ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ದೈನಂದಿನ ಕಾದಂಬರಿ : ಭಾಗ - 14

ನಿಖಿಲ್ ಎಂಟರ್ಪ್ರೈಸಸ್ನ ಉನ್ನತಿಗಾಗಿ ಹಗಲಿರುಳು ಶ್ರಮಿಸುವ ಅವಳ ಅಭಿಪ್ರಾಯ ಸ್ಪಷ್ಟವಾಗಿ ನಿಖಿಲ್ಗೆ ತಿಳಿಸುವುದು ಬೇಕಿತ್ತು.
ಆ ಮನೆಯಿಂದ ಬರುವ ಆದಾಯವನ್ನು ಬಿಸಿನೆಸ್ ಪರ್ಪಸ್ಗೋಸ್ಕರ ಇನ್ವೆಸ್ಟ್ ಮಾಡುವ ಅಗತ್ಯವಿಲ್ಲ. ಯಾಕೆಂದರೆ ನಿಖಿಲ್ ಎಂಟರ್ಪ್ರೈಸಸ್ ಈಗಾಗಲೇ ಲಾಭವನ್ನು ಗಳಿಸುತ್ತಿದೆ. ಅದಲ್ಲದೆ ಹೌಸ್ ಪ್ರಾಪರ್ಟಿಯಿಂದ ಬರುವ ಆದಾಯ ಯಾವತ್ತಿದ್ದರೂ ಅದು ಟ್ಯಾಕ್ಸೆಬಲ್. ಅದಕ್ಕಿಂತಲೂ ಮುಖ್ಯವಾದುದು ಆ ಮನೆಯನ್ನು ವಾಸದ ಮನೆಯಾಗಿ ಮಾಡಿಕೊಂಡರೆ ಅದಕ್ಕೆ ತೆಗೆದ ಲೋನ್ ಮತ್ತು ಅದರ ಮೇಲಿನ ಬಡ್ಡಿ ಎರಡನ್ನೂ ತೆಗೆದುಕೊಂಡು ಟ್ಯಾಕ್ಸ್ ಸೇವ್ ಮಾಡಬಹುದೆನ್ನುವುದು ನನ್ನ ಅಭಿಪ್ರಾಯ.ವ್ಯವಹಾರದ ಬಗ್ಗೆ ತುಂಬಾ ತಿಳಿದವಳ ಮಾತಿಗೆ ಮೆಚ್ಚುಗೆ ಸೂಚಿಸಿದ.
ಹಾಗಾದರೆ ನಮ್ಮ ಆಫೀಸನ್ನು ಬೆಂಗಳೂರಿಗೆ ವರ್ಗಾಯಿಸುವುದು ಸರಿಯಲ್ಲವೆ?
ಇಲ್ಲ, ಅದರಿಂದ ಇನ್ನಷ್ಟು ಜಟಿಲ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆಫೀಸ್ ಪ್ರಿಮೈಸಸ್ ಅನ್ನು ಆ ಮನೆಯಲ್ಲಿ ಮಾಡುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಅಲ್ಲಿ ಗಿರಾಕಿಗಳು ಬಂದು ಹೋಗುವ ಹಾಗಿಲ್ಲ. ಬರೀ ರೆಸಿಡೆನ್ಸಿಯಲ್ ಏರಿಯಾ ಅದು. ಅದರ ಬದಲು ನಿಮ್ಮ ತಂದೆ ತಾಯಿಯರನ್ನು ಆ ಮನೆಯಲ್ಲಿರುಸುವುದು ಒಳ್ಳೆಯದಲ್ಲವೆ?

