ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಿನೆಮಾ


ಹೋದ ಭಾನುವಾರ ಊಟ ಮಾಡಲೆಂದು ಆಫೀಸಿನಿಂದ ಮನೆಗೆ ಹೋದೆ. ಟಿ.ವಿ.ಯಲ್ಲಿ ಹಿಂದಿ ಚಲನಚಿತ್ರರಂಗದ ಅಪ್ಸರಾ ಲೆಜೆಂಡರಿ ಅವಾರ್ಡ್ ಕಾರ್ಯಕ್ರಮ ನಡೆಯುತ್ತಿತ್ತು. ವೇದಿಕೆ ಮೇಲೆ ಹಿರಿಯ ನಟನಟಿಯರು ಆಸೀನರಾಗಿದ್ದರು. ನಟರಲ್ಲಿ ದಿಲೀಪ್ ಕುಮಾರ್, ಮನೋಜ್ ಕುಮಾರ್, ವಿನೋದ್ ಖನ್ನಾ ಮತ್ತು ರಾಜೇಶ್ ಖನ್ನಾ ಸಹ ಉಪಸ್ಥಿತರಿದ್ದರು. ಎಲ್ಲರಿಗೂ ಅವಾರ್ಡ್ಡ ಕೊಟ್ಟು ಸನ್ಮಾನಿಸಲಾಗುತ್ತಿತ್ತು. ಅಷ್ಟರಲ್ಲಿ ಹೇಮಾ ಮಾಲಿನಿ ವೇದಿಕೆಯತ್ತಾ ಕೊಂಚ ತಡವಾಗಿ ಬಂದರು. ಅವರಿಗೂ ಸನ್ಮಾನಿಸಲಾಯಿತು. ಎಲ್ಲರು ತಮ್ಮ ಅನಿಸೆಕಗಳನ್ನು ಹೇಳುವಂತೆ ಶಾರುಖ್ ಅವರನ್ನು ಬೇಡಿಕೊಂಡಾಗ, ತಮ್ಮದೇ ಆದ ಶೈಲಿಯಲ್ಲಿ ಎಲ್ಲರು ಎರಡೆರಡು ಮಾತಗಳನ್ನಾಡಿದರು.ರಾಜೇಶ್ ಖನ್ನಾ ರವರಿಗೆ ಮೈಕ್ ಕೊಟ್ಟು ಎರಡು ಮಾತುಗಳನ್ನಾಡುವಂತೆ ಶಾರುಖ್ ಕೇಳಿದಾಗ, ರಾಜೇಶ್ ಖನ್ನಾ ಎದ್ದು ನಿಂತು ತಮ್ಮ ಭಾವುಕ ಶೈಲಿಯಲ್ಲಿ ಹೀಗೆ ನುಡಿದರು -

ಸಬ್ಸೆ ಪೆಹ್ಲೆ ತೊ ಯೆ ಕಹೂಂಗ ಕೆ ಮೈ ದೇರ್ ಸೆ ಆತಾ ನಹೀ
ಲೇಕಿನ್ ಕ್ಯೂಂಕಿ ದೇರ್ ಹೋಜಾತಿ ಹೈ.
ಇಸ್ಲಿಯೆ ಮಾಫಿ ಕ ಹಖ್ದಾರ್ ಹೂಂ
ನ ಫಿರ್ ಭಿ ಕಿಸಿನೆ ನ ಮಾಫ್ ಕಿಯಾ ಹೋ ತೋ
ಸಿರ್ಫಿ ಇತ್ನಾ ಕೆಹ್ನಾ ಚಾಹೂಂಗ "ಹಮ್ಕೊ ಮಾಫಿ ದೇದೋ ಸಾಹೆಬ್"

ಇಷ್ಟು ಹೇಳಿ... ಸಿಪ್ಪಿಯವರ ತಂದೆಗೆ ಅಭಿನಂದನೆ ಸಲ್ಲಿಸಿ, ನನಗೆ ರಾಝ್ ಚಿತ್ರದಿಂದ ಮೊದಲ ಬ್ರೇಕ್ ಕೊಟ್ಟ ಅನ್ನದಾತ ಎಂದು ಸ್ಮರಿಸಿಕೊಂಡರು.

ಮತ್ತೆ ಹೀಗೆ ಹೇಳಿದರು.... ಔರ್ ಇತ್ನಾ ಜರೂರ್ ಕಹ್ನಾ ಚಾಹೂಂಗ....

"ಆಪ್ ನ ಜಾನೆ ಮುಝ್ ಕೊ ಸಮಜ್ ತೆ ಹೈ ಕ್ಯಾ
ಮೈ ತೊ ಕುಚ್ ಭೀ ನಹೀ
ಇತ್ನಿ ಬಡಿ ಭೀಡ್ ಕಾ ಪ್ಯಾರ್ ಮೈ ರಖ್ಖೂಂಗ ಕಹಾ
ಮೆರೆ ಹಮ್ದಮ್ ಮೆರೆ ದೋಸ್ತ್"

"ಇಝ್ಝತೆ, ಶೊಹ್ರತೆ, ಉಲ್ಫತೆ, ಚಾಹತೆ ಸಬ್ಕುಚ್ ಇಸ್ ದುನಿಯಾ ಮೆ ರೆಹ್ತಾ ನಹೀ

ಇಝ್ಝತೆ, ಶೊಹ್ರತೆ, ಉಲ್ಫತೆ, ಚಾಹತೆ ಸಬ್ಕುಚ್ ಇಸ್ ದುನಿಯಾ ಮೆ ರೆಹ್ತಾ ನಹೀ

ಇಝ್ಝತೆ, ಶೊಹ್ರತೆ, ಉಲ್ಫತೆ, ಚಾಹತೆ ಸಬ್ಕುಚ್ ಇಸ್ ದುನಿಯಾ ಮೆ ರೆಹ್ತಾ ನಹೀ

ಆಜ್ ಮೈ ಜಹಾ ಹೂಂ... ಕಲ್ ಕೊಯಿ ಔರ್ ಥಾ

ಯೇ ಭಿ ಏಕ್ ದೌರ್ ಹೈ... ವೋ ಭೀ ಏಕ್ ದೌರ್ ಥಾ"

ಇದೀಗ ಅವರು ನಮ್ಮೊಂದಿಗಿಲ್ಲ, ಅವರು ನಮ್ಮನ್ನು ಅಗಲಿದ್ದಾರೆ...! ಅವರಿಗೆ ಶ್ರದ್ಧಾಂಜಲಿ ಅರ್ಪಿಸೋಣವೆಂದು ಮೇಲಿನ ಅವರ ಮಾತುಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದೇನೆ.

- ಜಬೀವುಲ್ಲಾ ಖಾನ್

0 comments:

Post a Comment