ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:35 PM

ಪುಟ್ಟು

Posted by ekanasu

ಇಂದಿನ ರುಚಿ

ಕೇರಳ,ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ತಯಾರಿಸುವ ರುಚಿಕರ ತಿಂಡಿ.


ಬೇಕಾಗುವ ಸಾಮಾಗ್ರಿ:1/2 ಕೆ.ಜಿ. ಬೆಳ್ತಿಗೆ ಅಕ್ಕಿ,1 ಕಡಿ ಕಾಯಿ ತುರಿ,ಉಪ್ಪು.

ಮಾಡುವ ವಿಧಾನ:ಉಪ್ಪಿಗೆ ಸ್ವಲ್ಪವೇ ನೀರು ಸೇರಿಸಿ ಅಕ್ಕಿ ಹುಡಿಯನ್ನು ಉದುರು ಉದುರಾಗಿ ಬೆರೆಸಿಡಿ.ಮತ್ತೆ ಪುಟ್ಟು ಮಾಡಲಿರುವ ಅಂಡೆ(ಕೊಳವೆ ಪಾತ್ರೆ)ಯೊಳಗೆ 1-2 ಚಮಚೆ ಕಾಯಿ ತುರಿ ಹಾಕಿ ಅದರ ಮೇಲೆ ಸ್ವಲ್ಪ ಬೆರೆಸಿಟ್ಟ ಅಕ್ಕಿ ತರಿಯನ್ನು ತುಂಬಿಸಿ.ಹೀಗೆ ಕೊಳವೆ ತುಂಬುವವರೆಗೂ ಕಾಯಿ ತುರಿ ಮತ್ತು ಅಕ್ಕಿ ತರಿಯನ್ನು ತುಂಬಿಸಿ ಅದನ್ನು ಹಬೆಯಲ್ಲಿ ಬೇಯಿಸಿ.ಐದೇ ನಿಮಿಷಗಳಲ್ಲಿ ಬಿಸಿ ಬಿಸಿ ರುಚಿಕರ ಪುಟ್ಟು ರೆಡಿ.ಇದನ್ನು ಕಡಲೆ ಗಸಿಯೊಂದಿಗೆ ತಿಂದರೆ ಬಲು ರುಚಿ.

ಕಡಲೆ ಗಸಿ
ಬೇಕಾಗುವ ಸಾಮಾಗ್ರಿ:1/4 ಕೆ.ಜಿ ಕಡಲೆ ಕಾಳು,3-4 ನೀರುಳ್ಳಿ,2 ಹಸಿ ಮೆಣಸು,ಒಣ ಮೆಣಸು 8,1/4 ಚಮಚ ಜೀರಿಗೆ,1/2 ಚಮಚ ಕೊತ್ತಂಬರಿ,2 ಕಪ್ ಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು,ಬೆಲ್ಲ.
ಮಾಡುವ ವಿಧಾನ:ಕಡಲೆ ಕಾಳನ್ನು 1-2 ಗಂಟೆ ನೆನೆ ಹಾಕಿ ನಂತರ ನೀರುಳ್ಳಿ,ಹಸಿಮೆಣಸು ಒಟ್ಟಿಗೆ ಬೇಯಿಸಿಡಿ.ಒಣ ಮೆಣಸು,ಕೊತ್ತಂಬರಿ,ಜೀರಿಗೆಯನ್ನು ಹುರಿದು ಕಾಯಿಯೊಂದಿಗೆ ರುಬ್ಬಿ ಬೇಯಿಸಿದ ಕಡಲೆಗೆ ಸೇರಿಸಿ,ರುಚಿಗೆ ತಕ್ಕಷ್ಟು ಉಪ್ಪು,ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ ಒಗ್ಗರಣೆ ಕೊಡಿ.

- ಸುಮತಿ ಕೆ.ಸಿ.ಭಟ್, ಆದೂರು.

0 comments:

Post a Comment