ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಕರ್ನಾಟಕದ ಚಿರಾಪುಂಜಿ, ನಿತ್ಯ ಹರಿದ್ವರ್ಣ ಮಳೆಗಾಡು ಆಗುಂಬೆಯನ್ನು ಮಳೆಗಾಲದಲ್ಲಿ ನೋಡುವುದೇ ಒಂದು ಅಂದ. ಈಗತಾನೇ ಮಳೆಬಿಟ್ಟು ಇನ್ನೇನು ಕೊಂಚ ಬಿಸಿಲು ಹರಿಯುತ್ತಿದೆ ಎಂಬಂತಿರುವ ವಾತಾವರಣದಲ್ಲಿ ಈ ಆಗುಂಬೆ - ಆಗುಂಬೆ ಘಾಟಿಯನ್ನು ವೀಕ್ಷಿಸುವುದು ಒಂದು ಹಿತವಾದ ಅನುಭವ...ಮೋಡಗಳ ಸಾಲು ಸಾಲು , ಹೊಗೆಯ ರೂಪದಲ್ಲಿ ಬೆಟ್ಟಗಳ ಸಾಲಿನ ಮಧ್ಯೆ ಹಾದು ಹೋಗುತ್ತಾ ಸೃಷ್ಠಿಸುವ ವಿಶೇಷವಾದಂತಹ ಸೊಬಗು ಮನಕ್ಕೆ ಮುದ ನೀಡುತ್ತದೆ. ಚಳಿಯ ವಾತಾವರಣ ಹೊಸತೊಂದು ಅನುಭವ ಸೃಷ್ಠಿಸುತ್ತದೆ. ಆ ಅನುಭವ ಅನುಭವಿಸಿಯೇ ತಿಳಿಯಬೇಕು...ಇದೀಗ ಆಗುಂಬೆ ಮದುವಣಗಿತ್ತಿಯಂತೆ ಭಾಸವಾಗುತ್ತಿದೆ. ಹಚ್ಚ ಹಸಿರಿನಿಂದ ಸಿಂಗರಿಸಿಕೊಂಡಿದೆ. ಘಾಟಿಯ ರಸ್ತೆಯ ಪಾರ್ಶ್ವ, ಗುಡ್ಡಗಳು ಹಸಿರ ಹುಲ್ಲಿನಿಂದ ಅಲಂಕೃತಗೊಂಡಿವೆ.


ಮರಗಳಲ್ಲಿ ಹಸಿರ ಛಾಯೆ ಕಂಗೊಳಿಸುತ್ತಿವೆ.ಮಳೆಬಿದ್ದ ಮಳೆಗಾಡು ಶೋಭಿಸುತ್ತಿವೆ...ಅಂತೂ ಆಗುಂಬೆ ಭರ್ಜರಿಯಾಗಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ... ನೀವೂ ಬನ್ನಿ ... ಮಳೆಗಾಲದ ಆಗುಂಬೆಯ ಸೊಬಗನ್ನು ಕಣ್ ತುಂಬಿಕೊಳ್ಳಿ...
- ಟೀಂ ಈ ಕನಸು.

1 comments:

Darshan Bm said...

wow very very nice pictures......

Post a Comment