ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಯು.ಆರ್ ಅನಂತ ಮೂರ್ತಿಯವರ ಕಾದಂಬರಿ ಸಂಸ್ಕಾರ ಓದುತ್ತಿದ್ದಂತೆ ಅಲ್ಲಿ ಪ್ರಸ್ತಾಪಿಸಿದ "ಅಗ್ರಹಾರ" ನನ್ನ ಗಮನ ಸೆಳೆಯಿತು.ಹೌದಲ್ಲವೇ ಈಗೀಗ ಅಗ್ರಹಾರ ನಮ್ಮ ಕಥೆ ಕಾದಂಬರಿಗಳಲ್ಲಿ ಅಥವಾ ಕೆಲವೇ ಕೆಲವು ಪ್ರಶಸ್ತಿ ಪುರಸ್ಕೃತ ಕಾದಂಬರಿ ಆಧಾರಿತ ಸಿನೆಮಾಗಳಲ್ಲಿ ಮಾತ್ರ ಕಾಣಸಿಗುವುದು.ಇಂದಿನ ಯುವ ಪೀಳಿಗೆಗೆ ಅಗ್ರಹಾರವೆಂದರೇನೆಂಬ ಪ್ರಶ್ನೆ ಕೇಳಿದರೆ ಯಾವುದು?ಪರಪ್ಪನ ಅಗ್ರಹಾರವಾ ? ಅಥವಾ ಕೇಳಿದವರ ಮುಖವನ್ನೇ ವಿಚಿತ್ರವಾಗಿ ದೃಷ್ಠಿಸಿಯಾರು.

ಹಾಗಾದರೆ ಏನಿದು ಅಗ್ರಹಾರ?
ಪ್ರಾಚೀನ ಭಾರತದ ಸುವ್ಯವಸ್ಥಿತ ನಗರ ಪದ್ಧತಿಯಲ್ಲಿ ಅಗ್ರಹಾರಗಳೂ ಒಂದು ಭಾಗ.ಹೆಚ್ಚಾಗಿ ಬ್ರಾಹ್ಮಣ ವರ್ಗಕ್ಕೆಂದೇ ಸೀಮಿತವಾದ ಪ್ರದೇಶ.ಸಂಸ್ಕೃತ ಮೂಲದ ಅಗ್ರಹಾರಂ ಶಬ್ದದಲ್ಲಿ ಅಗ್ರ ಎಂದರೆ ಪ್ರಮುಖ,ಹರಂ ಎಂದರೆ ಶಿವ ಎಂದರ್ಥ.ಶಿವನ ಆರಾಧಕರಿಗೇ ಸೀಮಿತವಾದ ಪ್ರದೇಶವು ವರ್ಣ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಗೆಂದೇ ಮೀಸಲಾದ ಪ್ರದೇಶವಾಯಿತು.

ಇಂದು ಬ್ರಾಹ್ಮಣ ವಿರೋಧಿಗಳು ಈ ಅಗ್ರಹಾರ ವ್ಯವಸ್ಥೆಯನ್ನು ವಿರೋಧಿಸಿಯಾರು ಮತ್ತು ಈಗ ಎಲ್ಲಿಯೂ ಅಗ್ರಹಾರಗಳು ಬ್ರಾಹ್ಮಣರಿಗೆಂದೇ ಸೀಮಿತವಾಗಿ ಕಾಣಸಿಗುವುದಿಲ್ಲ.
ಹೇಗಿತ್ತು?: ಮನೆ ಎದುರಿನ ರಸ್ತೆಗೇ ನೇರ ತೆಗೆದುಕೊಳ್ಳುವ ಬಾಗಿಲುಗಳುಳ್ಳ ಇಳಿಜಾರಿನ ಛಾವಣಿಯುಳ್ಳ ಸಾಲು ಮನೆಗಳು ಈ ಅಗ್ರಹಾರದ ಪ್ರಮುಖ ಲಕ್ಷಣ.ಈ ಅಗ್ರಹಾರಗಳಲ್ಲಿ ದೇವಾಲಯಕ್ಕೆ,ವೇದ ಸಂಬಂಧಿ ವಿಚಾರಗಳಿಗೇ ಪ್ರಮುಖ ಪ್ರಾಶಸ್ತ್ಯ ನೀಡಲಾಗುತ್ತಿತ್ತು.ಮನೆಯೆದುರು ಗೋಮಯದಿಂದ ಶುದ್ಧೀಕರಿಸಲ್ಪಟ್ಟ ರಸ್ತೆಗಳು,ಸುಂದರ ರಂಗೋಲಿ ಹಾಕಲ್ಪಟ್ಟಂತಹ ಮುಂಬಾಗಿಲುಗಳು....ಹೀಗೊಂದು ವ್ಯವಸ್ಥಿತ ನಗರ ಭಾಗವಾಗಿತ್ತು.

