ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ
ಒಬ್ಬ ಹುಡುಗಿ ತನ್ನ ಉದ್ದ ಜಡೆಗೆ ಅದನ್ನು ಕಟ್ಟುತ್ತಾ ಬಿಚ್ಚುತ್ತಾ ಖುಷಿಯಲ್ಲಿ ನಿಂತಿದ್ದಳು.ನಾವು ಹತ್ತಿರ ನಿಂತು ನೋಡಿದೆವು.ಆಟದ ಚಿಟಿಕೆಯಂತಿತ್ತು ಅದು.ನಾವು ನಾವೇ ಹಾಕಬಹುದು ತೆಗೆಯಬಹುದು!ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ!ಅದರ ನಿಜವಾದ ಹೆಸರನ್ನೇ ಕೇಳದೆ ನಾವೇ ಅದಕ್ಕೆ 'ಚಿಪ್ಡ'ಎಂದು ಹೆಸರಿಟ್ಟೆವು.ಅರ್ಥಗಿರ್ಥ ಕೇಳಬೇಡಿ.ಅದರಲ್ಲಿ ಯಾವ ಯಾವ ನಮೂನೆ ಬಂತು!ರಿಬ್ಬನು ಏಕಾಏಕಿ ಓಬಿರಾಯನ ಕಾಲದ್ದಾಗಿ ಬಿಟ್ಟಿತು.ರಿಬ್ಬನು ಏಕೆ,ಜಡೆ ಕಟ್ಟುವುದೇ ಹಾಗೆ ನೋಡಿದರೆ 'ಸಂಪ್ರದಾಯ'ಕ್ಕೆ !ಹಾಗೇ ಕೂದಲು ಬಿಟ್ಟು ಚಿಪ್ಡ್ ಕಟ್ಟಿಕೊಂಡರೆ ರುಮುರುಮುರುಮು ಅದು ಹಾರುತ್ತಿದ್ದರೆ ಮುದವೇ ಮುದ.

ಹೇಳುವವರಿಗೇನು-ಅರೆನಾರಿ ಗಿರೆನಾರಿ ಕುದುರೆ ಏನೇನು ಹೇಳಿದರೂ ನಾವು ಮಾತ್ರ ಅಲ್ಲಾಡಲಿಲ್ಲ.ನಾವು ಅವತ್ತು ಅಲ್ಲಾಡಿದ್ದರಿಂದಲೇ ಇವತ್ತು ನಿಮ್ಮ ಕೂದಲೂ ಧೈರ್ಯದಿಂದ ಹಾರಾಡುತ್ತಿದೆ ತಿಳಕೊಳ್ಳಿ.ಅಂದಿನಿಂದ ರಿಬ್ಬನು ಮಾತ್ರ ಸ್ಕೂಲ್ ಡೇ ಡ್ಯಾನ್ಸ್ ಜಡೆ ಅಲಂಕಾರಕ್ಕೆ,ಉದ್ಘಾಟನೆಗೆ,ಪುಸ್ತಕ ಬಿಡುಗಡೆಗೆ,ಬ್ಯಾಜ್ಗೆ-ಹೀಗೆ ನಿಂತುಬಿಟ್ಟಿತು.ಈಗಲೂ ಬ್ಯಾಜ್ ತುದಿಯಲ್ಲಿ ರಿಬ್ಬನು ಕಂಡರೆ ಸಾಕು ರಿಬ್ಬನು ಪ್ರಪಂಚದಲ್ಲಿ ನಡೆದ ಇಡೀ ಕ್ರಾಂತಿಯ ರೀಲು ನನ್ನ ಕಣ್ಣ ಮುಂದೆ ಸಾಗುತ್ತದೆ.ಆ ಸಣ್ಣ ತುಂಡನ್ನು ಪ್ರೀತಿಯಿಂದ ಸವರಿ ಅದರೊಡನೆ ಮಾತಾಡುವಂತಾಗುತ್ತದೆ.ಮೋಹ ಎಂಬುದು,ಉಮಟಲ್ಲ,ಪೂರ್ತಿ ಬಿಟ್ಟು ಹೋಗುವುದೇ ಇಲ್ಲ...

