ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
3:42 PM

ಜೀವ-ಜೀವಾಳ-ಜೋಗುಳ!

Posted by ekanasu

ವಿಚಾರ

ಈ ಕನಸು ಓದುಗರಲ್ಲಿ ಸವಿನಯವಾದ ನಮ್ಮ ಪ್ರಾರ್ಥನೆ ಎಂದರೆ,ನಾವು ಎತ್ತಿಕೊಂಡಿರುವ ವಿಷಯವು ಸರಳ ಎನಿಸಿಕೊಂಡಿರುವ ಅನುದಿನವೂ ಅನುರಣಿಸುತ್ತಿರುವ ಎಲ್ಲರೂ ಎಲ್ಲೆಲ್ಲೂ ಸೋದಾಹರಣವಾಗಿ ಮಂಡಿಸುವ ಶ್ರೀಮದ್ಭಗವದ್ಗೀತೆಯ ಬಗೆಗೆ ಹೊಸ ಪ್ರಸ್ತುತಿ.


ವಿಷೇಷವಾಗಿ ಅಲ್ಲಿ ಕಾಣಿಸುವ-ಕೇಳಿಸುವ ಮಾತುಗಳೂ ನಿಜಕ್ಕೂ ಸರಳವೇ-ಕ್ಲಿಷ್ಟವೇ ಇದೇ ಸಂಧಿಗ್ಧ ಬಗೆಗೆ ಉಂಟು.ನಿಜಕ್ಕೂ ಗಿತೆ-ಗಿತಾಚಾರ್ಯಮತು-ಭವರೋಗಕ್ಕೆ ಖಂಡಿತವಾಗಿಯೂ ರಾಮಬಾಣವೇ ಆಗಿದ್ದಲ್ಲಿ ಮತ್ತೇಕೆ-ಕಷ್ಟವೋ-ಸುಖವೋ ಆಚ್ರಣೆಗೆ ಇಛ್ಛುಕರು ತರುತ್ತಿಲ್ಲ-ತರಲಾರರು-ತರಬಾರದೆಂಬತೇ ನಡೆದುಕೊಳ್ಳುತ್ತಿದ್ದಾರೆ?


ಭಗವದ್ಗೀತೆಗೆ 700 ಕ್ಕೂ ಮಿಕ್ಕಿಟೀಕೆಗಳನ್ನು-ಅರ್ಥಾತ್, ಭಾಷ್ಯವನ್ನು ಬರೆದಿದ್ದಾರೆ ಎಂತ ಒಂದು ಚಾಲತಿಯ ಮಾತುಂಟು! ಒಂದೊಮ್ಮೆ- ಮಾತು-ಮಾತಿಗೆ ಅರ್ಥ-ಅರ್ಥಕ್ಕೆ ಮಾತು -ಈ ಸತ್ಯವೇ-ಪರಮ ಸತ್ವದ ಮಾತಾಗಿದ್ದರೆ-ನೇರವಾಗಿ ಸಂಸ್ಕೃತದ ಆಖ್ಯಾನಕ್ಕೆ-ಕನ್ನಡದ ಅನುವಾದ ಎಂತ ಒಂದು-ಟೀಕೆ-ಭಾಷ್ಯ-ವಿವರಣೆ-ಆಗದಿತ್ತೇನು-ಆಗಬಾರದೇಕೆ-ಆಗಲೇಬೇಕಲ್ಲದೆ ಗತ್ಯಂತರವುಂಟೇ?


ಯೋಚಿಸುವ-ಪ್ರಚೋದಿಸುವ-ಛೇಡಿಸುವ ಮಾತಲ್ಲದೇ ಇದು ಬೇರೆಯೇನು?
ನಾವು-ನಮ್ಮ ಉಪನಯನವಾದ ದಿನಗಳಿಂದ ಈ ಹೊತ್ತಿಗೆ ಸರಿಸುಮಾರು-ಅರವತ್ತು ವರ್ಷಗಳಿಗೂ ಮೀರಿ-ಗೀತೆಯನ್ನು-ಓದಿದ್ದು-ಆಳವಾಗಿ ಓದಿದ್ದು-ಪ್ರೌಢವಾಗಿ ಚಿಂತಿಸಿದ್ದು-ಚಿಂತನೆ ನದೆಸಿದ್ದು-ತಥಾಕಥಿತ-ಅತಿತಥ ಮಹಾತ್ಮರನ್ನು ಸಂಧಿಸಿ-ಸ್ಪಷಿ9ಸಿ-ಕೇಳಿದ್ದಾಯಿತು-ನಿಜಕ್ಕೂ ಭಗವಂತನಮಾತಿಗೆ-ಜನಸಾಮಾನ್ಯರು-ವಿಮರ್ಶೆ ಮಾಡಬಲ್ಲರೆ-ಮಾಡಬೇಕೆ ಎಂತ.


