ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮುಡುಬಿದಿರೆ: ಸಾಮಾಜಿಕ ಅರಿವು ಮೂಡಿಸುವಲ್ಲಿ ಹಾಸ್ಯ ಹೆಚ್ಚು ಪರಿಣಾಮಕಾರಿ ಮಾಧ್ಯಮ. ನಗುವಿನ ಜತೆಗೇ ನಮ್ಮ ಸುತ್ತಲಿನ ಓರೆಕೋರೆಗಳನ್ನು ಸರಪಡಿಸುವ ಶಕ್ತಿ ಹಾಸ್ಯಕ್ಕಿದೆ ಎಂದು ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಯೋಗೀಶ್ ಕೈರೋಡಿ ಹೇಳಿದರು.


ಅವರು ಇತ್ತೀಚೆಗೆ ವಿದ್ಯಾಗಿರಿಯಲ್ಲಿ ಆಳ್ವಾಸ್ ಕಾಲೇಜಿನ ಮಾನವಿಕ ಸಂಘದ ವತಿಯಿಂದ ನಡೆದ ಹಾಸ್ಯ ಲಹರಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಹರೀಶ್ ಆದೂರು ಅವರು ಈಗ ನಗಬೇಕಾದರೆ ಪ್ರಸ್ತುತ ರಾಜಕೀಯವನ್ನು ನೋಡಿದರೆ ಸಾಕು ಎಂದರು.
ರಾಜ್ಯಶಾಸ್ತ್ರ ಉಪನ್ಯಾಸಕ ಆದಿತ್ಯ ಭಟ್ ಪ್ರಸ್ತಾವನೆಗೈದರು. ವಿದ್ಯಾರ್ಥಿ ಗಳಾದ ಸನಾ ಮೆಹರಿನ್ ಸ್ವಾಗತಿಸಿದರು. ಭಾನುಪ್ರಿಯ ನಿರೂಪಿಸಿದರು. ಅನುರಾಧ ಹೆಗ್ಡೆ ವಂದಿಸಿದರು.

ವರದಿ :ಧನಂಜಯ ಕುಂಬ್ಳೆ

0 comments:

Post a Comment