ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:17 PM

ಮೋಸದಾಟದ ಮಳೆ...

Posted by ekanasu

ಸಾಹಿತ್ಯ

ಮಳೆ ಬಂತು ಮಳೆ
ಕೈಕೊಡುವ, ಮೋಸದಾಟದ ಮಳೆ.
ಅತಿವೃಷ್ಠಿ, ಅನಾವೃಷ್ಠಿ! ಮಳೆ
ತಂದಿತು ರೈತನ ಬಾಳಿಗೆ ಕೊಳೆ.


ಮೋಡ ಕವಿದ ಮಳೆ.
ಜಿಟಿ ಜಿನಗುವ ಹನಿ ಮಳೆ,
ಮುಂಗಾರು ಬಿತ್ತಲು! ಬಿಡದ ಹನಿ.
ಹರಿಸಿತು ರೈತನ ಕಣ್ಣೀರಿನ ಹೊಳೆ.

ತುಸು ನಿಂತ ಮಳೆ
ಪರ ಪರ ಉದರಿತು ಹನಿ ಮಳೆ,
ಶಾಲೆಗೆ ಮಕ್ಕಳ ಹೋಗಲು ಬಿಡದ.
ವಿಪರೀತ ಮಳೆ! ಮಾರ್ಗ ಹೊಳೆ.

ತಳಕು ಮಿಂಚಿನ ಅರ್ಭಟದ
ಮಳೆ! ಮಿಂಚಿನ ನೋಟ,
ನಿನಗಿರದ್ಯಾರು ಸಾಟಿ.
ಕೆಳಗೆ ಬಂದರೆ ಇರರ್ಯಾರು ಬದುಕಿ.

ಗಡ ಗುಡು ಸದ್ದಿನ ಮಳೆ.
ಢವ ಢವ ಎದೆಯಲಿ,
ನಿನ್ನಯ ಶಬ್ಧ ಕೇಳಿ! ಚೀರಿತು ಮಗು.
ತಾಯಿಯ ಮಡಿಲಲ್ಲಿ.

ಬಾಲಪ್ಪ.ಎಂ.ಕುಪ್ಪಿ ಸುರಪುರ
ಯಾದಗಿರಿ

1 comments:

Amaresh Nayak said...

Mr.Balappa.. Very Meaningful your poet, so become a good poeter. very nice, congrates.
Thanks e-kanasu..

AmareshNayak Jalahalli..
Tq|| Devadurga
Dist|| Raichur

Post a Comment