ಅದಕ್ಕೆಲ್ಲ ಉತ್ತರವು-ಸಾಮಾನ್ಯರಿಗೆ ಅರ್ಥವಾಗವುದಿಲ್ಲ ಎಂಬ ಮೂದಲಿಕೆಯೇ-ಮಕುಟದ ಸಂಗತಿಯಾಯಿತು.
ಒಂದೊಮ್ಮೆ ಜನಸಾಮನ್ಯರಿಗೆ ಅರ್ಥವಾಗದಾದಮೇಲೆ ಯಾರು-ಯಾರಿಗೆ-ಏತಕ್ಕೆ-ಏನನ್ನು ಹೇಳುತ್ತಾರೆ-ಅಥವಾ ಹೇಳಬೇಕೇಕೆ?
ಇದು ಸರಿಯೆ-ತಪ್ಪೇ?
ಅದೇ ನಮ್ಮಲೇಖನದ ಜೀವ-ಜೀವಾಳ-ಜೋಗುಳ!

ಇಶ್ಟುಮಾತ್ರ ಸತ್ಯಾತ್ ಸತ್ಯವು-ಭಗವಂತ-ಸಾಮಾನ್ಯಕ್ಕೆ-ಸಾಮಾನ್ಯರಿಗೆ-ಸರಳಕ್ಕೆ-ಸರಳರಿಗೆ ಒಲಿಯುವಷ್ಟು-ಸಲೀಸಾದ
ಸಂಗತಿಯು-ಹೇಳಿಕೇಳಿ-ಪ್ರಸಿದ್ಧ-ಸಿದ್ಧರ ಬಗೆಗೆ ಅಲ್ಲ-ಕಾರಣ ಪರಮಪುರುಷನವಾಣಿಯಂತೆ-ಸಿದ್ಧ-ಕೋಟಿಗೆ ಒಬ್ಬ,
ಹಾಗಾಗಿ ಸಾಮಾನ್ಯನಾಗಿ-ಸಾಮಾನ್ಯರಲ್ಲಿ-ಸಾಮಾನ್ಯನಾಗಿ-ನಾವು ಧ್ವನಿ ಎತ್ತುತ್ತಿರುವುದೇ ಇಲ್ಲಿಯ ಆಂತರ್ಯ-ಐಶ್ವರ್ಯವು.
ಆಮಟ್ಟಿಗೆ ನಮ್ಮ ನೇರ ಚೂಪಾದ ನುಡಿಯು ಗೀತೆಯಮೇಲೆ ಪ್ರಭುತ್ವ ಸಾಧಿಸಿ ತಾವೇ ಎಲ್ಲಾ ಎನ್ನುವವರಿಗೆ ಕಹಿಯೂ-ಕಸಿವಿಸಿಯೂ ಆಗದೇ ಖಂಡಿತವಾಗಿಯೂ ಸಿಹಿ ಆಗುವ ಆಗಿಸುವ ಮಾತು ಮತ್ತೆಲ್ಲಿ?


ಇರಲಿ ಗೀತೆಯ 18 ಅಧ್ಯಾಯಗಳಿಗೆ ಅಲ್ಲಲ್ಲಿ ಆರಿಸಿಕೋಡ ಶ್ಲೋಕಗಳಿಗೆ ಅರ್ಧದ ಜಾಡನ್ನೇ ಹಿಡಿದು ನಾವು ಝಾಡಿಸುತ್ತೇವೆ.
ಈ ನಮ್ಮ ಮಾತುಗಳು ನಮ್ಮ ಪೂರ್ವ ಸಿದ್ಧತೆ-ಭದ್ದತೆ ಬಗೆಗೆ ಯಥಾವತ್ತಾಗಿ ತಿಳಿಸಲು ನಾವು ಮಾಡಿದ ಪ್ರಯತ್ನವು.
ಇನ್ನು ಕ್ರಮಭದ್ದವಾಗಿ ವಿಷಯ ಪ್ರವೇಶ-ವಿವಶವೋ-ಆವೇಸ್ದವೋ-ಆಮೋದವೋ-ಮೇಧವೋ ಎಲ್ಲ ಭಗವಂತನ ಲೀಲೆ-ಲಾಲಿ ಇಲ್ಲ ಜೋಕಾಲಿ!
ಒಟ್ಟಿನಲ್ಲಿ ಝೋಲಿಹೊಡಿಯದೆ-ಹೊಡಿಸದೆ-ಜೋಳಿಗೆಗೆ-ಜೋಳಿಗೆಯ ಹೋಳಿಗೆ ನಾವಿಲ್ಲಿ ಒಪ್ಪಿಸಲು
ಕಂಕಣಭದ್ದರಾಗಿ-ಕೈಂಕರ್ಯಕ್ಕೆ ಒದಗಿದ್ದೇವೆ-ಒಪ್ಪಿಸಿಕೊಂಡಿದ್ದೇವೆ -ನಮ್ಮನ್ನೆ-ಓದುಗರಿಗೆ.
ಓಂ ತತ್ಸತ್.

- ಆರ್.ಎಂ.ಶರ್ಮಾ. ಬಿ


0 comments:

Post a Comment