ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:56 PM

ಪುಟ್ಟ ಗೌರಿ

Posted by ekanasu

ಸಾಹಿತ್ಯ

ನಮ್ಮ ಮುದ್ದಿನ ಮಗಳು
ತುಂಗ ಭದ್ರೆಯಲ್ಲ
ಯೇಟ್ಸ್ ಮಹಾಕವಿಯ
ಸ್ಫೂರ್ತಿಯೂ ಅಲ್ಲ
ಆದರೂ ಈ ಹುಡುಗಿ
ಘಲ್ಲು ಘಲ್ಲೆನುತ

ನಮ್ಮ ಮನೆಯಲ್ಲೆಲ್ಲ
ಗೆಜ್ಜೆ ನುಡಿಸಿದಳು
ಎಳೆದನಿಯ ಸೊಬಗಿನಲಿ


ಜಗವ ತೋರಿದಳು
ಯಾರೀಕೆ ಎಲ್ಲಿಂದ
ನಮಗಾಗಿ ಬಂದವಳು

ನಮ್ಮ ಜೀವದ ತಂತಿ
ಮಿಡಿದು ನಿಂತವಳು
ಅಪ್ಪ ಅಮ್ಮನ ಒಲವು
ಕೋಪ ತಾಪಕ್ಕೆಲ್ಲ
ಸಾಕ್ಷಿಯಾಗುತ ನಿತ್ಯ
ನಮ್ಮ ಪೊರೆವವಳು...

- ಜಯಶ್ರೀ ಬಿ. ಕದ್ರಿ, ಮಂಗಳೂರು.
ಚಿತ್ರ: ಆದೂರು.

0 comments:

Post a Comment