ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:14 PM

ಬಡತನ

Posted by ekanasu

ಸಾಹಿತ್ಯ

ನೊಂದ ಮನಸು ಬೆಂದ ಕನಸು
ದಾರಿ ಏನೂ ಕಾಣೆನು
ಸಾಲದ ಭಾರ ಬಾಳು ಬಲು ಘೋರ
ಈ ಬೇನೆ ನಾ ತಾಳೆನು

ವಯಸ್ಸಿಗೆ ಬಂದ ಮಗಳು
ಚಿಂತೆ ಕಾಡುತಿದೆ ಹಗಲಿರುಳು
ವರದಕ್ಷಿಣೆಯ ಪಿಡುಗು
ಮೈಯೆಲ್ಲಾ ನಡುಗು

ಬಡವನ ಅಳಿಯನಾಗಲು ಯಾರಿಗೂ ಇಷ್ಟವಿಲ್ಲ
ಬಡ ಹೆಣ್ಣಿಗೆ ಬಾಳು ಕೊಡಲು ಯಾರೂ ಸಿದ್ಧರಿಲ್ಲ
ಹಣವಂತನಾಗುತಿದ್ದಾನೆ ಹಣವಂತ, ಬಡವ ಬಡವನೇ
ಈ ಅರ್ಥಶಾಸ್ತ್ರ ತಿಳಿಯಲಾರೆ

ನಾವೂ ಜನರು, ಬದುಕಿ, ಬದುಕಲು ಬಿಡಿ
ಪ್ರತಿ ಬಣ್ಣದ ಹೂವು ಅರಳಲು ಬಿಡಿ.

- ಜಬೀವುಲ್ಲಾ ಖಾನ್

0 comments:

Post a Comment