ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ದಾಖಲೆ ಫಲಿತಾಂಶ

ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಶನ್ ಪ್ರವರ್ತಿತ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜೀಸ್ ನ 2011 - 12ನೇ ಸಾಲಿನ ಶೈಕ್ಷಣಿಕ ತಂಡ (ಬ್ಯಾಚ್ ) ಶೇ.98.87 ದಾಖಲೆಯ ಫಲಿತಾಂಶ ಪಡೆದುಕೊಂಡಿದೆ. ಇದು ಈ ಸಂಸ್ಥೆಯ ಮೊಟ್ಟಮೊದಲ ಶೈಕ್ಷಣಿಕ ತಂಡವಾಗಿದ್ದು ಆರಂಭದಲ್ಲೇ ಶ್ರೇಷ್ಠ ಶೈಕ್ಷಣಿಕ ಸಾಧನೆಯನ್ನು ಮೆರೆಯುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟಾರೆಯಾಗಿ 177 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಆ ಪೈಕಿ 142ಮಂದಿ ವಿಶಿಷ್ಠ ದರ್ಜೆಯಲ್ಲಿ ತೇರ್ಗಡೆಹೊಂದಿರುವುದು ಗಮನಾರ್ಹ.

31 ಮಂದಿ ಪ್ರಥಮ ಶ್ರೇಣಿ, ಇಬ್ಬರು ದ್ವಿತೀಯ ಶ್ರೇಣಿ, ಹಾಗೂ ಕೇವಲ ಎರಡು ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣಗೊಂಡಿರುತ್ತಾರೆ.ಕಂಪ್ಯೂಟರ್ ಸಾಯನ್ಸ್ ಮತ್ತು ಇನ್ಫಾರ್ಮೇಷನ್ ಸಾಯನ್ಸ್ ವಿಭಾಗ ಶೇ.100 ಫಲಿತಾಂಶ ದಾಖಲಿಸಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಮಾನ್ಯತೆ ಪಡೆದುಕೊಂಡಿರುವ ಆಳ್ವಾಸ್ ಎಜುಕೇಷನ್ ಫೌಂಡೇಷನ್ ನ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜು 2008 -09ರ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಗೊಂಡಿತು. ಸಿ.ಎಸ್.ಇ, ಐ.ಎಸ್.ಇ, ಇ.ಸಿ.ಇ,ಎಂ.ಇ ಮತ್ತು ಸಿವಿಲ್ ವಿಭಾಗಗಳಲ್ಲಿ ಶಿಕ್ಷಣ ಪಡೆಯಲು ಈ ಸಂಸ್ಥೆಯಲ್ಲಿ ಅವಕಾಶವಿದೆ.

0 comments:

Post a Comment