ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಬೆಳ್ಳುಳ್ಳಿ ಸಾರು

ಬೇಕಾಗುವ ಸಾಮಾಗ್ರಿ: ಬೆಳ್ಳುಳ್ಳಿ : 7-8 ಎಸಳು, ಕಾಯಿತುರಿ : ಕಾಲು ಕಪ್, ಹುಣಸೆ ಹಣ್ಣು, ಉಪ್ಪು, ಒಗ್ಗರಣೆ ವಸ್ತುಗಳು, ಹಸಿಮೆಣಸು : ಎರಡು.ಮಾಡುವ ವಿಧಾನ : ಸಿಪ್ಪೆ ಸುಲಿದ ಬೆಳ್ಳುಳ್ಳಿ ಹಾಗೂ ಕಾಯಿತುರಿಯನ್ನು ಬೇರೆ ಬೇರೆಯಾಗಿ ಹುರಿದು ಹುಣಸೆ ರಸದೊಂದಿಗೆ ನುಣ್ಣಗೆ ರುಬ್ಬಿ. ಅಗತ್ಯವಿದ್ದಷ್ಟು ನೀರು ಸೇರಿಸಿ. ಹಸಿಮೆಣಸು ಸೀಳಿ ಹಾಕಿ. ಉಪ್ಪು ಬೆಲ್ಲ ಹಾಕಿ ಕುದಿಸಿ ಕರಿಬೇವಿನ ಒಗ್ಗರಣೆ ಕೊಡಿ.ಈರುಳ್ಳಿ ಸಾರು
ಬೇಕಾಗುವ ಸಾಮಾಗ್ರಿ: ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ. ಹಸಿಮೆಣಸನ್ನು ಉದ್ದಕೆ ಸೀಳಿ. ಹುಣಸೆ ಹಣ್ಣು ಕಿವಿಚಿ ಅಗತ್ಯವಿದ್ದಷ್ಟು ನೀರು ಸೇರಿಸಿ. ಉಪ್ಪು ಬೆಲ್ಲ ಹೆಚ್ಚಿಟ್ಟ ಈರುಳ್ಳಿ ಹಾಗೂ ಹಸಿಮೆಣಸನ್ನು ಚೆನ್ನಾಗಿ ಕುದಿಸಿ, ಕರಿಬೇವಿನ ಒಗ್ಗರಣೆ ಕೊಡಿ.ಹೊಟ್ಟೆ ಉಬ್ಬರಕ್ಕೆ ಇದು ತುಂಬಾ ಪರಿಣಾಮಕಾರಿ...ಹಲಸಿನ ಬೀಜದ ಸಾರು
ಬೇಕಾಗುವ ಸಾಮಾಗ್ರಿಗಳು: ಹಸಿನ ಬೀಜ 5, ಒಣ ಮೆಣಸು 3, ಹುಣಸೆ ಹಣ್ಣು , ಬೆಲ್ಲ,ಉಪ್ಪು, ಉದ್ದಿನ ಬೇಳೆ , ಕೊತ್ತಂಬರಿ , ಜೀರಿಗೆ , ಇಂಗು.
ಮಾಡುವ ವಿಧಾನ : ಹಲಸಿನ ಬೀಜದ ಸಿಪ್ಪೆ ತೆಗೆದು ಚೆನ್ನಾಗಿ ಬೇಯಿಸಿ. ಸಂಬಾರ ಸಾಧನಗಳನ್ನು ಹುರಿದು ಬೇಯಿಸಿಟ್ಟ ಹಲಸಿನ ಬೀಜ ಹಾಗೂ ಹುಣಸೆರಸದೊಂದಿಗೆ ರುಬ್ಬಿ. ಉಪ್ಪು ಬೆಲ್ಲ ಸೇರಿಸಿ ಕುದಿಸಿ ಒಗ್ಗರಣೆ ಕೊಡಿ.

- ಸುಮತಿ ಕೆ.ಸಿ.ಭಟ್ ಆದೂರು

0 comments:

Post a Comment