ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:00 PM

ಬಿಸಿ ಬಿಸಿ ಸಾರು...

Posted by ekanasu

ವೈವಿಧ್ಯ

ಶೀತ ಹವೆಗೆ ಬೇಕು ಬಿಸಿ ಬಿಸಿ ಸಾರು...ಕಾಳು ಮೆಣಸಿನ ಸಾರು (ಕರಿಮೆಣಸು)


ಬೇಕಾಗುವ ಸಾಮಾಗ್ರಿ : ಮೆಣಸಿನ ಕಾಳು : ಒಂದೂವರೆ ಚಮಚ, ಕೊತ್ತಂಬರಿ, ಸ್ವಲ್ಪ ಜೀರಿಗೆ, ತೆಂಗಿನ ತುರಿ : ಕಾಲು ಕಪ್, ಹುಣಸೆಹಣ್ಣು, ಉಪ್ಪು, ಬೆಲ್ಲ, ಒಗ್ಗರಣೆ ವಸ್ತುಗಳು.

ಮಾಡುವ ವಿಧಾನ : ಮೆಣಸಿನ ಕಾಳು, ಕೊತ್ತಂಬರಿ ಬೀಜ, ಜೀರಿಗೆ ಹುರಿಯಿರಿ.ಕಾಯಿ, ಹುಣಸೆಹಣ್ಣು,ಹುರಿದಿಟ್ಟುಕೊಂಡಿದ್ದನ್ನು ಸೇರಿಸಿ ನುಣ್ಣಗೆ ರುಬ್ಬಿ. ನೀರು ಸೇರಿಸಿ ಉಪ್ಪು ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಕರಿಬೇವಿನ ಒಗ್ಗರಣೆ ಕೊಡಿ. ಈ ಸಾರು ಶೀತದಿಂದಾಗುವ ಗಂಟಲು ನೋವಿಗೆ ರಾಮಬಾಣ.

ಹಾಗಲಸೊಪ್ಪಿನ ಸಾರು


ಬೇಕಾಗುವ ಸಾಮಾಗ್ರಿ: ಹಾಗಲಸೊಪ್ಪು : ಐದು. , ಹಸಿ ಮೆಣಸು : ಎರಡು, ಹುಣಸೆಹಣ್ಣು, ಬೆಲ್ಲ, ಉಪ್ಪು, ಒಗ್ಗರಣೆ ವಸ್ತುಗಳು.
ಮಾಡುವ ವಿಧಾನ : ಹುಣಸೆಹಣ್ಣು ಕಿವುಚಿ , ಉಪ್ಪು,ಬೆಲ್ಲ, ಅರಶಿನ ಹಾಕಿ ಹಸಿಮೆಣಸನ್ನು ಸೀಳಿಹಾಕಿ ಅಗತ್ಯವಿದ್ದಷ್ಟು ನೀರು ಸೇರಿಸ ಚೆನ್ನಾಗಿ ಕಿವುಚಿ. ಕುದಿಯುತ್ತಾ ಇದ್ದಂತೆ ಹಾಗಲಸೊಪ್ಪನ್ನು ಹಾಕಿ ಎರಡು ಮೂರು ನಿಮಿಷ ಕುದಿಸಿ. ಇಂಗಿನ ಒಗ್ಗರಣೆ ಕೊಡಿ.ಈ ಸಾರು ತುಪ್ಪದ ಅನ್ನದೊಂದಿಗೆ ಊಟ ಮಾಡಲು ಚೆನ್ನಾಗಿರುತ್ತದೆ.- ಸುಮತಿ ಕೆ.ಸಿ.ಭಟ್ ಆದೂರು.

0 comments:

Post a Comment