ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ...
ಇದು ವರ್ಷಂಪ್ರತಿ ವಿದ್ಯಾರ್ಥಿಗಳ ಮನದಲ್ಲಿ ಮನೆ ಮಾಡುವ ಪ್ರಶ್ನೆ.ಪಿ.ಯು.ಸಿ ಏನೋ ಮುಗಿಯಿತು. ಮುಂದೇನು..? ಎಂಬ ಮನದೊಳಗಿನ ಗೊಂದಲಕ್ಕೆ ಸಾವಿರ ದಾರಿಗಳಿವೆ. ಭವಿಷ್ಯ ಕಟ್ಟಿಕೊಳ್ಳಲು ಎಂದು ಯೋಚಿಸುತ್ತಿದ್ದಂತೆ ಪ್ರತೀಯೊಬ್ಬರೂ ಒಂದೊಂದು ಉಪದೇಶ ನೀಡುತ್ತಾರೆ.. ಗೊತ್ತಿಲ್ಲದ ವಿಷಯಕ್ಕೆ ಆಸಕ್ತಿಯೇ ಇಲ್ಲದ ವಿಷಯಕ್ಕೆ ಹೋಗಿ ಬದುಕಿನುದ್ದಕ್ಕೂ ನರಳುವುದಕ್ಕಿಂತ ನಮಗೆ ಯಾವ ವಿಷಯ ಬೇಕೋ ಅದನ್ನು ಆಯ್ದುಕೊಂಡರೆ ನಮ್ಮ ಇಷ್ಟದ ವಿಷಯವನ್ನು ತೆಗೆದುಕೊಂಡು ಅದರಲ್ಲಿಯೇ ಬೇಕಾದಷ್ಟು ಸಾಧನೆಗಳನ್ನು ಮಾಡಬಹುದೇನೋ..ಓ ನಿನ್ನ ಅಂಕ ಚೆನ್ನಾಗಿದೆ ನೀನು ಇಂತಹದ್ದೇ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕೆಂಬ ತಂದೆ ತಾಯಿಯ ಒತ್ತಡ ಒಂದು ಕಡೆಯಾದರೆ ಲಕ್ಷ ಲಕ್ಷ ಗಟ್ಟಲೆ ಬೇಕಾದರೂ ಹಣ ಕೊಡುತ್ತೇವೆ ..

ನಮ್ಮ ಮಗನಿಗೆ ಒಳ್ಳೆ ಕಾಲೇಜಿನಲ್ಲಿ ಎಂಜಿನೀಯರಿಂಗ್ ಓದಿಸಬೇಕು ಎನ್ನೋವ್ರು ಮತ್ತೊಂದ್ ಕಡೆ..ಆಸಕ್ತಿ ಇದೆಯಾ ಇಲ್ಲವಾ ನೀನು ಆ ಕೋರ್ಸ್ ಗೆ ಹೋದರೆ ಜೀವನದಲ್ಲಿ ಉದ್ಧಾರ ಆಗ್ತೀಯ .ಬೇಕಾದಷ್ಟು ಹಣ ಗಳಿಸಬಹುದು ಎಂದು ಹೇಳುವವರೂ ಇರುತ್ತಾರೆ..ಕಡಿಮೆ ಸಮಯದಲ್ಲಿ ಕಲಿತು ಹೆಚ್ಚು ಸಂಬಳ ಪಡೆಯುವ ಕನಸು . ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗುತ್ತಿರುವ ಇಂದಿನ ಕಾಲಮಾನದಲ್ಲಿ ಸಾವಿರ ಕೋರ್ಸ್ಗಳೇನೋ ಇರಬಹುದು..ಭವಿಷ್ಯದಲ್ಲಿ ಹೆಚ್ಚಿನ ಸಂಬಳವನ್ನೂ ಕೊಡಬಹುದು.

ಆದರೆ ಮಾಡುವ ಪ್ರತೀ ಒಂದು ಕೆಲಸದಲ್ಲಿಯೂ ಆಸಕ್ತಿ ಎನ್ನುವುದು ಇರಬೇಕಲ್ಲವೇ? ನಾವು ಮಾಡುವ ಕೆಲಸ ನಮ್ಮ ಮನಸ್ಸಿಗೆ ಖುಷಿ ಕೊಡುವಂತಿರಬೇಕು.ಒತ್ತಾಯದ ಮೇರೆಗೆ ಇಷ್ಟವಿಲ್ಲವ ವಿಷಯವನ್ನು ತೆಗೆದುಕೊಂಡು , ಅದನ್ನು ಬಿಡಲೂ ಆಗದೇ ಆ ವಿಷಯ ಕಲಿಯಲೂ ಆಗದೇ ಇರುವುದಕ್ಕಿಂತ ನಮ್ಮ ಇಷ್ಟದ ವಿಷಯವನ್ನು ತೆಗೆದುಕೊಂಡು ನಾವು ಅದರಲ್ಲಿಯೇ ನಮ್ಮ ಬುದ್ದಿವಂತಿಕೆಯನ್ನು ಪ್ರದರ್ಶಿಸಿದರೆ ಯಶಸ್ಸು ಖಂಡಿತ ಸಿಕ್ಕೇ ಸಿಗುತ್ತದೆ.ಪ್ರತೀಯೊಂದು ಕ್ಷೇತ್ರಕ್ಕೂ ಬೆಲೆಯಿದೆ..

ತನ್ನದೇ ಆದ ಇರುವಿಕೆಯನ್ನು ಕಾಯ್ದುಕೊಂಡು ಬಂದಿರುತ್ತದೆ.ಆದ್ದರಿಂದ ವಿಷಯ ಆಯ್ಕೆ ಮಾಡಿಕೊಳ್ಳುವ ಮುನ್ನ ಈ ವಿಷಯ ಓದಿದರೆ ಒಳ್ಳೆಯ ಕೆಲಸ ಸಿಗಬಹುದಾ ಎನ್ನುವುದಕ್ಕಿಂತ ಆ ವಿಷಯದಲ್ಲಿ ನಾನು ಯಶಸ್ಸು ಕಾಣಬಹುದು ಅದರಲ್ಲಿ ಆಸಕ್ತಿ ಇದೆಯಾ ಎಂದು ಅರಿತುಕೊಂಡು ಆಯ್ಕೆ ಮಾಡಿಕೊಂಡರೆ ನಮ್ಮ ಬುದ್ದಿವಂತಿಕೆಯನ್ನು ಮೆರೆಯಬಹುದು..ಮತ್ತು ಆ ಕ್ಷೇತ್ರದಲ್ಲಿ ಯಶಸ್ಸು ಗಳಿಸಬಹುದೆಂದೆನಿಸುತ್ತದೆ

ಬರಹ: ಪದ್ಮಾ ಭಟ್,
ಎಸ್.ಡಿ.ಎಂ ಕಾಲೇಜ್ ಉಜಿರೆ.

0 comments:

Post a Comment