ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್...

ಹೇ ಅಪ್ಪ...ನಿನ್ನ ನಿಷ್ಕಲ್ಮಷ ಪ್ರೀತಿಯ ಕೊಟ್ಟು ಮುದ್ದಾಗಿ , ಕಣ್ ರೆಪ್ಪೆಗೂ ನೋವಾಗದಂತೆ ಸಾಕಿದ್ದೀಯ...ಆ ನಿನ್ನ ಪ್ರೀತಿಗೆ ಸಾಟಿ ಎಂದಾದರೂ ಉಂಟೇನು. ಶಾಲೆಗೆ ಹೋಗುವುದಿಲ್ಲವೆಂದು ಹಠ ಮಾಡಿದಾಗ ಒಂದು ಏಟೂ ಕೊಡದಂತೆ ಪ್ರೀತಿಯಿಂದ ಸಮಾಧಾನದಿಂದ ಚಿನ್ನ, ರನ್ನ ಎಂದೆಲ್ಲ ಬುದ್ದಿ ಮಾತು ಹೇಳಿ ಹೆಗಲ ಮೇಲೆ ಕೂರಿಸಿಕೊಂಡು ಶಾಲೆಗೆ ಬಿಟ್ಟ ಆ ದಿನವಿನ್ನೂ ಕಣ್ಣಿನಲ್ಲಯೇ ಅಚ್ಚಾಗಿದೆ...

ಮನೆಯವರೆಲ್ಲರೂ ಬೈದರೂ ನೀ ಯಾವಾಗಲೂ ನನ್ನ ಬದಿಯಿಂದಲೇ ಮಾತನಾಡುವುದನ್ನು ನೆನಪಿಸಿಕೊಂಡರೆ ಖುಷಿಯಾಗುತ್ತೆ ಅಪ್ಪ. ಬದುಕಿಗೆ ನೀನು ಅಮ್ಮ ಇಬ್ಬರೂ ಒಂದು ಗಾಡಿಯ ಚಕ್ರವಿದ್ದಂತೆ..ಒಂದು ಮನೆಯು ಸರಿಯಾಗಿ ಸಾಗಬೇಕಾದರೆ ನಿಮ್ಮಿಬ್ಬರ ಸಹಬಾಳ್ವೆ ಎಷ್ಟು ದೊಡ್ಡ ಪಾತ್ರ ವಹಿಸುತ್ತದೆ ಅಲ್ವಾ ಅಪ್ಪಾ.

ಮನೆಯ ಜವಾಬ್ದಾರಿಗಳನ್ನೆಲ್ಲ ಕಿಂಚಿತ್ತೂ ಯಾರಿಗೂ ತೊಂದರೆಯಾಗದಂತೆ ನಿರ್ವಹಿಸುತ್ತೀಯಲ್ಲ..ಅದೆಷ್ಟು ಪ್ರೀತಿ ನಿನಗೆ ನಿನ್ನವರ ಮೇಲೆ..ಅಮ್ಮನ ಕಣ್ಣಲ್ಲಿ ಒಂದು ಹನಿಯೂ ನೀರು ಹಾಕದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತೀಯಾ, ಮಕ್ಕಳಿಗೆ ನೋವಾದರೆ ಇಡೀ ರಾತ್ರಿ ನಿದ್ದೆಗೆಟ್ಟು ಪರಿಹಾರ ಹುಡುಕುತ್ತೀಯಾ, ತೋಟ ಗದ್ದೆಯೆಂಬ ವಿಶಾಲ ಜಗತ್ತನ್ನು ವಿಶಾಲ ಮನೋಭಾವನೆಯಿಂದ ಮಾಡುತ್ತೀಯಲ್ಲ.

ನೀನು ಎಷ್ಟೇ ದುಡಿದರೂ ನಿನಗೆ ಅಂತ ಏನನ್ನೂ ಕೊಳ್ಳದೇ ಮಕ್ಕಳ ಖುಷಿಯೇ ನನ್ನ ಖುಷಿಯೆಂದು ಇರುತ್ತೀಯ ಹಬ್ಬ ಹರಿದಿನಗಳಲ್ಲಿ ನಮ್ಮ ನಗುವಿನಲ್ಲಿಯೇ ಸಂತೋಷವನ್ನು ಅನುಭವಿಸುವ ನಿನ್ನ ಗುಣ ಅದೆಷ್ಟು ದೊಡ್ಡದು..ಹುಟ್ಟಿದಾಗಿನಿಂದಲೂ ಪ್ರತೀ ಹೆಜ್ಜೆಗೂ ನೆರಳಾಗಿ ಜೀವನದಲ್ಲಿ ತಪ್ಪು ದಾರಿ ಹಿಡಿಯದಂತೆ ಸಲಹುವ ನಿನ್ನ ಮಕ್ಕಳ ಬಗ್ಗೆ ನೀನು ಅದೆಷ್ಟು ಕನಸು ಕಂಡಿದ್ದೀಯಲ್ಲ ಅಪ್ಪ..ಆಟದಲ್ಲಿ ಸೋತಾಗ ಸಮಾಧಾನದಿಂದ ಗೆಲುವನ್ನು ಪಡೆಯುವತ್ತ ಕಲಿಸಿಕೊಟ್ಟು, ಪ್ರತೀ ಹಂತದಲ್ಲಿಯೂ ಮಾರ್ಗದರ್ಶಕವಾಗಿರುವ ನೀನು ಬುದ್ದಿ ಕಲಿಸಿದ ದೇವರೆಂದೇ ಹೇಳಬಹುದು.

ಬರಹ:ಪದ್ಮಾ ಭಟ್
ಎಸ್.ಡಿ.ಎಂ ಕಾಲೇಜ್ ಉಜಿರೆ.

2 comments:

Anonymous said...

ee baraha chennagide amma,appana bagge bareyalu horatre jaaga saalolla astu vishaya irutte

Anonymous said...

ನಿಮ್ಮ ಬರಹವು ಮನ ಮುಟ್ಟುವಂತಿದೆ.ತುಂಬಾಚೆನ್ನಾಗಿದೆ.ಹೀಗೇ ಬರಹಗಳನ್ನು ಬರೆಯುವುದನ್ನು ಮುಂದುವರಿಸಿಕೊಂಡು ಹೋಗಿ.

Post a Comment