ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಆಡಳಿತ ಯಂತ್ರ ಕುರುಡಾಗಿದೆಯೇ...?

ಸೇಡಂ(ಗುಲ್ಬರ್ಗಾ) : ಪಟ್ಟಣದ ಓಲ್ಡ್ ಸಿಟಿ ಎಂದೇ ಕರೆಯಲ್ಪಡುವ ದೊಡ್ಡ ಅಗಸಿ ಬಡಾವಣೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.ಇಲ್ಲಿನ ರಸ್ತೆಗಳಲ್ಲಿ ಮನುಷ್ಯರು ಓಡಾಡಲು ಅಸಾಧ್ಯ. ಕಾರಣ ಗೋ ಮಾತೆಯ ರಕ್ತ ರಸ್ತೆ ತುಂಬೆಲ್ಲಾ ಹರಿದಾಡುತ್ತಿರುತ್ತದೆ. ಗೋವಿನ ರುಂಡ, ಅಂಗಾಂಗಗಳು ರಸ್ತೆಯಲ್ಲಿ ಬಿದ್ದು ಕರಳು ಹಿಚುಕುವಂತಾಗುತ್ತದೆ. ಅಧಿಕಾರಿಗಳು, ಜನಪ್ರತಿನಿಧಿಗಳು ತಕ್ಷಣ ಇತ್ತ ಗಮನ ಹರಿಸಬೇಕು. ಈ ಸಮಸ್ಯೆಗೊಂದು ಪರಿಹಾರ ನೀಡಬೇಕು.

ಐತಿಹಾಸಿಕ ಹಿನ್ನಲೆಯುಳ್ಳ ಜಿಲ್ಲೆದರ್ಗಾ ಹಾಗೂ ಹನುಮಾನ ದೇವಾಲಯ ವಿದೆ. ಊರ ಹೊರಗೆ ಹನುಮಾನ ದೇವಾಲಯ ಇದ್ದಲ್ಲಿ, ಊರಿಗೆ ಕೆಡುಕಾಗುವುದಿಲ್ಲವೆಂಬ ಅನಾಧಿಕಾಲದ ನಂಬಿಕೆ ಜನರನ್ನು ಭಯದಿಂದ ದೂರವಿಟ್ಟಿರುವುದು ತಿಳಿದ ಸಂಗತಿ. ಅದೇ ರೀತಿ ಈ ಓಣಿಯಲ್ಲಿರುವ ಹನುಮಾನ ದೇವಾಲಯ ಸುತ್ತಲಿನ ನಾಲ್ಕಾರು ಬಡಾವಣೆ ನಿವಾಸಿಗಳ ಆರಾಧ್ಯ ದೈವ ಕೂಡ. ಆದರೆ ದುರದೃಷ್ಟಕರ ವಿಷಯವೆಂದರೆ ಗೋವು, ದನ, ಕರು, ಕುರಿ, ಕೋಳಿ ಮತ್ತು ಮೀನುಗಳ ಮೌಂಸ ಮಾರಾಟದ ಪ್ರಮುಖಸ್ಥಾನವೂ ಇದೇ ದೊಡ್ಡ ಅಗಸಿ ಬಡಾವಣೆ.

ರಕ್ತಸಿಕ್ತ ನೀರಲ್ಲಿ ದರುಶನದ ಭಾಗ್ಯ

ಬೆಳಗಾದರೆ ದನ ಕರುಗಳ ಅನುಪಯುಕ್ತ ತುಂಡುಗಳನ್ನು ದೇವಾಲಯದ ಸುತ್ತಲೂ ಎಸೆದಿರುವುದು ಕಾಣಸಿಗುತ್ತದೆ. ಗೋಮಾತೆಯನ್ನು ಕತ್ತರಿಸಿ ರಕ್ತವನ್ನು ನಾಲೆಯಲ್ಲಿ ಬಿಡಲಾಗುತ್ತಿದೆ, ಇದರಿಂದ ಚಿಕ್ಕದಾಗಿ ನಿರ್ಮಿಸಿರುವ ಚರಂಡಿಗಳಲ್ಲಿ ನೀರು ಸರಾಗವಾಗಿ ಸಾಗಲು ಸಾಧ್ಯವಾಗದೆ ರಕ್ತತುಂಬಿದ ಚರಂಡಿ ನೀರು ರಸ್ತೆಯುದ್ದಕ್ಕೂ ಹರಿಯುತ್ತಿದೆ. ರಕ್ತ ಮಿಶ್ರಿತ ಕೊಳಚೆ ನೀರಿನಲ್ಲಿ ನಡೆದೇ ದೇವರ ದರುಶನ ಪಡೆಯುವ ಇಲ್ಲಿನ ಜನರ ಪಾಡು ಹೇಳತೀರದು.

