ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ಹೂಡಿಕೆ ಮಾಡುವುದು ಈಗಿನ ಪ್ಯಾಷನ್. ಪ್ರತಿಯೊಬ್ಬನು ಹೂಡಿಕೆಯ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಾನೆ. ಹೂಡಿಕೆ ಮಾಡುವುದು ಅದಕ್ಕೆ ತಕ್ಕಂತೆ ಲಾಭ ನೀರಿಕ್ಷಿಸುವುದು ಸಹಜ. ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಹೂಡಿಕೆ ಎಂದರೆ ಕೇವಲ ಷೇರು ಅಥವಾ ವ್ಯವಹಾರಗಳಿಗೆ ಮಾತ್ರ ಅಲ್ಲ ಅದರ ಜೊತೆಗೆ ಕಮಾಡಿಟಿ, ಪೋರೆಕ್ಸ್, ಕಿಸಾನ್ ಪತ್ರ, ಬಾಂಡ್, ಡಿಬೆಂಚರ್, ಗೋಲ್ಡ್, ಪೋಸ್ಟ್ ಅಸೀಸ್ ಸ್ಕೀಮ್ ಹಾಗೂ ಇನ್ನೀತರ ಸೆಕ್ಯೂರಿಟೀಸ್ ಗಳಲ್ಲಿ ಹತ್ತು ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಾರೆ.


ಹೂಡಿಕೆಗೆ ಒಂದು ಮಹತ್ವದ ಸ್ಥಾನವಿದೆ. ಹೆಚ್ಚಿನ ಜನರು, ಶ್ರೀಮಂತರು, ಸಾಮಾನ್ಯರು ತಮ್ಮ ಮುಂದಿನ ಭವಿಷ್ಯಕ್ಕೆ ಹೂಡಿಕೆಯ ಲಾಭ ನಿರೀಕ್ಷಿಸುತ್ತಾರೆ. ಹೂಡಿಕೆ ಮಾಡಿದವನಿಗೆ ಎಲ್ಲರಿಗೂ ಲಾಭ ಬರಬೇಕೆಂದು ಯಾವುದೇ ಕಾನೂನು ಇಲ್ಲ. ಇಲ್ಲಿ ಹೂಡಿಕೆ ಮಾಡುವವನು ಸರಿಯಾದ ಕ್ಷೇತ್ರದಲ್ಲಿ ಹೂಡಿಕೆಯನ್ನು ಮಾಡಬೇಕು. ಹಾಗೆಯೇ ಹೂಡಿಕೆದಾರನ ರಿಸ್ಕ್ ಹಾಗೂ ಅದೃಷ್ಟವೂ ಬಹಳ ಮುಖ್ಯ. ಹೂಡಿಕೆದಾರನು ಹೂಡಿಕೆಯ ಮುನ್ನ ಈ ಕೆಳಗಿನ ನಿಮ್ಮ ರಕ್ಷಣೆಯ ಕ್ರಮಗಳನ್ನು ಹಿಂಬಾಲಿಸುವುದು ಉತ್ತಮ.

