ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮುಡಬದಿರೆ: ಯಕ್ಷಸಂಗಮ ಮೂಡಬಿದಿರೆ ಆಶ್ರಯದಲ್ಲಿ ಜುಲೈ 28ರಂದು ರಾತ್ರಿ 9ಕ್ಕೆ ಸಮಾಜಮಂದಿರದಲ್ಲಿ ಯಕ್ಷಗಾನದ ಪ್ರಸಿದ್ಧ ಚೆಂಡೆ ಮದ್ದಳೆ ವಾದಕ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಯಕ್ಷರಂಗದ ಪ್ರಸಿದ್ಧ ಭಾಗವತ ಪದ್ಯಾಣ ಗಣಪತಿ ಭಟ್ ಅವರ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ. ರಾತ್ರಿ 10ರಿಂದ ಸುಪ್ರಸಿದ್ಧ ಕಲಾವಿದರಿಂದ ತಾಳಮದ್ದಲೆ ಕೂಟ- ಮಹಾಬ್ರಾಹ್ಮಣ ಜರಗಲಿದೆ. ಇದೇ ಸಂದರ್ಭದಲ್ಲಿ ಮೂಡಬಿದಿರೆಯ ಪ್ರಸಿದ್ಧ ಹವ್ಯಾಸಿ ತಾಳಮದ್ದಲೆ ಅರ್ಥಧಾರಿ ದಿ.ಬಿ.ನಾರಾಯಣ ರೈ ಇವರ ಸಂಸ್ಮರಣಾ ಕಾರ್ಯಕ್ರಮ ಏರ್ಪಡಿಸಲಾಗಿದೆ.


13ನೇ ವರುಷದ ತಾಳಮದ್ದಲೆ ಕೂಟ - ಸನ್ಮಾನ ಸಮಾರಂಭವನ್ನು ಸ್ಥಳೀಯ ಶಾಸಕ ಕೆ.ಅಭಯಚಂದ್ರ ಜೈನ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಹಿಸುವರು. ಅತಿಥಿಗಳಾಗಿ ಬಿ.ಚಂದ್ರಶೇಖರ್ ರಾವ್, ಕೆ.ಆರ್.ಪಂಡಿತ್ , ಗಣೇಶ್ ಕೊಲಕಾಡಿ ಭಾಗವಹಿಸುವರು. ಆಸಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

0 comments:

Post a Comment