ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:24 PM

ಅನ್ಯಾಯ

Posted by ekanasu

ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ
ಜಗದಲಿ ರೋಸಿಹೋದ
ಅನಾಥ ಮನಸ್ಸುಗಳಲ್ಲಿ ಸಿಟ್ಟು
ನಾಳೆಯೋ ನಾಳಿದ್ದೋ...
ಮುಕ್ತಿಯ ಕನಸು.


ಕ್ರಾಂತಿಯ ಕನಸು ಭ್ರಮೆ
ಪ್ರಕೃತಿಯೂ ಮೂಕ
ಏನಾಗುವುದೋ ಈ ಬನದ ಭವಿಷ್ಯ
ಪ್ರತಿಯೊಂದು ಕೊಂಬೆಯ ಮೇಲೆ
ಕುಳಿತಿದೆ ವಿಷಸರ್ಪ.

ಆದರೂ
ಕತ್ತಲೆಯ ಹಾದಿಯಲ್ಲಿ
ಆಸೆ ಆಕಾಂಕ್ಷೆಗಳ ದೀಪ
ಎದುರಾಗುವ ಪ್ರತಿ ನೆರಳಲ್ಲೂ
ನ್ಯಾಯಕ್ಕಾಗಿ ಹುಡುಕಾಟ.

- ಜಬೀವುಲ್ಲಾ ಖಾನ್

0 comments:

Post a Comment