ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ನಿಜಕ್ಕೂ ಲಂಚ ಎಂದರೆ ಏನು ಎಂತ ಕೇಳಿದರೆ ಹೇಳುವುದೇನು? ಕೆಲಸ-ಕಾಯಕ ಅದಕ್ಕೆ ಮಾಯಕವಾದ-ಮಾಣಿಕ್ಯವಾದ ಹಣ ಎಂತಾದರೆ ಅಳತೆಗೆ ಯಾವ ಮಾನ-ಯಾರಮಾನ-ಯಜಮಾನ? ಮಗು ಹುಟ್ಟುವುದರಿಂದ ಹಿಡಿದು ಅಳಿಯುವವರೆಗೆ ಏನಾದರೂ ಕಾರಣಕ್ಕೆ-ಕಣಕ್ಕೆ-ಕಾಣಿಕೆ-ಹವಣಿಕೆ ಇಲ್ಲವೇ? ಊಟಕ್ಕೆ,ಇರಲಿ ಈಗೀಗ ಊಟವೇ ಲಂಚದ ಅವತಾರವಲ್ಲವೇ? ಶಾಲೆ-ಕಲಿಯಲು-ಕಲಿಸಲು! ಆದರೆ ಆಗಿರುವುದು ಅನ್ನ-ಕಲಸಲು ಕೈಗೆ ಕೆಲಸ!


ಪಾಠ ಪ್ರವಚನಗಳಿಗೆ ಸಮಯ ಸಾರಣಿ-ಟೈಂ ಟೇಬಲ್ ಇಲ್ಲದಿದ್ದರೂ ಊಟಕ್ಕೆ ಅತ್ಯಗತ್ಯವೇ!
ಎಲ್ಲ ಅಳತೆ-ತೂಕ-ವೈವಿಧ್ಯತೆ-ಪಕ್ವತೆ-ಗುಣಮಟ್ಟ ಎಲ್ಲಾ ಮೆಟ್ಟಿಲುಗಳನ್ನೂ ದಾತಿದ ಮೇಲೇ ಅದು ತಿನ್ನಲು-ತಿನ್ನಿಸಲು ತಕ್ಕುದು
ಪ್ರಯಾಣಕ್ಕೆ ಪುರಸೊತ್ತಿಲ್ಲ-ಸೊತ್ತಿದೆ-ಸೋತಿದೆ-ಹಣ ಕೊಡು ಸವಲತ್ತು ಪಡೆ! ಕಛೇರಿಗಳಿಗೆ ಓಡಾದಲು ವ್ಯವಧಾನವಿಲ್ಲ-ಪ್ರತಿನಿಧಿಗೆ-ನಿಧಿ!
ಕೆಲಸಕ್ಕೆ ತುತು೯-ದದು೯-ಕೊಡು ಹಣ ಪಡೆ ಉದ್ಯೋಗ!

ಎಲ್ಲಿ ಹೋಗಲಿ-ಹೇಗೆ ಹೋಗಲಿ-ಒಳಹೋಗಲು-ಹೊರಬರಲು ಬೇಕೇಬೇಕು ಝಣ-ಝಣ ಕಾಂಚಾಣವೇ!
ಇರಲಿ ದೈವಕ್ಕೆ ಬನ್ನಿರಿ-ಹಣವಿಲ್ಲದೇ ದ್ದೈವ ಒಲೆದೀತೆ-ಉಹೂಂ-ಒದ್ದೀತು!
ಹೆಣ ಎತ್ತಲು,ಹೆಣಸುಡಲು-ಹೆಣಬೀಳಿಸಲೂ ಹಣವೇ ಗುಣ-ಗುಣಾಧ್ಯವು!

ಜನಕ್ಕೆ ಪ್ರತಿ-ಪ್ರತಿನಿಧಿ ಇಲ್ಲೂ ಹಣವೇ ಮುಂಚೂಣಿಯಲ್ಲಿ!
ಆಳುವ ಸರಕಾರ-ಅಳಿಸುವ ಸರಕಾರ-ಅರಳಿಸುವ-ಕೆರಳಿಸುವ ದಂಧೆಗೂ ಹಣವೇ ಹೂರಣ!
ಯಾಗ-ಯಜ್ಞ-ಜಾತ್ರೆ-ಯಾತ್ರೆ,ನೇಮ-ಹೋಮ,
ಯಾವ ಹೆಸರು ಹೇಳಿರಲ್ಲ ಅಲ್ಲೆಲ್ಲಾ ಹಣವೇ-ಹಣ್ಣು ಅದಿಲ್ಲದಿದ್ದರೆ-ಹುಣ್ಣು-ಕೊಳೆತು ನಾರುವ ದುವಾ೯ಸನೆಯ ಹುಣ್ಣು!