ಪ್ರತಿದಿನ ಹಲವಾರು ಗೋವುಗಳ ಮಾರಣಹೋಮ ಇಲ್ಲಿ ನಡೆಯುತ್ತಿದೆ, ಹತ್ತಾರು ಖಸಾಯಿ ಖಾನೆಗಳನ್ನು ಹೊಂದಿರುವ ಈ ಬಡಾವಣೆ ತಾಲೂಕಿನುದ್ದಕ್ಕೂ ಗೋಮಾಂಸವನ್ನು ರವಾನಿಸುತ್ತದೆ. ಖಸಾಯಿಖಾನೆ ಸುತ್ತಲೂ ವಿವಿಧ ಜನಾಂಗದ ಜನರು ವಾಸಿಸುತ್ತಾರೆ, ದಿನದ 24 ಗಂಟೆಗಳೂ ಇಲ್ಲಿನ ಚರಂಡಿಗಳಲ್ಲಿ ಗೋಮಾಂಸ ಮತ್ತು ರಕ್ತ ಸಾಮಾನ್ಯವಾಗಿರುತ್ತದೆ.


ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿ ಬಲಿ ನಿಷೇಧವಿದ್ದರೂ ಕೇಳೋರೆ ಇಲ್ಲದಂತಾಗಿದೆ. ಪ್ರಾಣಿ ಬಲಿ ನಿಷೇಧ ಕಾಯ್ದೆ 1959ರ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿ ಬಲಿ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ, ಇಲ್ಲಿ ಸುತ್ತಲೂ ಮನೆಗಳಿವೆ ಪ್ರತಿದಿನ ಜನರ ಕಣ್ಣಿಗೆ ಚುಚ್ಚುವಂತೆ ದನಗಳನ್ನು ಕಡಿಯಲಾಗುತ್ತಿದೆ. ಮತ್ತೊಂದೆಡೆ ಐಪಿಸಿ ಸೆಕ್ಷನ್ 428 ಮತ್ತು 429 ರ ಪ್ರಕಾರ ಪ್ರಾಣಿ ಬಲಿ ಮಾಡಬಾರದು. ಒಂದು ವೇಳೆ ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿ ಬಲಿ ಮಾಡಿದರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ಜಿಲ್ಲಾಧಿಕಾರಿಗಳಿಗಿದೆ.

ದೇವಾಲಯದ ಸುತ್ತಲೂ ಮಲಮೂತ್ರ ವಿಸರ್ಜನೆ

ಒಂದೆಡೆ ಗೋ ವಧೆ. ,ಮತ್ತೊಂದೆಡೆ ದೇವಾಲಯದ ಸುತ್ತಲೂ ಮಲ, ಮೂತ್ರ ವಿಸರ್ಜನೆ... ಒಟ್ಟಿನಲ್ಲಿ ಇಲ್ಲಿ ಯಾವುದೇ ಶುಚಿತ್ವದ ಬಗೆಗೆ ಗಮನವಿಲ್ಲ. ದೇವಾಲಯದ ಪಕ್ಕದಲ್ಲಿಯೇ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೂ ಇದೆ. ಆದರೆ ಪುರಸಭೆ ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಂತಿದ್ದಾರೆ.

ನಿರಂತರ ಪ್ರಾಣಿಬಲಿ, ಬಯಲು ಶೌಚಾಲಯದಿಂದಾಗಿ ಸಾಂಕ್ರಾಮಿಕ ರೋಗ ಭೀತಿ ಇದೀಗ ತಲೆಯೆತ್ತಿದೆ. ರಸ್ತೆಯದ್ದಕ್ಕೂ ಈ ರೀತಿಯ ಕೊಳಚೆ ಹರಿದಾಡುವುದರಿಂದ ರಸ್ತೆ - ರಸ್ತೆ ಬದಿಗಳಲ್ಲಿ ನಡೆದುಕೊಂಡು ಹೋಗಲೂ ಕಷ್ಟದ ಸಂದರ್ಭ ಒದಗಿಬಂದಿದೆ. ಸಂಬಂಧಿತ ಅಧಿಕಾರಿಗಳು ಶೀಘ್ರ ಕಾರ್ಯಪ್ರವೃತ್ತರಾಗಬೇಕಾಗಿದೆ.

- ಶಿವಕುಮಾರ ನಿಡಗುಂದಾ
ಸೇಡಂ, ಗುಲಬರ್ಗಾ.

0 comments:

Post a Comment