ಹಾಂ.ರಬ್ಬರ್ ಟ್ಯಾಗ್ ಬಂತು.ಬಂತು ಅನ್ನುವುದರೊಳಗೆ ಅದರೊಂದಿಗೆ ಕೂದಲು ಕಿತ್ತು ಬರುತ್ತದೆ ಅಂತ ಡಿಸ್ಕೊ ಹ್ಯಾರ್ ಬ್ಯಾಂಡ್ ಬಂತು!ಬಣ್ಣ ಬಣ್ಣಗಳಲ್ಲಿ.ಇವಕ್ಕೆಲ್ಲಾ ಮೂಲ ಸ್ಫೂರ್ತಿ ಏನೆಂತಾ ಮಾಡಿದೆ?ಕಡೆಗೂ ಬಾಳೆ ನಾರೆ!ಆಗಲೇ ಹೇಳಿದೆನಲ್ಲಾ,ನಾವೆಲ್ಲ,ಗಂಡಸರೂ,ಕೂಡಿಯೇ,ಇವತ್ತು ನಾಳೆಯ ಹಾಗೆ ಇರುತ್ತವೆಯೇ ಹೊರತು ಬಯಸಿದರೂ ನಿನ್ನೆಯಂತೆ ಇರಲಿಕ್ಕೆ ಆಗುವುದಿಲ್ಲ ಅಂತ?ಗಟ್ಟಿ ನೋಡಿದರೆ ನಾಳೆ ಎಂದರೆ ಏನೆಂತ ಮಾಡಿದಿರಿ.ನಿನ್ನೆಯೇ.ಆದರೆ ನಿನ್ನೆಯಲ್ಲ!ಬಾಳೆನಾರು ಡಿಸ್ಕೋ ಹ್ಯಾರ್ ಬ್ಯಾಂಡ್ ಒಂದೇ ಆದರೂ ಒಂದೇ ಅಲ್ಲ ಎಂದ ಹಾಗೆ.


ನಂಗಂತೂ ಈಗೀಗ ಸಣ್ಣದೊಂದು ಅಂಗಡಿಗೆ ಹೋದರೂ ತಲೆ ಧಿಮ್ಮ ತಿರುಗುತ್ತದೆ.ಒಂದು 'ಸೂಟ್' ಅಂದರೆ-ಬಳೆ ಅಂಗಡಿಯಲ್ಲಿ ಸಣ್ಣದೊಂದು ಬದಲಾವಣೆ ಕಂಡಿತೇ,ಹಾಗಾದರೆ ಅದರ ಹೊರಗೆ ಎಲ್ಲೋ ಹತ್ತು ಪಟ್ಟು ನೂರು ಪಟ್ಟು ಸಾವಿರ ಪಟ್ಟು ಬದಲಾವಣೆ ಆಗಿದೆ ಅಂತ ತಿಳಿಯಬೇಕು.ಪುಟ್ಟ ಅಂಗಡಿಗಳೆಂದರೆ ಅನ್ನದ ಅಗುಳು ಇದ್ದ ಹಾಗೆ.ವಸ್ತು ಕ್ರಾಂತಿಯ ಒಂದು ಸಣ್ಣ ಹನಿ ಇದ್ದ ಹಾಗೆ!ಇಡೀ ವಸ್ತು ಕ್ರಾಂತಿ ಕಣ್ಣ ಮುಂದೆ ಕಟ್ಟಲು ಅಷ್ಟೇ ಸಾಕು.

ಆದರೂ-ಹೆಣ್ಣು ಮಕ್ಕಳ ಕುರಿತು ಇಷ್ಟೆಲ್ಲಾ ಯೋಚಿಸಿ ತಯಾರಿಸಿ ಆ ವಸ್ತುಗಳನ್ನು ಅಂಗಡಿಗೆ ಬಿಡುವವರು ಯಾರೂ,ಅವರನ್ನು ನೋಡಬೇಕೆಂಬ ಆಸೆ ಇದೆ ನನಗೆ.ಸಾಯುವುದರೊಳಗೆ ಅವರನ್ನು ನೋಡಿಯೇ ನೋಡುತ್ತೇನೆ ಕೂಡ.ಅಂದ ಹಾಗೆ ಹೆಣ್ಣು ಮಕ್ಕಳ ಕೈಯಲ್ಲಿ ಎಷ್ಟೆಲ್ಲ ಶಕ್ತಿಯಿದೆ!ಅವರು ಒಂದು ಸಣ್ಣ ವಸ್ತು 'ಬೇಡ'ಎಂದರೆ ಸಾಕು,ದುಡ್ಡಿನ ಕಟ್ಟಡ ಕಟ್ಟಡಗಳೇ ಉರುಳುತ್ತವೆ!ಮೇಕಪ್ ಬಾಕ್ಸ್ನ ಯಾವುದೇ ಒಂದನ್ನಾದರೂ ತಿರಸ್ಕರಿಸಿ ನೋಡಿ.ಎಲ್ಲಿಂದ ಎಲ್ಲಿಗೆ ಪರಿಣಾಮ ಆಗುತ್ತದೆ ಅಂತ!

