ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಹೆಸರಿಗೆ ತಕ್ಕಂತೆ ನೂರಕ್ಕೂ ಹೆಚ್ಚು ಬೇರುಗಳನ್ನು ಹೊಂದಿದ ಈ ಔಷಧೀಯ ಸಸ್ಯ ಆಡು ಭಾಷೆಯಲ್ಲಿ ಹಲವು ಮಕ್ಕಳ ತಾಯಿ ಎಂದೇ ಜನಜನಿತ.ನಾಟಿ ಹಾಗು ಆಯರ್ವೇದದಲ್ಲಿ ಶತಾವರಿ ಬೇರು ಮಹತ್ವ ಪಡೆದಿದೆ.ಪ್ರಮುಖವಾಗಿ ವಾತಪಿತ್ತ ನಾಶಕ ಔಷಧವಾಗಿ ಬಳಸುವ ಶತಾವರಿ ಧಾತು ಪುಷ್ಟಿಕರ ಹಾಗು ವೃದ್ಧಿಕರವೂ ಹೌದು.ಗರ್ಭಸ್ಮಾರದಲ್ಲಿಯೂ ಇದು ಉಪಯೋಗಕರವಾಗಿದೆ. ಶ್ರೀಲಂಕ ಮತ್ತು ಭಾರತದಲ್ಲಿ ಮಾತ್ರ ಕಂಡು ಬರುವ ಈ ಬಹೂಪಯೋಗಿ ಔಷಧಧೀಯ ಸಸ್ಯ ಇಂದು ಅಪಾಯದಂಚಿನಲ್ಲಿರುವ ಗಿಡಮೂಲಿಕೆ ಎಂದು ಪರಿಗಣಿಸಲ್ಪಟ್ಟಿದೆ.ಎರಡು ಅಡಿಗಿಂತ ಹೆಚ್ಚು ಎತ್ತರ ಬೆಳೆಯುವ ಸಸ್ಯವಿದು.ಆಯುರ್ವೇದ ಔಷಧಿಯಾಗಿ ಬಹಳೇ ಬೇಡಿಕೆಯಲ್ಲಿರುವ ಶತಾವರಿ ನರ ದೌರ್ಬಲ್ಯ ಮತ್ತು ಗ್ಯಾಸ್ಟ್ರಿಕ್ ಅಲ್ಸರಿನ ಚಿಕಿತ್ಸೆಯಲ್ಲಿ ಸಹ ಉಪಯೋಗಿಸಲ್ಪಡುತ್ತದೆ.


ಗರ್ಭಿಣಿಯರು ಇದರ ಬೇರನ್ನು ಹಾಲಲ್ಲಿ ರುಬ್ಬಿ ಬೇಕಾದಷ್ಟು ಬೆಲ್ಲ ಸೇರಿಸಿ ಕುಡಿಯಬಹುದು. ಇದು ಗರ್ಭಕ್ಕೆ ಪುಷ್ಟಿ ನೀಡುತ್ತದೆ.
ಬಾಣಂತಿಯರು ಇದನ್ನು ಸೇವಿಸಿದರೆ ಎದೆ ಹಾಲು ಹೆಚ್ಚುತ್ತದೆ.

ನಿಶ್ಯಕ್ತಿ ನಿವಾರಕ.

ಶತಾವರಿ ರಸಾಯನ (ಔಷಧ ಅಂಗಡಿಗಳಲ್ಲಿ ಲಭ್ಯ)ಸೇವನೆಯಿಂದ ಮೂತ್ರ ಸಂಬಂಧಿ ಕಾಯಿಲೆಗಳು ಪರಿಹಾರವಾಗುತ್ತದೆ.

ಶತಾವರಿ ಗೆಡ್ಡೆ ಹಾಕಿ ಕಷಾಯ ಗಂಜಿ ತಯಾರಿಸ ಬಹುದು.ಮಾಡುವ ವಿಧಾನ:ಶತಾವರಿ ಗೆಡ್ಡೆ,ಒಣ ಶುಂಠಿ,ಕಾಳು ಮೆಣಸು,ಹಿಪ್ಪಲಿ,ಮೆಂತ್ಯೆ ಕಾಳು,ಜೀರಿಗೆ ಮುಂತಾದವುಗಳನ್ನು 30 ಗ್ರಾಂ ತೂಕದಷ್ಟು ತೆಗೆದು ತೊಳೆದು ಶುಚಿ ಮಾಡಿ ಸರಿಯಾಗಿ ಜಜ್ಜಬೇಕು.ಇದನ್ನು ಒಂದು ಲೀಟರ್ ನೀರಿನಲ್ಲಿ ಕುದಿಸಬೇಕು.ಕುದಿಸಿದ ನೀರನ್ನು ತೆಗೆದು ಅಕ್ಕಿ ಗಂಜಿ ಮಾಡಿ ಕುಡಿಯಬೇಕು.

ಮಹಿಳೆಯರ ಬಿಳಿ ಸೆರಗು,ಮುಟ್ಟಿನ ಸಮಸ್ಯೆಗಳು ಮತ್ತು ಹಾಲುಣಿಸುವ ತಾಯಂದಿರಿಗೆ,ನಿಶ್ಯಕ್ತಿ ಇರುವವರಿಗೆ ಈ ಗಂಜಿ ಸೇವನೆಯಿಂದ ಒಳ್ಳೆಯ ಪರಿಹಾರ ದೊರೆಯುತ್ತದೆ.

ಇಷ್ಟಲ್ಲದೇ ಈ ಔಷಧೀಯ ಸಸ್ಯದ ಹೆಸರಿಗೆ ಒಂದು ದೇವಿ ದೇವಸ್ಥಾನ ಕುಂದಾಪುರದ ಬಳಿ ಇರುವ ಕೋಟ ಎಂಬಲ್ಲಿ ನಿರ್ಮಿಸಲಾಗಿದೆ.ಮಕ್ಕಳಾಗದ ದಂಪತಿಗಳು ಇಲ್ಲಿ ಹರಕೆ ಹೇಳಿ ತೊಟ್ಟಿಲೊಪ್ಪಿಸಿದರೆ ಮಕ್ಕಳಾಗುವುದೆಂಬ ಪ್ರತೀತಿಯಿದೆ.

- ಸೌಮ್ಯ ಆದೂರು.

2 comments:

ayyanna ayyanna said...

ಈ ಸಸ್ಯದ ಬೀಜ ಻ಥವಾ ಗಿಡ ಬೆಳಸಲಿಕ್ಕೆ ಬೇಕಾಗುವ ಸಾಮಗ್ರಿ ತಿಳಿಸಿ
ಅಯ್ಯಣ್ಣ 9035076064

ayyanna ayyanna said...

ಈ ಸಸ್ಯದ ಬೀಜ ಹಾಗೂ ಬೇಳೆಯಲು ಸಹಕಾರ ನೀಡಲು ಕೋರಿದೆ.
ಅಯ್ಯಣ್ಣ ಕೊಪ್ಪಳ 9035076064

Post a Comment