ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಸಹಪಾಲುಗಾರಿಕೆಯಲ್ಲಿ, ಜಗತ್ತಿನ ಅತ್ಯಂತ ದೊಡ್ಡ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು ನಡೆಸುತ್ತಿರುವ ಅಕ್ಷಯಪಾತ್ರ ಪ್ರತಿಷ್ಠಾನ ಮಂಗಳೂರಿನಲ್ಲಿ ಹಸಿವಿನೊಡನೆ ಹೋರಾಟ, ಮನಸ್ಸುಗಳಿಗೆ ರಸದೂಟ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ಮಾಧ್ಯಮ ನೆಲೆಸೂಚಕ ಕಾರ್ಯಕ್ರಮವನ್ನು ಏರ್ಪಡಿಸಿತ್ತು.ಮಾಧ್ಯಮದ ಮೂಲಕ ಹಸಿವಿನ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಮತ್ತು ಶಿಕ್ಷಣಕ್ಕೆ ಅದು ಅಡ್ಡಿಯಾಗುವ ರೀತಿಯನ್ನು ಕುರಿತು ಚರ್ಚಿಸಲು ಉತ್ತೇಜನ ನೀಡುವುದು ಈ ಕಮ್ಮಟದ ಉದ್ದೇಶವಾಗಿತ್ತು.


ಅಕ್ಷಯಪಾತ್ರ ಮಂಗಳೂರು ಘಟಕದ ಅಧ್ಯಕ್ಷರಾದ ಕಾರುಣ್ಯ ಸಾಗರ ದಾಸ
ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ಸಮಾಜವು ಒಗ್ಗಟ್ಟಾದರೆ, ಶಾಲೆಗೆ ಹಾಜರಾಗಲು ಅಸಮರ್ಥರಾದ ಅಥವಾ ಶಾಲೆಯಲ್ಲಿ ಕಲಿತಿದ್ದನ್ನು ರಕ್ತಗತಮಾಡಿಕೊಳ್ಳಲು ಅಸಮರ್ಥರಾದ ಲಕ್ಷಾಂತರ ಮಕ್ಕಳ ಜೀವನದಲ್ಲಿ ನಿಜವಾದ ಬದಲಾವಣೆಯನ್ನು ತರಲು ನಾವು ಶಕ್ತರಾಗಿದ್ದೇವೆ. ಸರಕಾರದ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದೊಡನೆ ನಮ್ಮ ಪಾಲುಗಾರಿಕೆಯು ಪೌಷ್ಠಿಕತೆಯನ್ನು ಸಂವರ್ಧಿಸಲು ನೆರವಾಗುತ್ತಿದೆ ಮತ್ತು ಹಸಿವಿಗೆ
ಸಮರ್ಥನೀಯ ಪರಿಹಾರಗಳನ್ನು ನಿರ್ಮಿಸಲು ನೆರವಾಗುತ್ತಿದೆ. ಎಂದು ಹೇಳಿದರು.ಕರ್ನಾಟಕದಲ್ಲಿ ಅಕ್ಷಯಪಾತ್ರದ ಅಸ್ತಿತ್ವವನ್ನು ಕುರಿತು ಮಾತನಾಡುತ್ತಾ
ರಾಜ್ಯದಲ್ಲಿ ಅಕ್ಷಯಪಾತ್ರವು ಈಗಾಗಲೇ ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ, ಮೈಸೂರು ಮತ್ತು ಮಂಗಳೂರು ಈ ಐದು
ಕೇಂದ್ರಗಳಿಂದ ಪ್ರತಿದಿನ 2690 ಶಾಲೆಗಳಲ್ಲಿ 5,44,605 ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಒದಗಿಸಲಾಗುತ್ತಿದೆ. ಮಕ್ಕಳಿಗೆ ಬಿಸಿಬಿಸಿಯಾದ ಆರೋಗ್ಯಕರ ಊಟವನ್ನು ಯಥೇಚ್ಛವಾಗಿ ಬಡಿಸಲಾಗುತ್ತಿದೆ. ಊಟದಲ್ಲಿ ಪ್ರತಿದಿನ ಅನ್ನ, ತರಕಾರಿಗಳಿಂದ ಕೂಡಿದ ಸಾಂಬಾರ್ ಮತ್ತು ಮಜ್ಜಿಗೆ ಇರುತ್ತವೆ. ವಾರಕ್ಕೆ ಎರಡು ದಿನ ಯಾವುದಾದರೂ ಸಿಹಿ ತಿನಿಸನ್ನು ನೀಡಲಾಗುತ್ತದೆ. ಮಂಗಳೂರಿನಲ್ಲಿ ಸ್ಥಳೀಯ ರೂಢಿಯಂತೆ ಕುಸುಬಲಕ್ಕಿಯನ್ನು
ಬಳಸಲಾಗುತ್ತಿದೆ. ಪ್ರಸ್ತುತ 145ಕ್ಕಿಂತಲೂ ಹೆಚ್ಚಿನ ಶಾಲೆಗಳಲ್ಲಿ ಸುಮಾರು 25487 ಮಕ್ಕಳಿಗೆ ಬಿಸಿಯೂಟವನ್ನು ನೀಡಲಾಗುತ್ತಿದೆ.
ತರಬೇತಿಯ ಕಮ್ಮಟವನ್ನು ಪಾರಸ್ಪರಿಕ ಕ್ರಿಯೆಯ ವಿಧಾನದಲ್ಲಿ ನಡೆಸಲಾಯಿತು. ಅದರಲ್ಲಿ ಅನುಭವಗಳ ವಿನಿಮಯ, ಪ್ರಸಂಗಗಳ ಅಧ್ಯಯನ ಮತ್ತು ಪಾರಸ್ಪರಿಕ ಕ್ರಿಯೆ,ಸಮೂಹ ಚರ್ಚೆ ಗಳು ಮತ್ತು ಅಭಿಪ್ರಾಯ ಮಂಡನೆಗಳು ಇದ್ದವು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯ
ಗುಲ್ಬರ್ಗ ವಿಭಾಗದ ಪ್ರಧಾನ ವರದಿಗಾರ ಅನುಭವಿ ಪತ್ರಕರ್ತ ಶ್ರೀನಿವಾಸ ಸಿರ್ನೂಕರ್ ಅವರು ಕಮ್ಮಟದ ಸಂಯೋಜಕರಾಗಿದ್ದರು.

0 comments:

Post a Comment