೋನ್ಮಾದ, ಆಕರ್ಷಣೆ ಎಳೆಯಲ್ಲಿ ಸಿಕ್ಕಿಕೊಳ್ಳುವ ಪ್ರೇಮ ಕಾಲಾಂತರದಲ್ಲಿ ಉನ್ಮಾದ ಕಳಚುತ್ತ , ಬಾಂಧವ್ಯ ಸಡಿಲಿಸುತ್ತ ಮನಗಳು ಮದುವೆಗಳು ಮುರಿಯುವತ್ತ ಹೆಜ್ಜೆ ಹಾಕುತ್ತವೆ .

" ಬದುಕಲ್ಲಿ ನೆಲೆಗೊಳ್ಳುವ ಮೊದಲೇ ವಿವಾಹದ ವಿಷಯದಲ್ಲಿ ಯಾವುದೇ ನಿರ್ಧಾರಕ್ಕೆ ಬರಬೇಡಿ. ಮೊದಲು ನಿಮ್ಮ ಕಾಲ ಮೇಲೆ ನೀವು ನಿಂತುಕೊಳ್ಳಿ , ನಿಮ್ಮ ನಿಮ್ಮ ಬದುಕನ್ನು ರೂಪಿಸಿಕೊಳ್ಳಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳಿ ,ತುಂಬಾ ಕಾಲಾವಕಾಶ ತೆಗೆದುಕೊಳ್ಳಿ , ಕಾಲಕ್ಕಿಂತ ಪರೀಕ್ಷೆ ಮತ್ತೊಂದಿಲ್ಲ , ಇಷ್ಟಾದ ಮೇಲೂ ನಿಮ್ಮ ಸಂಗಾತಿಯನ್ನು ನೀವು ಪ್ರೀತಿಸುತ್ತಿದ್ದರೆ , ಮದುವೆಯಾಗಲೂ ನಿರ್ಧರಿಸಿದರೆ go ahead !" ಅನ್ನುವ ತರದ ಸಂದೇಶವನ್ನು ಅಮೀರ್ ಖಾನ್ ರವರು ಕೊಟ್ಟಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು .
ಕೊನೆಯಲ್ಲಿ... ಪ್ರೇಮ " crime " ಅಲ್ಲದಿರಬಹುದು , ಆದರೆ ದುಡುಕಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಬದುಕನ್ನೇ "crime " ಆಗಿಸಬಹುದು .

ಚೈತ್ರ ಬಿ.ಜಿ.ಕಾನುಗೋಡು .

8 comments:

Anonymous said...

Chittaranjan Das - In North India... love marraige is crime.. own father kills his daughter and announces it is honour killing.. in Bangalore lover marraige hesarinalli muslim hudugaru namma hudugirige mosa maaduttiddare.. That is why this is now became hot issue in the country

K. Ashok said...

ಹಾಲು ಕುಡಿದ ಮಕ್ಕಳೇ ಬದುಕಲು ಕಷ್ಟ ಪಡುವಾಗ(ಜೀವನ ರೂಪಿಸಿಕೊಳ್ಳಲು), ಇನ್ನು ವಿಷ ಕುಡಿದ ಮಕ್ಕಳು ಬದುಕಲು ಸಾದ್ಯವೇ?

ಹಿರಿಯರು ನಿಂತು ಮಾಡಿದ ಮದುವೆಗಳೇ ಮುರಿದು ಹೋಗುತ್ತಿರುವಾಗ ಪ್ರೇಮ ವಿವಾಹಗಳು ಬಾಳುವದು ಕಷ್ಟವಲ್ಲವೇ?

ಓಡಿ ಹೋಗಿ ಮಾಡಿಕೊಂಡ ಮದುವೆಗಳು ಎಷ್ಟು ದಿನ ಬಾಳಬಹುದು?

ಕಾಲಯ್ ತಸ್ಮಯ್ ನಮಃ . ಕಾಲವೇ ನಿರ್ಧರಿಸಬೇಕು? ಜೀವನದಲ್ಲಿ ಹಣ, ವಿದ್ಯೆ, ಮನೆಯವರ ಸಪೋರ್ಟ ಇಲ್ಲದಿದ್ದರೆ ಬದುಕು ನರಕವಾಗಬಹುದು. ದುಡುಕಿನ ನಿರ್ಧಾರ ಬದುಕನ್ನೇ ಹಾಳು ಮಾಡಬಹುದು? K. ASHOK.

Anonymous said...

K Ashok Udupa : ಹಾಲು ಕುಡಿದ ಮಕ್ಕಳೇ ಬದುಕಲು ಕಷ್ಟ ಪಡುವಾಗ(ಜೀವನ ರೂಪಿಸಿಕೊಳ್ಳಲು), ಇನ್ನು ವಿಷ ಕುಡಿದ ಮಕ್ಕಳು ಬದುಕಲು ಸಾದ್ಯವೇ?

ಹಿರಿಯರು ನಿಂತು ಮಾಡಿದ ಮದುವೆಗಳೇ ಮುರಿದು ಹೋಗುತ್ತಿರುವಾಗ ಪ್ರೇಮ ವಿವಾಹಗಳು ಬಾಳುವದು ಕಷ್ಟವಲ್ಲವೇ?

ಓಡಿ ಹೋಗಿ ಮಾಡಿಕೊಂಡ ಮದುವೆಗಳು ಎಷ್ಟು ದಿನ ಬಾಳಬಹುದು?

ಕಾಲಯ್ ತಸ್ಮಯ್ ನಮಃ . ಕಾಲವೇ ನಿರ್ಧರಿಸಬೇಕು? ಜೀವನದಲ್ಲಿ ಹಣ, ವಿದ್ಯೆ, ಮನೆಯವರ ಸಪೋರ್ಟ ಇಲ್ಲದಿದ್ದರೆ ಬದುಕು ನರಕವಾಗಬಹುದು. ದುಡುಕಿನ ನಿರ್ಧಾರ ಬದುಕನ್ನೇ ಹಾಳು ಮಾಡಬಹುದು

Anonymous said...

Ramesha Hegade - sir love maadi madve aagodu tappalla,aadre nammanna saaki salahida aa muddu mukhada thande thaye yanna maretu avara virudda namma nirdhara thogo baardu
nav hyage namma heriyavaranna martevo ade thara namma makkalu nammanna maretare hyage antha yochisi

Anonymous said...

Gundappa Patil · - they all doing for money
2 hours ago · Like

Anonymous said...

Gundappa Patil ·-: if they want to root out such problems in the indian society they should do it free from money and fame bcoz i think these all are drama from popular peoples

Anonymous said...

Sowmya Sowmya Kulal-: really a gud prgrm

Anonymous said...

The system of Indian society is quite different from that of America . Here the family phenomenon takes deserving responsbility for its offsprings to get married . Ofcourse now a dayes girls have promoted themselves on par with boys in all walkes of life. Parents in our society have been convinced with this substantial matter. So they really will be in search of equivalent groom to their daughter. In between such an enthusiasm why does a girl or a boy fall in love with unwarrentable alliance in a hurry which may in future be resulted in a disaster, Because in major cases immatured minds stumble in the love affaires.

- M Ganapathi , Kangod . Sagar -Shimoga

Post a Comment