ಇಂದಿನ ಕಾಂಕ್ರೀಟು ಕಾಡಿನಲ್ಲಿ ಅಗ್ರಹಾರಗಳು ಕಣ್ಮರೆಯಾಗುತ್ತಿರುವುದಲ್ಲದೇ ಹೊಸ ಹೊಸ ಪಾಶ್ಚಾತ್ಯ ವಾಸ್ತು ಶಿಲ್ಪಕ್ಕೆ ಮಾರು ಹೋಗಿರುವ ಬಹುತೇಕ ಭಾರತೀಯರಿಗೆ ನಮ್ಮಲ್ಲಿರುವ ಈ ವ್ಯವಸ್ಥಿತ ಅಗ್ರಹಾರದ ಮನೆಗಳ ವಾಸ್ತುಶಿಲ್ಪ ಮರೆಯುತ್ತಿದೆ.ಸಾಲು ಸಾಲಾಗಿ ಒಂದೇ ಆಯ-ಆಕಾರ ಹೊಂದಿರುವ ಮನೆಗಳು ಕಾನಸಿಗುವುದು ಅಗ್ರಹಾರಗಳಲ್ಲಿ ಮಾತ್ರ.ಆದರೆ ಜಾಗತೀಕರಣ,ಮೆಟ್ರೋಪಾಲಿಟನ್ ನಗರಗಳು,ಬ್ರಾಹ್ಮಣ ವಿರೋಧಿ ಅಲೆಗಳು ಅಗ್ರಹಾರದ ಸುಂದರತೆಯನ್ನು ನಾಶಪಡಿಸಿದೆ. ಮಾಡರ್ನ್ ಚಿಂತನೆಗಳು ಅಗ್ರಹಾರವನ್ನು ಅಪರೂಪವಾಗಿಸಿದೆ.

ನಾಳೆಗೆ : ಅಗ್ರಹಾರ...ಇನ್ನಷ್ಟು ಮಾಹಿತಿ

- ಸೌಮ್ಯ ಆದೂರು.
(ಪ್ರಿಯ ಓದುಗರೇ...ಅಗ್ರಹಾರ ಇಂದು ಮರೆಯಾಗುತ್ತಿದೆ. ಈ ವಿಚಾರದ ಕುರಿತಾಗಿ ವಿವರಣಾತ್ಮಕ ಲೇಖನವನ್ನು ಈ ಕನಸು.ಕಾಂ ಪ್ರಕಟಿಸುತ್ತದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಿಳಿಸಿ. info@ekanasu.com .
- ಸಂ. )

3 comments:

Anonymous said...

Sathish Mady ·- VALLEYADU SIR, KANDITHA KANMAREYADA AGRAHARADA BAGGE MUNDINA JANANGAKKE HEEGOO IDDITHA ENDU HUBBERISUVA RITHYALI LEKHANA MOODI BARALI

Anonymous said...

Ramesha Hegade - AGRAHARA annodu onde ondu pangadakke sambhada pattiddu,
jaati,matha,dharma evellavannu bittu nimma EKANASU yettarettarakke beli beaku antha annsallva?

Anonymous said...

Gundappa Patil ·- we all in india blaming each other but we as an individual not following anything first we do our selves then we point out others

Post a Comment