ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಕಣಿಲೆಯ ವಿವಿಧ ಖಾದ್ಯಗಳು

ಎಳೆಯ ಬಿದಿರು (ಕಣಿಲೆ) ಮಳೆಗಾಲದ ಅತಿಥಿ...ಇದು ಬಿದಿರ ಕಂದಮ್ಮ. ಈ ಕಣಿಲೆಯನ್ನುಪಯೋಗಿಸಿ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸಬಹುದಾಗಿದೆ. ಕಣಿಲೆಯ ಖಾದ್ಯಗಳು ಕರಾವಳಿಯಲ್ಲಂತೂ ಬಹಳ ಫೇಮಸ್... ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಶಿರಾಡಿ ಚಾರ್ಮಾಡಿ ಘಾಟಿ ರಸ್ತೆಗಳಲ್ಲಿ ರಸ್ತೆ ಬದಿ ಕಣಿಲೆಗಳನ್ನು ಮಾರಾಟ ಮಾಡುವುದು ಈ ಮಳೆಗಾಲದಲ್ಲಿ ಮಾಮೂಲು... ಪೇಟೆಗಳಲ್ಲೂ ಕಣಿಲೆ ಮಾರಾಟ ಕಂಡು ಬರುತ್ತದೆ. ಇದೀಗ ಕಣಿಲೆಯ ವಿವಿಧ ಖಾದ್ಯಗಳು ಈ ಕನಸು.ಕಾಂ ಓದುಗರಿಗಾಗಿ...


ಕಣಿಲೆ ಪತ್ರೊಡೆ

ಬೇಕಾಗುವ ಸಾಮಾನು : ಕಣಿಲೆ ತುಂಡು - ಅರ್ಧ ಕೆ.ಜಿ, ಕುಚ್ಚಲಕ್ಕಿ - ಅರ್ಧ ಕೆ.ಜಿ, ಕೊತ್ತಂಬರಿ ಬೀಜ - 4 ಟೀ ಸ್ಪೂನ್, ಜೀರಿಗೆ - ಕಾಲು ಟೀ ಸ್ಪೂನ್,ಚಿಟಿಕೆ ಅರಿಸಿನ ಹುಡಿ,ಕೆಂಪು ಮೆಣಸು 8,ಹುಳಿ ನೆಲ್ಲಿಕಾಯಿ ಗಾತ್ರ,ಉಪ್ಪು.

ಮಾಡುವ ವಿಧಾನ:ಕಣಿಲೆಯನ್ನು ಸಣ್ಣ ಚೂರುಗಳಾಗಿ ಕೊಚ್ಚಿ,ತುಂಬ ನೀರು ಹಾಕಿ 20 ನಿಮಿಷ ಬೇಯಿಸಿ.ನೀರು ಬಸಿದಿಟ್ಟು ಕೊಳ್ಳಿ.ನಂತರ 2 ಗಂಟೆಗಳ ಕಾಲ ನೆನೆಯಿಸಿದ ಅಕ್ಕಿಯನ್ನು ತೊಳೆದು,ಕೊತ್ತಂಬರಿ,ಜೀರಿಗೆ,ಅರಿಸಿನ ಹುಡಿ,ಮೆಣಸು,ಹುಳಿ ಹಾಗೂ ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ತರಿ ತರಿಯಾಗಿ ರುಬ್ಬಿ.ಈ ಹಿಟ್ಟಿಗೆ ಕಣಿಲೆ ಹೋಳುಗಳನ್ನು ಹಾಕಿ ಮಿಶ್ರ ಮಾಡಿ ದೊಡ್ಡ ದೊಡ್ಡ ಉಂಡೆ ಮಾಡಿ ಹಬೆಯಲ್ಲಿ ಬೇಯಿಸಿ.ತುಪ್ಪ ಹಾಕಿ ಬಿಸಿ ಇರುವಾಗಲೆ ತಿನ್ನಿ.ಅಥವಾ ಪುಡಿ ಮಾಡಿ ಬೆಲ್ಲ,ತೆಂಗಿನ ತುರಿ ಹಾಕಿ ಒಗ್ಗರಣೆ ಕೊಟ್ಟು ತಿನ್ನ ಬಹುದು.

- ಸುಮತಿ ಕೆ.ಸಿ.ಭಟ್ ಆದೂರು.

0 comments:

Post a Comment