ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಇಂದಿನ ರುಚಿ

ಕೆಸುವಿನ ಖಾದ್ಯಗಳು

ಮಳೆಗಾಲದಲ್ಲಿ ಕೆಸು ಹೇರಳವಾಗಿ ಲಭ್ಯ. ಈ ಕೆಸು ಅತ್ಯಂತ ರುಚಿಕರ ಆಹಾರವೂ ಹೌದು. ಕೆಸುವಿನ ಪ್ರತಿಯೊಂದು ಭಾಗವನ್ನೂ ಒಂದಲ್ಲಾ ಒಂದು ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಕೆಸುವಿನ ಖಾದ್ಯಗಳು ರುಚಿಕರ. ಬಾಯಲ್ಲಿ ನೀರೂರಿಸುವ ರುಚಿಯನ್ನು ಈ ಖಾದ್ಯಗಳು ಒಳಗೊಂಡಿರುತ್ತವೆ. ಒಮ್ಮೆ ತಿಂದರೆ ಮತ್ತೊಮ್ಮೆ ತಿನ್ನಬೇಕೆಂಬಷ್ಟು ರುಚಿ ಕೆಸುವಿನ ಖಾದ್ಯಗಳದ್ದು. ಈ ಕನಸು.ಕಾಂ ನ ಇಂದಿನ ರುಚಿಯಲ್ಲಿ ಕೆಸುವಿನ ಖಾದ್ಯಗಳ ಪರಿಚಯ.ಪತ್ರಡೆ ಗಸಿ
ಬೇಕಾಗುವ ಸಾಮಾನು: ಬೆಳ್ತಿಗೆ ಅಕ್ಕಿ - ಕಾಲು ಕೆಜಿ, ಕುಚ್ಚಲಕ್ಕಿ - ಕಾಲು ಕೆಜಿ, ಕೆಸುವಿನೆಲೆ - ನಾಲ್ಕು, ಕೊತ್ತಂಬರಿ ಬೀಜ - ನಾಲ್ಕು ಟೀ ಸ್ಪೂನ್, ಜೀರಿಗೆ - ಕಾಲು ಟೀ ಸ್ಪೂನ್, ಹುಣಸೆಹುಳಿ - ನಿಂಬೆ ಗಾತ್ರದ್ದು. , ಕೆಂಪು ಮೆಣಸು - ಹತ್ತು, ಬೆಲ್ಲ - ಚಿಕ್ಕ ತುಂಡು, ಉಪ್ಪು - ರುಚಿಗೆ ತಕ್ಕಷ್ಟು, ತೆಂಗಿನ ತುರಿ - ಮೂರು ಕಪ್, ಬೆಳ್ಳುಳ್ಳಿ - ಎಂಟು ಎಸಳು, ಅರಣಿನ ಹುಡಿ - ಒಂದು ಚಿಟಿಕೆ, ತೊಗರೀ ಬೇಳೆ - ಅರ್ಧ ಕಪ್, ಹಸಿಮೆಣಸು - ಮೂರು, ಒಗ್ಗರಣೆ ಸಾಮಾಗ್ರಿ.


ಮಾಡುವ ವಿಧಾನ

ಕೆಸುವಿನೆಲೆ ತೊಳೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಅಕ್ಕಿ ತೊಳೆದು ಕೊತ್ತಂಬರಿ, ಜೀರಿಗೆ , ಮೆಣಸು, ಹುಣಸೆ ಹುಳಿ, ಬೆಲ್ಲ, ಅರಶಿನ ಹುಡಿ, ಉಪ್ಪು ಹಾಗೂ ತುಸು ನೀರು ಹಾಕಿ ಚಿಕ್ಕ ಚಿಕ್ಕ ತರಿಯಾಗಿ ರುಬ್ಬಿ. ಹೆಚ್ಚಿಟ್ಟ ಕೆಸುವಿನೆಲೆ ಹಿಟ್ಟಿಗೆ ಹಾಕಿ ಮಿಶ್ರಮಾಡಿ ಉಂಡೆ ಮಾಡಿ ಹಬೆಯಲ್ಲಿ ಬೇಯಿಸಿ . ಬೆಂದ ನಂತರ ದೊಡ್ಡ ಹೋಳಾಗಿ ಹೆಚ್ಚಿ. ಹಸಿ ಮೆಣಸು ಸೀಳಿ ,ತೊಗರೀ ಬೇಳೆಯೊಂದಿಗೆ ಬೇಯಿಸಿ. ಬೆಳ್ಳುಳ್ಳಿ ಕೆಂಪಗೆ ಹುರಿದು ತೆಂಗಿನ ತುರಿಯೊಂದಿಗೆ ರುಬ್ಬಿ. ಪತ್ರಡೆ ಹೋಳು, ತೊಗರೀ ಬೇಳೆ, ರುಬ್ಬಿದ ತೆಂಗಿನ ಕಾಯಿಗೆ ಹಾಕಿ ತುಸು ನೀರಿನ್ನು ಸೇರಿಸಿ ಕುದಿಸಿ. ಒಗ್ಗರಣೆ ಕೊಡಿ. ಇದು ಊಟದೊಂದಿಗೆ ಬಲು ಟೇಸ್ಟ್.

- ಸುಮತಿ ಕೆ.ಸಿ.ಭಟ್ ಆದೂರು.

1 comments:

Anonymous said...

I am happy to know this recipe, but worried we are missing these recipes in city life.

Vijaya kugve

Post a Comment