ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಶ್ರೀಕೃಷ್ಣಮಠದಲ್ಲಿ ಶ್ರೀವೃಂದಾವನಾಚಾರ್ಯರ ಆರಾಧನಾ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ಶ್ರೀವೃಂದಾವನಾಚಾರ್ಯರ ವೃಂದಾವನದ ಭಾವಚಿತ್ರ ಹಾಗೂ ಶ್ರೀಸ್ವಾಪ್ನವೃಂದಾವನಾಖ್ಯಾನ ಗ್ರಂಥದ ಮೆರವಣಿಗೆ ನಡೆದು ನಂತರ ವೃಂದಾವನ ಸಮುಚ್ಛಯದಲ್ಲಿ ವಿದ್ವಾಂಸರಿಂದ
ಶ್ರೀಸ್ವಾಪ್ನವೃಂದಾವನಾಖ್ಯಾನ ಸಾಮೂಹಿಕ ಪಾರಾಯಣ ನಡೆಯಿತು.


ಪರ್ಯಾಯ ಶ್ರೀಪಾದರಿಂದ ಶ್ರೀವೃಂದಾವನಾಚಾರ್ಯರಿಗೆ ವಿಶೇಷಪೂಜಾದಿಗಳು ನಡೆಸಲ್ಪಟ್ಟವು. ರಾಜಾಂಗಣದಲ್ಲಿ ವಿದ್ವಾಂಸರಿಂದ ಶ್ರೀಸ್ವಾಪ್ನವೃಂದಾವನಾಖ್ಯಾನ ಗ್ರಂಥದ ಕುರುತು ಉಪನ್ಯಾಸ ಮತ್ತು ಶ್ರೀವೃಂದಾವನಾಚಾರ್ಯರ ಮಹಿಮಾಬೋಧಕ ಪ್ರವಚನವು ಪರ್ಯಾಯ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು.

ವೃಂದಾವನಾಚಾರ್ಯರ ತ್ರಿದಿನೊತ್ಸವವು ಇಂದು ಶ್ರೀ ವಿಶ್ವವಲ್ಲಭ ತೀರ್ಥ ಮತ್ತು ಶ್ರೀ ವಿದ್ಯಸಾಗರ ತೀರ್ಥ ಶ್ರೀ ಪಾದರಿಂದ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಚಾಲನೆಗೊಂಡಿತು.0 comments:

Post a Comment