ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಅನಿರೀಕ್ಷಿತ ಅತಿಥಿಗಳ ಆಗಮನವೇ? ಪಾಯಸ ಮಾಡಲು ಏನೂ ಇಲ್ಲವೆಂಬ ಆತಂಕವೇ ... ಚಿಂತೆ ಬಿಡಿ. ಮನೆಯಲ್ಲಿ ಸದಾ ಇರುವ ಅಕ್ಕಿಯಿಂದ ಮಾಡಬಹುದಾದ ವಿವಿಧ ಬಗೆಯ ಪಾಯಸಗಳು ಇಲ್ಲಿವೆ.!ನಾಲಿಗೆಗೆ ರುಚಿಕರ...ಆರೋಗ್ಯಕ್ಕೆ ಹಿತಕರ...!

ನೀರುದೋಸೆ ಪಾಯಸ
ಬೇಕಾಗುವ ಸಾಮಾಗ್ರಿಗಳು : ನೀರುದೋಸೆ - 5, ಬೆಲ್ಲ - ಕಾಲು ಕಿಲೋ, ತೆಂಗಿನ ಕಡಿ - 1, ಏಲಕ್ಕಿಪುಡಿ - ಅರ್ಧ ಚಮಚ.
ಮಾಡುವ ವಿಧಾನ : ಬೆಳ್ತಿಗೆ ಅಕ್ಕಿಗೆ ಒಂದು ಮುಷ್ಟಿಯಷ್ಟು, ಕುಚ್ಚಲು ಅಕ್ಕಿಸೇರಿಸಿ ನೀರುದೋಸೆ ಮಾಡಿಟ್ಟುಕೊಳ್ಳಿ. ತೆಂಗಿನ ತುರಿ ರುಬ್ಬಿ ಹಾಲು ತೆಗೆದು , ದಪ್ಪ ಹಾಲನ್ನು ಉಳಿಸಿಕೊಂಡು ನಂತರದ ಹಾಲಿನಲ್ಲಿ ಬೆಲ್ಲ ಕರಗಲು ಉರಿಯಲ್ಲಿಡಿ. ಕರಗಿದ ಮೇಲೆ ದೋಸೆಯನ್ನು ಚೂರು ಚೂರು ಮಾಡಿ ಹಾಕಿ. ದಪ್ಪ ಹಾಲು ಹಾಗೂ ಏಲಕ್ಕಿ ಪುಡಿ ಹಾಕಿ ತುಸು ಕುದಿಸಿ ಕೆಳಗಿಡಿ. ಪಾಯಸ ರೆಡಿ.

ರೊಟ್ಟಿ ಪಾಯಸ
ಬೇಕಾಗುವ ಸಾಮಾಗ್ರಿಗಳು : ಬೆಳ್ತಿಗೆ ಅಕ್ಕಿ - ಎರಡು ಕಪ್, ಕುಚ್ಚಲಕ್ಕಿ - ಅರ್ಧ ಕಪ್, ಬೆಲ್ಲ - ಕಾಲು ಕೆ.ಜಿ, ತೆಂಗಿನ ಕಾಯಿ - 1ಗಡಿ, ಏಲಕ್ಕಿಪುಡಿ - ಅರ್ಧ ಚಮಚ.
ಮಾಡುವ ವಿಧಾನ : ನೆನೆಯಿಸಿದ ಎರಡೂ ರೀತಿಯ ಅಕ್ಕಿಯನ್ನು ನುಣ್ಣಗೆ ಗಟ್ಟಿಯಾಗಿ ರುಬ್ಬಿ ಉದ್ದವಾದ ಬಾಳೆಲೆ ಸೀಳಿನಲ್ಲಿ ರೊಟ್ಟಿ ತಟ್ಟಿ. ಅಗಲ ಬಾಯಿಯ ಪಾತ್ರೆಯಲ್ಲಿ ನೀರು ಕುದಿಯಲು ಇಡಿ. ರೊಟ್ಟಿಯ ಬಾಳೆಲೆಯನ್ನು ಚಾಪೆ ಸುತ್ತುವಂತೆ ಸುತ್ತಿ ಕುದಿಯುವ ನೀರಿಗೆ ಒಂದೊಂದಾಗಿ ಹಾಕಿ. ಎರಡು ನಿಮಿಷದ ನಂತರ ಬಾಳೆಲೆಯನ್ನು ಮೆಲ್ಲನೆ ತೆಗೆಯಿರಿ. ತುಸು ಹೊತ್ತಿನಲ್ಲಿ ಕೆಳಗಿಳಿಸಿ ನೀರು ಸೋಸಿ. ಈಗ ರೊಟ್ಟಿ ಬೆಂದಿರುತ್ತದೆ. ತೆಂಗಿನ ಕಾಯಿಯ ತೆಳ್ಳಗಿನ ಹಾಲಿನಲ್ಲಿ ಬೆಲ್ಲ ಕರಗಲು ಉರಿಯ ಮೇಲಿಡಿ. ಕರಗಿದ ನಂತರ ರೊಟ್ಟಿಯನ್ನು ಹಾಕಿ ಒಂದೆರಡು ಸಲ ಸೌಟಿನಿಂದ ಮಗುಚಿ. ನಂತರ ದಪ್ಪ ಹಾಲು ಹಾಗೂ ಏಲಕ್ಕಿಪುಡಿ ಹಾಕಿ ಕೆಳಗಿಳಿಸಿ. ರೊಟ್ಟಿಪಾಯಸ ರುಚಿಯೋ ರುಚಿ.

ಸುಮತಿ ಕೆ.ಸಿ.ಭಟ್ ಆದೂರು.

0 comments:

Post a Comment