ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಭಕ್ತಿ ಸಿಂಚನ
ಬೆಂಗಳೂರು: ನಮ್ಮ ಸನಾತನ ಪರಂಪರೆಯಲ್ಲಿ ಗುರು ವಿಗೆ ಮಹತ್ತರವಾದ ಸ್ಥಾನ ವಿದೆ. ಗುರು ಎಂದರೆ ದೊಡ್ಡದು. ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕನ್ನು ತೋರುವವನು ಗುರು. ಶಿಷ್ಯನ ಅತ್ಮೊದ್ಧಾರ ಮಾಡುವವನು.ಅಂತಹ ಗುರು ತನ್ನ ಬಾಹ್ಯ ಸಂಚಾರವನ್ನು ನಿಲ್ಲಿಸಿ ಅಂತರಂಗದಲ್ಲಿ ಸಂಚರಿಸುವ ದಿನಗಳೇ ಚಾತುರ್ಮಾಸ್ಯ. ನಾಲ್ಕು ತಿಂಗಳು ಅಥವಾ ನಾಲ್ಕು ಪಕ್ಷಗಳನ್ನೂ ಒಂದೆಡೆ ಜಪ ತಪ ಸಾಧನಗಳನ್ನು ಮಾಡುವ ಪರಿಪಾಠವಿದೆ.
ವ್ಯಾಸ ಪೂರ್ಣಿಮೆಯ ದಿನದಿಂದ ಭಾದ್ರಪದ ಪೂರ್ಣಿಮೆಯವರೆಗಿನ ಕಾಲ. ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳು ಬೆಂಗಳೂರು ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ನಂದನ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿದ್ದು , ಅಧಿಕ ಮಾಸವಿರುವುದರಿಂದ ಈ ವರ್ಷ ೯೦ ದಿನಗಳ ಪರ್ಯಂತ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ರಾಮಕಥೆಗಳು ನಡೆಯಲಿದೆ. ಈ ಸಂದರ್ಭದಲ್ಲಿ ನಲವತ್ತು ಸಾವಿರ ಶಿಷ್ಯರ ಮನೆಗಳಿಗೆ ಕೊಡಮಾಡುವ ಶಂಕರ ಭಗವತ್ಪಾದರ ಭಾವ ಚಿತ್ರವನ್ನು ಲೋಕಾರ್ಪಣೆ ಗೊಳಿಸಿದರು.

ಚಿತ್ರ ಮತ್ತು ವರದಿ: ಗೌತಮ್ ಬಿ ಕೆ.

0 comments:

Post a Comment