ಈಗಿರೋ ಮನೆಯಿಂದ ಅವರಿಗೇನು ತೊಂದರೆಯಾಗಿಲ್ಲ. ಅದನ್ನು ಬಿಟ್ಟು ಬೆಂಗಳೂರಿಗೆ ಹೋಗುವುದಕ್ಕೆ ಅವರುಗಳು ಲೈಕ್ ಮಾಡೋದಿಲ್ಲ ತನ್ನ ತಂದೆಯ ಬಗ್ಗೆ ಹೆಚ್ಚಾಗಿ ತಿಳಿದಿದ್ದ ಅವನೆಂದಾಗ ಮನಸ್ವಿತಾ ಒಂದು ಕ್ಷಣ ಮೌನವಾಗಿ ಕುಳಿತಳು.
ಈಗ ಅಷ್ಟು ಆತುರವಾಗಿ ಆ ಮನೆಯನ್ನು ಖರೀದಿಸಿರುವ ಹಿಂದಿನ ಉದ್ದೇಶವಾದರೂ ಏನು? ಅಷ್ಟರವರೆಗೂ ಮೌನವಾಗಿದ್ದವಳು ಕೇಳಿದ ಪ್ರಶ್ನೆ ಅನೀರೀಕ್ಷಿತವಾಗಿತ್ತು.

ಮೊದಲನೆಯದಾಗಿ ಅದು ನಮ್ಮ ಫ್ಯಾಮಿಲಿ ಪ್ರೆಂಡ್ ಆಗಿರೋ ದೇಶಭಕ್ತ ಆತ್ಮರಾಮ್ಗೆ ಸಂಬಂಧಿಸಿದ್ದು ಅನ್ನೊ ಕಾರಣ. ಎರಡನೆಯದಾಗಿ ಅದು ಮುಂದೆ ನಮಗೆ ಉಪಯೋಗಕ್ಕೆ ಬರಬಹುದೆನ್ನುವ ಮುಂದಾಲೋಚನೆ.ತಟ್ಟನೆ ಅವನ ಕಡೆಗೆ ನೋಟ ಹರಿಸಿದಳು. ಅವನ ಮಾತು ಕೇಳಿದ ಮೇಲೆ ಗೊಂದಲವಿತ್ತು. ಅವನ ಮುಖದಲ್ಲಿ ಒಂದು ತೆಳು ಮಂದಹಾಸವಿದ್ದು ಕ್ಷಣದಲ್ಲಿ ಮರೆಯಾಯಿತು. ಅವಳದ್ದು ಅದೇ ಮುಗ್ಧತೆಯ ನೋಟ.
ತುಂಬಾ ಒಗಟಾಗಿದೆ. ನಿಮ್ಮ ದೂರಾಲೋಚನೆ ಒಳ್ಳೆಯದೆ... ಆದರೆ ನೀವು ಹೇಳಿರೋ ಮಾತು ಮತ್ತೇನನ್ನೊ ಸೂಚಿಸುತ್ತೆ. ಅದನ್ನು ಬಿಡಿಸಿ ಹೇಳಬಹುದೆ?

ಗಂಭೀರವಾಗಿಯೇ ಇತ್ತು ಮುಖ. ಕೈಗಳೆರಡನ್ನು ಮುಖದ ನೇರಕ್ಕೆ ಹಿಡಿದು ಅವಳ ಮುಗ್ಧತೆಯನ್ನು ಅಳೆಯುವಂತೆ ನೋಡಿದ. ನೇರವಾಗಿ ವಿಷಯವನ್ನು ಪ್ರಸ್ತಾಪಿಸಿಬಿಡಲೇ ಅನಿಸಿದರೂ ಅದನ್ನು ಹತ್ತಿಕ್ಕಿಕೊಂಡ.
ಸರಿ, ಅದು ಹಾಗಿರಲಿ. ಆ ವಿಷಯದಲ್ಲಿ ನನಗೂ ಗೊಂದಲವಿದೆ. ಮುಂದೆ ಅಂತಹ ಸಂದರ್ಭ ಬಂದಾಗ ನಾನಾಗಿಯೇ ನಿಮಗೆ ತಿಳಿಸುತ್ತೇನೆ. ಆಶುತೋಶ್ ಕೂಡ ಆ ದೃಷ್ಟಿಯಿಂದಲೇ ಬೆಲೆ ನಿರ್ಧರಿಸುವ ಹಕ್ಕನ್ನು ನಿಮಗೆ ಕೊಟ್ಟಿರೋನು
ಮನಸ್ವಿತಾ ಬೆಪ್ಪಾಗಿ ಕುಳಿತಳು.