ಆಯಿತು.ನಾನು ಹಳತಾದೆ ಎಂದೇ ಅರ್ಥ.ಇನ್ನು ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಪುಟ್ಟ ಬಳೆ ಅಂಗಡಿಗಳ ಮೇಲೆ ಕ್ರಾಂತಿಯ ಜಾಲವನ್ನು ಹೇಗೆ ಬೀಸುತ್ತವೆ,ನೋಡಲು ಅದೊಂದು ಬಾಕಿಯುಂಟು.ಅಷ್ಟರೊಳಗೆ ನನ್ನ ಯಾತ್ರೆ ಪೂರೈಸದಿದ್ದರೆ ಸಾಕು.
ಗೊತ್ತಾ,ನಮ್ಮ ದೇಶದ ಎಲ್ಲಾ ಫ್ಯಾಶನ್ಗಳೂ ಹುಟ್ಟುವುದು ಬೊಂಬಾಯಿಯಲ್ಲಿ ಅಂತೆ!ಬೊಂಬಾಯಿಯಂತಹ ಊರುಗಳಲ್ಲಿ ಬೇಕಾದವರು ಬೇಡದವರು ಎಲ್ಲರೂ ಇರುತ್ತಾರಲ್ಲಾಅಂಥವೆಲ್ಲ ಹುಟ್ಟುವುದು ಇಂಥಲ್ಲೇ,ಊರೂರು ಜಾತ್ರೆ ಮುಗಿಸಿಕೊಂಡು ಅದು ನಮ್ಮೂರು ಮುಟ್ಟುವಾಗ ಹತ್ತು ವರ್ಷವೇ ಬೇಕಾಗುತ್ತಿತ್ತು.ಈಗವಾ?ಬೊಂಬಾಯಿ ಬಿಟ್ಟು ಧ್ರುವಪ್ರದೇಶದಲ್ಲಿ ಹುಟ್ಟಿಕೊಂಡರೂ ಮರುಕ್ಷಣ ಎದುರು ಹಾಜರು.


'ಧ್ರುವ ಪ್ರದೇಶ್ದಾಗು ಜಾತ್ರೆ ಇರತ್ತಾ?'
ಇದ್ದೀತು.ಜಾತ್ರೆ ಇಲ್ಲದ ಊರೂ ಇಲ್ಲ.ಜಾತ್ರೆ ಬೇಡದ ಜನರೂ ಇಲ್ಲ!ಧ್ರುವ ಪ್ರದೇಶದಲ್ಲಿಯೂ ಇದ್ದೀತು.....ಹಿಮದ ತೇರು!
'ಹೋಪನಾ ಒಂದ್ಸಲ?'
ಓಹೋ.ಹೋಗುವ,ಅದಕ್ಕೇನು?ಸಧ್ಯ,ಈ ಜಾತ್ರೆ ಮುಗಿಸುವ.
... ... ...
ತನ್ನ ಭಾಷಣವನ್ನು ಮಧ್ಯ ಮಾತಾಡದೇ ಕೇಳಲು ರೆಡಿಯಿದ್ದರೆ ಈ ಬೇಬಿಯಕ್ಕ ಧ್ರುವ ಪ್ರದೇಶಕ್ಕಲ್ಲ,ಅದರಾಚೆಗೂ ಕರೆದೊಯ್ದಾಳು!...

- ವೈದೇಹಿ

0 comments:

Post a Comment