ಹೀಗೆ ಮಾಡಿ :
1. ಹೂಡಿಕೆ ವ್ಯವಹರಿಸುವ ಮುನ್ನ ಮಧ್ಯವರ್ತಿ / ಸಹಮಧ್ಯವರ್ತಿಯ ಆಯ್ಕೆ ಮಾಡಿಕೊಳ್ಳಿ.
2. ಪ್ರತಿಯೊಂದು ವ್ಯವಹಾರದ ಮುನ್ನಮಧ್ಯವರ್ತಿ / ಸಹಮಧ್ಯವರ್ತಿ ಸಬ್ ರೆಜಿಸ್ಟರ್ ಬ್ರೋಕರ್ ಆಗಿದ್ದಾನೆಯೇ ತಿಳಿದುಕೊಳ್ಳಿ.
3. ಪ್ರತಿ ಬಾರಿಯೂ ನೀವು ವ್ಯವಹರಿಸುವಾಗ ನಿಮಗೆ ಬೇಕಾದ ಅತ್ಯಮೂಲ್ಯ ದಾಖಲೆಗಳನ್ನು ಪಡೆದುಕೊಳ್ಳಿ.
4. ಹೂಡಿಕೆ ಮಾಡುವಾಗ ಮಧ್ಯವರ್ತಿಗಳ ಸೂಚನೆಯನ್ನು ಸರಿಯಾಗಿ ಪಾಲಿಸಿರಿ.
5. ಹೂಡಿಕೆ ಒಪ್ಪಂದದ ಮುನ್ನ ಒಪ್ಪಂದದ ಪತ್ರದಲ್ಲಿರುವ ಸೂಚನೆಗಳನ್ನು ಓದಿಕೊಳ್ಳಿರಿ.
6. ಬ್ರೋಕರ್ ನಂ. ಹಾಗೂ ಅವನ ವಿಳಾಸ ಹಾಗೂ ಅವನ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳಿ.
7. ಹೂಡಿಕೆಯ ಪ್ರಮುಖ ಪತ್ರಗಳು ಅದಕ್ಕೆ ಸಂಬಂಧಪಟ್ಟ ಕಂಪನಿಗೆ ಸರಿಯಾಗಿ ತಲುಪಿದೆಯೇ ಎಂದು ಖಾತ್ರಿಪಡಿಸಿಕೊಳ್ಳಿ.
8. ಹೂಡಿಕೆಯ ಪತ್ರ ಅಥವಾ ಬಾಂಡ್ಗಳನ್ನು ನೇರವಾಗಿ ಕಂಪನಿಯಿಂದಲೇ ಪಡೆದುಕೊಳ್ಳಿ.
9. ನೀವು ಹೂಡಿಕೆ ಮಾಡುವ ಕಂಪನಿಯ ಬಗ್ಗೆ ತಿಳಿದುಕೊಂಡಿದ್ದರೇ ಉತ್ತಮ ಹಾಗೂ ಷೇರುದಾರರಿಗೆ ಹೇಗೆ ಡಿವಿಡೆಂಟ್ ಹಿಂದಿರುಗಿಸುತ್ತಿದೆ ಎಂದು ತಿಳಿದುಕೊಳ್ಳಿ.
10. ವ್ಯವಹಾರ ಖಾತೆ ಹಾಗೂ ಡಿಮ್ಯಾಟ್ ಖಾತೆಯ ಪ್ರತಿಯೊಂದು ವ್ಯವಹಾರದ ಪ್ರತಿಯನ್ನು ತಪ್ಪದೇ ಪಡೆದುಕೊಳ್ಳಿ.

ಇದನ್ನು ಮಾಡಬೇಡಿ :
1. ಹೂಡಿಕೆ ಮಾಡುವಾಗ ನಾನ್ ರಿಜಿಸ್ಟರ್ಡ್ ಮಧ್ಯವರ್ತಿ / ಸಹಮಧ್ಯವರ್ತಿಯ ಜೊತೆ ವ್ಯವಹರಿಸಬೇಡಿ.
2. ನಿಮ್ಮ ಹೂಡಿಕೆಯ ಪ್ರಮುಖ ಪತ್ರಗಳನ್ನು ತೆಗೆದುಕೊಳ್ಳಿ. ಅದರ ಬಗ್ಗೆ ಅಸಡ್ಡೆ ತೋರಿಸಬೇಡಿ.
3. ಹೆಚ್ಚು ಲಾಭ ಹಿಂದಿರುಗಿಸುವ ಮಾತಿಗೆ ಮರುಳಾಗಬೇಡಿ.
4. ಯಾವುದೇ ಸ್ವಂತ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ.
5. ಹೂಡಿಕೆಯ ಬಗ್ಗೆ ಯಾವುದೇ ಮಾಹಿತಿ ಬೇಕಾದಲ್ಲಿ ಹಿಂಜರಿಕೆ ಬೇಡ.
6. ತಪ್ಪು ಮಾಹಿತಿಗಳನ್ನು ನೀಡಿ ಸರಕಾರಕ್ಕೆ ವಂಚಿಸುತ್ತಿರುವ ಕಂಪನಿಗಳ ಮೇಲೆ ಹೂಡಿಕೆ ಮಾಡಲು ಹೋಗಬೇಡಿ. ಇದು ನಾನ್-ಸೆಕ್ಯುರಿಟಿಸ್.
ಈ ಮೇಲ್ಕಂಡ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಮಧ್ಯವರ್ತಿ / ಸಹಮಧ್ಯವರ್ತಿಗಳ ನಡುವೆ ವ್ಯವಹಾರ ನಡೆಸಿ ಆದರೆ ಹೂಡಿಕೆ ಮಾಡುವ ಮುನ್ನ ಮುಂದೆ ಬರುವ ರಿಸ್ಕ್ಗಳನ್ನು ತೆಗೆದುಕೊಳ್ಳಲು ತಯಾರಾಗಿರಿ.

- ಆದಿತ್ಯ ವಿ.ಎಸ್.ತೀರ್ಥಹಳ್ಳಿ.

0 comments:

Post a Comment