ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಮಂಗಳೂರು / ಬೆಂಗಳೂರು : ಕರ್ನಾಟಕದ ಘಾಟಿ ರಸ್ತೆಗಳೀಗ ಪ್ರವಾಸೀ ಯೋಗ್ಯ ತಾಣಗಳು.ಕಾರಣ ಮಳೆಗಾಲದಲ್ಲಿ ಹಸಿರಿನಿಂದ ಕಂಗೊಳಿಸುತ್ತಿರುವ ಸಸ್ಯರಾಶಿಯ ನಡುವೆ ಕರ್ರಗಿನ ರಸ್ತೆಯಲ್ಲಿ ಸಾಗುವುದೇ ಅಂದ.ಘಾಟಿ ರಸ್ತೆಯ ಇಕ್ಕೆಡೆಗಳಲ್ಲಿನ ಕಣಿವೆಗಳಲ್ಲಿ ಹಾದು ಹೋಗುವ ಮೋಡಗಳ ರಾಶಿಯನ್ನು ಅನುಭವಿಸುವುದೇ ಒಂದು ಆನಂದ. ಅಷ್ಟಲ್ಲದೆ ರಸ್ತೆಯ ಬದಿಯಲ್ಲಿರುವ ಗುಡ್ಡಗಳಿಂದ, ಇಳಿಜಾರು ಪ್ರದೇಶಗಳಲ್ಲಿ ಹರಿದು ಬರುವ ಜುಳು ಜುಳು ನೀರ ಝರಿಗಳು, ಕಿರು ಜಲಪಾತಗಳು ನೋಡುಗರ ಮನ ಗೆಲ್ಲುತ್ತವೆ.


ಜೀರುಂಡೆಗಳ ಝೇಂಕಾರದ ನಡು ನಡುವೆ ಧೋ ಎಂದು ಸೊಕ್ಕಿ ಹರಿವ, ನೀರ ಧಾರೆಗಳು ಮೋಹಕ ಚುಂಬಕ ಶಕ್ತಿ ಹೊಂದಿದಂತಹವು. ಚಾರ್ಮಾಡಿ, ಶೀರಾಡಿ, ಆಗುಂಬೆ, ಸಂಪಾಜೆ, ಬಾಳೇಬರೆ ಹೀಗೆ ಹಲವು ಘಾಟಿ ರಸ್ತೆಗಳು ಇಂತಹ ಅದ್ಭುತ ನಿಸರ್ಗ ಸೌಂದರ್ಯವನ್ನು ನೋಡುಗರಿಗೆ ನೀಡುತ್ತವೆ.


ನಿಸರ್ಗದ ನೈಜ ಸೌಂದರ್ಯ ಸವಿಯಬೇಕೆಂದರೆ ಮಳೆಗಾಲದಲ್ಲೊಮ್ಮೆ ಘಾಟಿ ರಸ್ತೆಯಲ್ಲಿ ಸಂಚರಿಸಲೇ ಬೇಕು.- ಟೀಂ ಈ ಕನಸು.

2 comments:

prashanth said...

nic.....

prashanth said...

nic.....

Post a Comment