ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಉಡುಪಿ ಶ್ರೀಕೃಷ್ಣಮಠದ ಬ್ರಹ್ಮರಥಕ್ಕೆ ಹೊಸ ಕಾಯಕಲ್ಪ ನೀಡಲು ಪರ್ಯಾಯ ಶ್ರೀಸೋದೆವಾದಿರಾಜಮಠದ ಶ್ರೀವಿಶ್ವವಲ್ಲಭತೀರ್ಥಶ್ರೀಪಾದರು ನಿರ್ಧರಿಸಿದ್ದು ಅದರ ನವೀಕರಣ ಈಗಾಗಲೇ ಬಿರುಸಿನಿಂದ ಪ್ರಾರಂಭವಾಗಿದೆ.


ಸುಮಾರು 250 ವರ್ಷಗಳಿಗಿಂತಲೂ ಹಳೆಯದಾದ ಬ್ರಹ್ಮರಥ ಇತ್ತೀಚಿಗಿನ ಕೆಲವು ವರ್ಷಗಳಿಂದ ಶಿಥಿಲಗೊಂಡಿತ್ತು. ರಥದ ಜೀರ್ಣೋದ್ಧಾರ ಅನಿವಾರ್ಯ ಎಂದು ಮನಗಂಡ ಪರ್ಯಾಯಶ್ರೀಪಾದರುಈ ಮಹಾತ್ಕಾರ್ಯವನ್ನು ಕೈಗೆತ್ತಿಕೊಂಡಾಗ ಸುಮಾರು 30 ಲಕ್ಷ ರೂಪಾಯಿ ತಗಲಬಹುದೆಂದು ತಿಳಿಯಲಾಗಿತ್ತು. ಈಗ ಅದರ ನಿಖರ ಅಂದಾಜು ವೆಚ್ಚ ಇನ್ನೂ ಬರಬೇಕಿದ್ದು ಸುಮಾರು 1 ಕೋಟಿ ರೂಪಾಯಿವರೆಗೆ ತಲುಪಬಹುದೆಂದು ನವೀಕರಣದ ನೇತೃತ್ವ ವಹಿಸಿಕೊಂಡಿರುವ ಕಾಷ್ಠಶಿಲ್ಪಿ ಶ್ರೀ ಬಳ್ಕೂರು ಗೋಪಾಲ ಅಚಾರ್ಯ ಅವರು ತಿಳಿಸಿರುತ್ತಾರೆ.

ರಥದ ಹೊರಗಿನ ಅಪೂರ್ವ ಪ್ರಾಚೀನ ಕಾಷ್ಠಶಿಲ್ಪವನ್ನು ಹಾಗೆಯೇ ಇರಿಸಿಕೊಂಡು ಒಳಗಿನ ಭಾಗಗಳನ್ನು ಸಂಪೂರ್ಣವಾಗಿ ಬದಲಾಯಿಸಿ ರಥಕ್ಕೆ ಹೊಸ ಆಯಾಮವನ್ನು ಕಲ್ಪಿಸುವ ಉದ್ದೇಶವನ್ನು ಪರ್ಯಾಯಶ್ರೀಪಾದರು ಹೊಂದಿದ್ದಾರೆ. ಅಲ್ಲದೆ ದೀರ್ಘಕಾಲ ಬಾಳಿಕೆ ಬರುವಂತಹ ಮರಗಳನ್ನೇ ಉಪಯೋಗಿಸಬೇಕೆಂದು ಸೂಚಿಸಿದ್ದಾರೆ.


ದಿನಂಪ್ರತಿ 50-60 ಕುಶಲಕರ್ಮಿಗಳನ್ನು ಬಳಸಿಕೊಂಡು ನವೆಂಬರ್ ತಿಂಗಳಿನೊಳಗಾಗಿ ಈ ಬೃಹತ್ ಕಾರ್ಯವನ್ನು ಮುಗಿಸುವ ಪ್ರಯತ್ನ ತನ್ನದು ಎಂದು ರಥದ ಶಿಲ್ಪಿ ಬಳ್ಕೂರು ಗೋಪಾಲ ಆಚಾರ್ಯ ತಿಳಿಸಿರುತ್ತಾರೆ. ಶ್ರೀಕೃಷ್ಣಮಠದ ಈ ಮಹಾತ್ಕಾರ್ಯದಲ್ಲಿ ಆಸಕ್ತ ಭಕ್ತಾಭಿಮಾನಿಗಳು ಭಾಗವಹಿಸುವ ಅವಕಾಶವಿದೆ.

0 comments:

Post a Comment