ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಕರ್ನಾಟಕ ಅರಣ್ಯ ಇಲಾಖೆ ಚಿಕ್ಕಮಗಳೂರು "ಕವಿಕಲ್ ಗಂಡಿ ನಿಸ್ತಂತು ಕೇಂದ್ರ" ಇಂದು ನಿಸ್ತೇಜವಾಗಿದೆ. ಜ.21,1988ರಂದು ಅಂದಿನ ಚಿಕ್ಕಮಗಳೂರು ಜಿಲ್ಲಾ ಪರಿಷತ್ ಅಧ್ಯಕ್ಷ ಕೆ.ಎಂ.ಕೃಷ್ಣ ಮೂರ್ತಿ ಅವರಿಂದ ಉದ್ಘಾಟನೆಗೊಂಡಿತ್ತು.


ಕರ್ನಾಟಕ ಅರಣ್ಯ ಇಲಾಖೆಯ ಚಿಕ್ಕಮಗಳೂರು ವಿಭಾಗ ಮುತ್ತೋಡಿ ವಲಯದ ನಿಸ್ತಂತು ಮುಖ್ಯಕೇಂದ್ರ ಕವಿಕಲ್ ಗಂಡಿ ಎಂಬಲ್ಲಿ ಸ್ಥಾಪಿತವಾಗಿದೆ. ಇಂದು ಈ ನಿಸ್ತಂತು ಮುಖ್ಯ ಕೇಂದ್ರ ಮುಚ್ಚಿಹೋಗಿದೆ. ಇಲ್ಲಿನ ಕೇಂದ್ರದ ಕಟ್ಟಡ ಪಾಳು ಬಿದ್ದಿದೆ.ಪ್ರಕೃತಿಯ ಸೌಂದರ್ಯ ವೀಕ್ಷಣೆಗೆ ಈ ಭಾಗದಲ್ಲಿ ನಿರಂತರ ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಇದು ಇಂದು ಅನೈತಿಕ ದಂಧೆಯ ತಾಣವಾಗಿ ನಲುಗತೊಡಗಿದೆ. ಇಲಾಖೆ ತಕ್ಷಣ ಕಾರ್ಯ ಪ್ರವೃತ್ತವಾಗಬೇಕಾಗಿದೆ. ಇದರ ಪ್ರಯೋಜನವಿಲ್ಲದಿದ್ದಲ್ಲಿ ಕಟ್ಟಡಕ್ಕೊಂದು ಸೂಕ್ತ ಭದ್ರತೆ ಒದಗಿಸುವುದು ಒಳಿತು.

- ಟೀಂ ಈ ಕನಸು.

0 comments:

Post a Comment