ದೇವಸ್ಥಾನಗಳಲ್ಲಿ ತೀಥ೯-ಪ್ರಸಾದ-ಉಪಚಾರ-ಆಚಾರ-ವಿಚಾರ-ಸಂಚಾರ ಎಲ್ಲಿಲ್ಲ ಹಣ-ಏಕಿಲ್ಲ ಹಣ?
ನಿಜಕ್ಕೂ ಕೆಲಸಕ್ಕೆ ಪಗಾರವೇ ಬಂಗಾರವಾದರೆ-
ಭಕ್ಶೀಸು-ಬೋನಸ್ಸು-ಎಗ್ರಾಷಿಯ,ಇನ್ಸೆಂಟೀವ್ ಇನ್ನೂ ಏನೇನೋ ಏಕೆ?
ಪುಸ್ತಕ ಬರೆದ-ಮಾರಿದ ಹಣ ಮಾಡಿದ.

ಆದರೆ ಪ್ರಶಸ್ತಿ ಎಂತ ಮೇಲು ಹಣ-ಹೆಗ್ಗಣ!
ಆಟವಾಡಿದ ಪ್ರಶಸ್ತಿ ಪಡೆದ-ಅದಕ್ಕೆ ಪೂರಕ ಪ್ರಶಸ್ತಿ ಎಂತ ಹಣದ ಸ್ವಸ್ತಿ!
ಕೆಲಸ ರಕ್ಷಣೆ-ಜೀವ ಉಳಿಸಿದ ಎಂತ ಜಕಾತಿ!
ಹಣಕ್ಕೆ ಮರು ಹಣ-ಮಗ್ಗುಲು ಹಣ-ತೆವಲು ಹಣ!
ಇದಾವ ಹಣ-ಹಣಿ ಹಣಾಹಣಿ ಬರಹ ಸ್ವಾಮಿ?

ಎಲ್ಲ ಐಹಿಕ ಕಾಮನೆಗೂ ಬೆಣೆ ಕೊನೆ ಎನ್ನುವ ಭಗವದ್ಗೀತೆಯಲ್ಲಿಯೇ ಪರಾತ್ಪರ ಅಪ್ಪಣೆ ಕೊಡಿಸುತ್ತದೆ-ಮಾನವ ವಗ೯ ದೇವ ವಗ೯ವನ್ನು ಯಾಗ-ಯಜ್ಞ-ಹವಿಸ್ಸು ಇವನ್ನೆಲ್ಲಾ ಕೊಡುತ್ತಾ-ಕೊಡಿಸುತ್ತಾ ಸಂತೋಷಗೊಳಿಸಲಿ ಎಂತ!
ಅಂತಹ ತೃಪ್ತ-ಸಂತೃಪ್ತ ದೇವಗಣ ಮನುಷ್ಯವಗ೯ವನ್ನು ಸಂತುಷ್ಟಗೊಳಿಸಲಿ ಎಂತ!
ಎಲ್ಲಿಗೆ ಬಂತು ಸ್ವಾಮಿ ಲಂಚದ ಲಾಂಚು?