ನಿಖಿಲ್ಗೆ ಎದುರಾಗಿ ಮಾತನಾಡುವುದು ಕೇವಲ ವ್ಯವಹಾರಕ್ಕೆ ಇಳಿದಾಗ ಮಾತ್ರ. ಹೀಗೆ ವೈಯಕ್ತಿಕವಾಗಿ ಮಾತನಾಡುವಾಗ ಪ್ರತಿಕ್ರಿಯಿಸದೆ ಸುಮ್ಮನಿರುತ್ತಿರುವುದೇ ಹೆಚ್ಚು.
ಅಶುತೋಶ್ ಬಗ್ಗೆ ಒಳ್ಳೆಯ ಅಭಿಪ್ರಾಯವಿತ್ತು. ಮಿಲಿಟರಿಯೆನ್ನುವ ದೇಶಸೇವೆಗೆ ಟೊಂಕ ಕಟ್ಟಿ ನಿಂತವನ ಮೇಲೆ ಅಭಿಮಾನವೂ ಮೂಡಿತ್ತು. ದೇಶದ ಪ್ರಜೆಗಳೇ ತನ್ನ ಬಂಧುಗಳೆನ್ನುವ ವಿಶಾಲ ಹೃದಯಿ ಅವನು. ಅದಕ್ಕಾಗಿಯೇ ಕುಟುಂಬ ಸಂಬಂಧವೆನ್ನುವ ಸಣ್ಣ ಪರಿಧಿಯನ್ನೂ ದಾಟಿ, ಜೀವನರಾಮರ ಮಾತನ್ನು ಮೀರಿ ದೇಶ ಸೇವೆಗೆ ತೊಡಗಿಸಿಕೊಂಡಿದ್ದು.

ಅವನ ತಂದೆಯ ಏಕೈಕ ಆಸ್ತಿಯಾಗಿದ್ದ ಆ ಬೆಂಗಳೂರಿನ ಮನೆಯನ್ನು ಮಾರಾಟ ಮಾಡುವಾಗಲೂ ಅದಕ್ಕಾಗಿಯೇ ಬೆಲೆ ನಿಗಧಿಪಡಿಸಿದ್ದರೂ ಕೊನೆಗೆ ಸೋತು ಬೆಲೆ ಕಟ್ಟಲಾಗದ ಮನೆಯದು ನೀವೇ ನಿರ್ಧರಿಸೆಂದು ಸೋತು ನುಡಿದಿದ್ದು. ಆಗ ಅವನ ಕಣ್ಣುಗಳಲ್ಲಿದ್ದ ಹೊಳಪು. ಮನೆಯನ್ನೆಲ್ಲಾ ಕೊನೆಯ ಬಾರಿಗೆಂಬಂತೆ ಕಣ್ತುಂಬಿಕೊಂಡ ದೃಶ್ಯ ಅಚ್ಚಳಿಯದೆ ಮನಸ್ವಿತಾಳ ಎದೆಯಲ್ಲಿ ಮಡುಗಟ್ಟಿತ್ತು.
ಎಲ್ಲವನ್ನೂ ತೊರೆದು ಒಬ್ಬ ಸನ್ಯಾಸಿಯಂತೆ ಮತ್ತು ಎಲ್ಲಾ ಮಮಕಾರಗಳನ್ನು ಬಿಟ್ಟು ಅಂತೊಂದು ಸೇವೆಗೆ ನಿಂತ ಅವನ ಮೇಲೆ ಅವಳಗರಿವಿಲ್ಲದಂತೆ ಗೌರವ ತುಂಬಿತು.

- ಅನು ಬೆಳ್ಳೆ.

0 comments:

Post a Comment