ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಕಾಲ ಬದಲಾಗಿದೆ...ಜನ ಆಧುನಿಕತೆಯ ಸೋಗಿನಲ್ಲಿ ತಮ್ಮ ತನವನ್ನೇ ಮರೆತುಬಿಡುತ್ತಿದ್ದಾರೆ. ಇಂದಿನ ಜನಕ್ಕೆ ಕನಿಷ್ಠ ಜ್ಞಾನವೂ ಇಲ್ಲ ಎಂದೇ ಹೇಳಬಹುದು.


ಪವಿತ್ರ ಕ್ಷೇತ್ರಗಳಲ್ಲಿ, ಸಾರ್ವಜನಿಕ ಸ್ಥಳಗಲ್ಲಿ ಹೇಗೆ ವರ್ತಿಸಬೇಕೆಂಬುದು ತಿಳಿದಿಲ್ಲ.ಇದಕ್ಕೊಂದು ಸ್ಪಷ್ಟ ನಿದರ್ಶನ ಔಷಧಿಗುಣದ ಪವಿತ್ರ ಜಲಧಾರೆ .
ಚಿಕ್ಕಮಗಳೂರು ಅರಣ್ಯ ವಿಭಾಗಕ್ಕೆ ಒಳಪಟ್ಟಿರುವ ಔಷಧಿಗುಣದ ಪವಿತ್ರ ಜಲಧಾರೆ "ಹೊನ್ನಮ್ಮನಹಳ್ಳ ಶೋಲಾ ಅರಣ್ಯ ಪ್ರದೇಶ" ಇಂದು ಪ್ರವಾಸಿಗರ ಕೈಯಲ್ಲಿ ನಲುಗಿ ಹೋಗುತ್ತಿದೆ.


ಶ್ರೀ ಆದಿಮಾತೆ ಎಂದೇ ಕರೆಯಲ್ಪಡುವ ಹೊನ್ನಮ್ಮದೇವಿ ದೇವಾಲಯವೂ ಇಲ್ಲಿದೆ. ಅತ್ತಿಗುಂಡಿ ಎಂಬ ಇಳಿಜಾರು ಪ್ರದೇಶದಲ್ಲಿ ಈ ದೇಗುಲವಿದೆ. ಇಲ್ಲೇ ಘಟ್ಟದ ಭಾಗದಿಂದ ಹಲವು ಸಸ್ಯ ಪ್ರಭೇದಗಳ ನಡುವಿನಲ್ಲಿ ಹರಿದು ಬರುವ ಔಷಧಿಯುಕ್ತ ಪವಿತ್ರ ಜಲಧಾರೆಇದೆ. ಹೆದ್ದಾರಿಯಂಚಲ್ಲೇ ಇರುವ ಈ ಜಲಧಾರೆಯನ್ನು ಕಂಡು ಪ್ರವಾಸಿಗರು ಅತ್ತ ಸಾಗುತ್ತಾರೆ.


ತಮ್ಮಲ್ಲಿದ್ದ ಕಸ, ಪ್ಲಾಸ್ಟಿಕ್, ಬಾಟಲ್, ತ್ಯಾಜ್ಯ ಪದಾರ್ಥಗಳನ್ನು ಜಲಧಾರೆಗೆಸೆದು ಬಿಡುತ್ತಿದ್ದಾರೆ. ಪ್ರವಾಸಿಗರ ಕೈಯಲ್ಲಿ ಅಕ್ಷರಶಃ ಈ ಜಲಧಾರೆ ಇಂದು ನಲುಗುತ್ತಿದೆ.

- ಟೀಂ ಈ ಕನಸು.

0 comments:

Post a Comment