ನಾವು ತಕ೯ಮಾಡುವುದು-ಇಷ್ಟೇ-ಒಂದು ಉದ್ಯೋಗಕ್ಕೆ ಗೈರುಹಾಜರಾಗಿ ಸ್ವಂತಕ್ಕೆ-ಲಂಚ ತಪ್ಪಿಸಲು ಮತ್ತೊಂದು ಉದ್ಯೋಗಕ್ಕೆ ಕೈಹಾಕುವುದು ಹಣದ ಅಳತೆಯಲ್ಲಿ ಗಮನಾಹ೯ ವ್ಯತ್ಯಾಸ ಮಾಡುವುದಾದರೆ,
ಆಥಿ೯ಕವಾಗಿ ಉತ್ತಮವಾದುದನ್ನು ಮಾಡುವುದರಲ್ಲಿ ಹಣವೇ ಗುಣವಾದರೆ-ಗುಣ್ಯ-ಗಣ್ಯ-ವರೇಣ್ಯವಾಗಬಾರದೇಕೆ?
ಕೈಲ್ಲಾಗದವರು-ಕೈಕಾಲು ಇಲ್ಲದವರು,ವಯಸ್ಸಾದವರು,ಸಹಾಯಕ್ಕೆ ಮನೆಯಲ್ಲಿ ಬೇರಾರು ಇಲ್ಲದವರು ಹೀಗೇ ಬಾಹ್ಯ ಕೈ-ಜೋಡಿಸುವ ಕೈ-ಸಹಾಯ ಹಸ್ತ ಪಡೆದರೆ-ಪಡೆಯಲು ಹಣ ನೀಡಿದರೆ-ನೀಡಬೇಕಾದರೆ-ನೀಡಲೇಬೇಕಾದರೆ ಅಪವಾದವೇಕೆ?
ಹೆಚ್ಚು ಕೆಲಸ-ಶೀಘ್ರಕೆಲಸ-ಉತ್ತಮಕೆಲಸ ಹೀಗೆಲ್ಲ ಗುಣಕ್ಕೆ ಹಣ ಮಾನವಾದರೆ-ಮಾನ್ಯವಾದರೆ-ಅಧಿಕ-ಅಧಿಕಾರೇತರ ಹಣಪಡೆದು ಸೇವೆ ನೀಡಿದರೆ ತಪ್ಪೇನು?

ಮೌಲ್ಯಮಿರಿದ ಹಣಕ್ಕೆ-ಆಸ್ತಿ-ವಾಹನ-ಅಂತಸ್ತು-ಆಂತಯ೯ ಮಾರುತ್ತಾರೆ-ಅದು ಸರಿ!
ಮಾಡಿದ-ಮಾಡಿಸಿದಕೆಲಸಕ್ಕೆ ಹೆಚ್ಚುಹಣಪಡೆದರೆ ಬಡಬಡ ಬಡಿದುಕೊಳ್ಳುವುದು!
"ಸವ್ಯಸಾಚಿ ಎಂದರೆ-ಎರಡೂ ಕೈಗಳಲ್ಲಿ ಕೆಲಸಮಾಡುವ ಕ್ಷಮತೆ ಎಂತಲ್ಲವೆ?
ಅಮ್ತಹಜನ ಕೆಲಸ ಹೆಚ್ಚು ಮಾಡಲಾರರೇ-ಮಾಡಬಾರದೇ-ಕೆಲಸಕ್ಕೆ ದಾಮಾಶಹಣಪಡೆದರೂ ಉಳಿದವರಿಗಿಂತ ಹೆಚ್ಚಾಗದೇ?
ಈಹೆಚ್ಚು ತಪ್ಪೇ-ಒಪ್ಪೇ?

ಎಲ್ಲವನ್ನು ಹೊಂದಿರುವ-ಎಲ್ಲವನ್ನೂ ಕೊಡುವ ಸ್ವಾಮಿಯೇ ಯನ್ನಭಜಕರಿಗೆ ಅನುಯಾಯಿಗಳಿಗೆ ಎಲ್ಲವನ್ನೂ ತನಗೇ ಅಪಿ೯ಸು ಎಂತನೆ ಅಂದರೆ-
ಅದು ಲಂಚವೇ-ಕೊಂಚವೇ-ಸಮಂಜಸವೇ?
ಲಂಚದಿಂದ ಸುಖ-ಸಖ-ಸೌಖ್ಹ್ಯ ಸಿಕ್ಕುವುದಾದರೆ-ಅದು ನೆಮ್ಮದಿ ನಿರಾಳ ನೀಡುವುದಾದರೆ ತಪ್ಪೇನು?
ಉಳ್ಳವರು ಶಿವಾಲಯವ ಮಾಡುವರು-ಉಳ್ಳವರು ಲಂಚವ ನೀಡಿದರೆ ಆದದ್ದೇನು?
ಪ್ರಳಯವೇ-ಪ್ರಣಯವೇ-ಪ್ರಯಾಣವೇ,
ಪ್ರಮಾಣವೇ ತಿಳಿಸಲಿ!

ಅಲ್ಲಿಗೆ ವಿರಮಿಸಿ ಲಂಚದ ರಮಾರಮಣ ಕಥೆ ಕೇಳೋಣ-ಕೇಳಿಸೋಣ!
"ತಾಭ್ಯಃ ತೇಭ್ಯಃ ಸಂಪ್ರದದೇ"

ಆರ್.ಎಂ.ಶಮ೯., ಮಂಗಳುರು.

0 comments:

Post a Comment