ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಇಂದಿನ ರುಚಿ

ಕಣಿಲೆಯ ಗಸಿ
ಬೇಕಾಗುವ ಸಾಮಾನು-ಕಣಿಲೆ ತುಂಡು1/2 ಕೆ.ಜಿ,ತೊಗರೀ ಬೇಳೆ 1/2 ಕಪ್,ಒಣ ಮೆಣಸು 2,ಬೆಳ್ಳುಳ್ಳಿ ಆರೇಳು ಎಸಳು,ಕಾಳು ಮೆಣಸು ಏಳೆಂಟು ಕಾಳು,ಚಿಟಿಕೆ ಅರಿಸಿನ ಹುಡಿ,ಕೊತ್ತಂಬರಿ 1/2 ಚಮಚ,ತುಸು ಇಂಗು,ಹುಳಿ 1/2 ನೆಲ್ಲಿಕಾಯಿ ಗಾತ್ರ,ತೆಂಗಿನ ತುರಿ 1 ಕಪ್,ಹಸಿಮೆಣಸು 3,ಒಗ್ಗರಣೆ ವಸ್ತು ಮತ್ತು ಉಪ್ಪು.

ಮಾಡುವ ವಿಧಾನ-ಕಣಿಲೆಯನ್ನು ತುರಿದು ಬೇಯಿಸಿ ನೀರು ಸೋಸಿ.ತೊಗರೀ ಬೇಳೆ ಬೇಯಿಸಿ ಅದಕ್ಕೆ ಹಸಿ ಮೆಣಸು ಸೀಳಿ ಹಾಕಿ ಕಣಿಲೆ ಹೋಳನ್ನೂ ಹಾಕಿ ಉಪ್ಪು ಹಾಕಿ,ಮಸಾಲೆ ಸಾಮಾಗ್ರಿಗಳನ್ನು ಎಣ್ಣೆ ಹಾಕಿ ಹುರಿದು ತೆಂಗಿನ ತುರಿಯೊಂದಿಗೆ ನುಣ್ಣಗೆ ದಪ್ಪವಾಗಿ ರುಬ್ಬಿ ಬೆಂದ ಹೋಳಿಗೆ ಹಾಕಿ ಅರಿಸಿನ ಹುಡಿಯನ್ನು ಹಾಕಿ ಕುದಿಸಿ ಒಗ್ಗರಣೆ ಕೊಡಿ.


ಕಣಿಲೆ ಪಲ್ಯ
ಬೇ.ಸಾ-ಕಣಿಲೆ ತುಂಡು 1/2 ಕೆ.ಜಿ,ಮೆಣಸಿನ ಹುಡಿ 2 ಚಮಚ,ಬೆಲ್ಲ ಸಣ್ಣ ನಿಂಬೆ ಗಾತ್ರ,ಹುಳಿ ನೆಲ್ಲಿಕಾಯಿ ಗಾತ್ರ,ಚಿಟಿಕೆ ಅರಿಸಿನ ಹುಡಿ,ಉಪ್ಪು,ಒಗ್ಗರಣೆ ವಸ್ತು ಮತ್ತು ತೆಂಗಿನ ತುರಿ 1/2 ಕಪ್.
ಮಾ.ವಿ- ಕಣಿಲೆಯನ್ನು ತುರಿದು ಬೇಯಿಸಿ ನೀರು ಸೋಸಿ.ಉದ್ದಿನ ಬೇಳೆ ಸಹಿತ ಒಗ್ಗರಣೆಗಿಟ್ಟು ಸಾಸಿವೆ ಸಿಡಿದ ನಂತರ ಕಣಿಲೆ ತುರಿ ಉಪ್ಪು ಬೆಲ್ಲ,ಮೆಣಸಿನ ಹುಡಿ,ಅರಿಸಿನ ಹುಡಿ,ಹುಳಿ ಎಲ್ಲವನ್ನು ಹಾಕಿ ಕೆದಕಿ ಸ್ವಲ್ಪವೇ ನೀರು ಹಾಕಿ ಸಣ್ಣ ಉರಿಯಲ್ಲಿಡಿ.ನೀರಾರಿದ ನಂತರ ತೆಂಗಿನ ತುರಿ ಹಾಕಿ ಕೆಳಗಿಳಿಸಿ.ಈ ಪಲ್ಯ ತುಪ್ಪದ ಅನ್ನದೊಂದಿಗೆ ಉಣ್ಣಲು ರುಚಿಯಾಗಿರುತ್ತದೆ.

-ಸುಮತಿ ಕೆ.ಸಿ. ಭಟ್ ಆದೂರು

0 comments:

Post a Comment